ಮಘ್ನೊವ ಡೌಲ್ ಪಿಚೊಲ ನದಿಯ ಪೂರ್ವಕ್ಕೆ ಇರುವ ಮಘ್ನೋವ ಬೀಲ್‍ನ ದಂಡೆಯಲ್ಲಿ ನೆಲೆಗೊಂಡಿರುವ ಗುಡಿಯಾಗಿದೆ. ಇದನ್ನು ಫುಲ್‍ಬರಿ ಡೌಲ್ ಎಂದು ಸಹ ಕರೆಯುತ್ತಾರೆ. ಮಘ್ನೊವ ಡೌಲ್ ತನ್ನದೇ ಆದ ಇತಿಹಾಸದಿಂದಾಗಿ ಕಾಜಿರಂಗಾಕ್ಕೆ ಸಮೀಪದ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.
ಹಿಂದಿನ ಕಾಲದಲ್ಲಿ ಮಘ್ನೋವ ಡೌಲ್ ಅತ್ಯಂತ ಪವಿತ್ರವಾದ ಸ್ಥಳವಾಗಿತ್ತು. ಆಗ ಇಲ್ಲಿ ಕಾಳಿಕಾ ದೇವಿಯನ್ನು ಪೂಜಿಸಲಾಗುತ್ತಿತ್ತಂತೆ. ಆನಂತರ ಮಾನ್‍ರ ದಾಳಿಯ ಸಂದರ್ಭದಲ್ಲಿ ಇಲ್ಲಿನ ದೇವಿಯ ಮೂರ್ತಿಯನ್ನು ಅಡಗಿಸಿ ಇಡಲಾಯಿತಂತೆ. ಆಮೇಲೆ ಈ ದೇವಿಯ ಮೂರ್ತಿಯನ್ನು ಮರಳಿ ಡೌಲ್‍ಗೆ ತರದೆ, ಡಿಯೊಟಲದಲ್ಲಿಯೇ ಪ್ರತಿಷ್ಟಾಪಿಸಲಾಯಿತಂತೆ.
ಮಘ್ನೊವ ಡೌಲ್‍ನ ಗೋಪುರವು ಸುಮಾರು 75 ಅಡಿ ಎತ್ತರವಿದ್ದು, ಮೂರ್ತಿಯನ್ನು ಹೊಂದಿರುವ ಬುಲನಿ ಘರ್ ಅನ್ನು ಹೊಂದಿದೆ. ಡೌಲ್‍ನ ಸುತ್ತ ಐದು ಅಡಿ ಎತ್ತರದ ಗೋಡೆಯನ್ನು ನಿರ್ಮಿಸಲಾಗಿದೆ. ಇದು ಈ ಡೌಲ್‍ಗೆ ಎಲ್ಲೆಕಟ್ಟಿನಂತೆ ಕಾರ್ಯ ನಿರ್ವಹಿಸುತ್ತಿದೆ. ಒಂದಾನೊಂದು ಕಾಲದಲ್ಲಿ ಡೌಲ್‍ನಲ್ಲಿ ಹಲವಾರು ಬೆಲೆಬಾಳುವ ಶಿಲ್ಪಗಳನ್ನು ಇಡಲಾಗಿತ್ತಂತೆ. ಆದರೆ ಇಂದು ಅವುಗಳನ್ನು ನಾವು ಕಾಣಲು ಸಾಧ್ಯವಿಲ್ಲ. ನಂಬಿಕೆಗಳ ಪ್ರಕಾರ ಸ್ಥಳೀಯ ಜನರು ಅದನ್ನು ಕದ್ದೊಯ್ದಿದ್ದರಂತೆ.


Click it and Unblock the Notifications