ಬಡಾ ಘಾಗರ, ಕೆಯೊಂಝಾರ

ಜನಪ್ರಿಯ ಬಡಾ ಘಾಗರ ಜಲಪಾತವು ಸಂಘಗರ ಜಲಪಾತದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ರಾಜ್ಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯೂ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಲು ತೆರಳುವ ಕಾರಣ ಒಡಿಸ್ಸಾ ರಾಜ್ಯದ ಹೆಮ್ಮೆಯಲ್ಲಿ ಒಂದಾಗಿದೆ. ಹೊಳೆ ಕೆಳಗೆ ಹರಿಯುವ ಜಾಗದಲ್ಲಿ ರಾಜ್ಯ ಸರ್ಕಾರವು ಒಂದು ಅಣೆಕಟ್ಟನ್ನು ನಿರ್ಮಿಸಿದೆ. ಮಚ್ಛ ಜನ್ಸದನಾ ನದಿ ಇದರೊಂದಿಗೆ ಸಂಧಿಸುವ ಕಾರಣ ಜಲಪಾತವು ಚಿರಸ್ಥಾಯಿಯಾಗಿದೆ.

ನದಿಯು ಜಲಪಾತದಿಂದ 60 ಮೀಟರ್ ಎತ್ತರದಿಂದ ಒಂದೇ ಇಳಿಕೆಯಲ್ಲಿ ಹರಿಯುತ್ತದೆ. ಜಲಪಾತದಲ್ಲಿ ಹರಿಯುವ ನೀರಿನ ಕೊರತೆಯಿದೆ ಎನ್ನುವ ಗಾಳಿಸುದ್ದಿಯಿತ್ತು. ಆದರೆ ರಾಜ್ಯ ಸರ್ಕಾರವು ಇದನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಇದರಿಂದ ಕಳೆದುಹೋದ ಜನಪ್ರಿಯತೆ ಮರಳಿದೆ. ಸೂರ್ಯನ ಪ್ರಖರ ಕಿರಣಗಳಿಂದ ನೀರಿನ ಹಿಂಗುವಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ ಜಲಪಾತ ಉಳಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Please Wait while comments are loading...