Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ದುರ್ಗಾ ಭವಾನಿ ದೇವಾಲಯ

ದುರ್ಗಾ ಭವಾನಿ ದೇವಾಲಯ, ಕರ್ನಾಲ್

1

ದುರ್ಗಾ ಮಾತೆ ಅಥವಾ ದುರ್ಗಾ ಭವಾನಿಯು ಹಿಂದೂಗಳ ಆರಾಧ್ಯ ದೇವತೆ. ಈಕೆಯನ್ನು ಈಕೆಯ ಭಕ್ತರು ತಮ್ಮ ಸಾಮಾಜಿಕ, ಸಾಂಪ್ರದಾಯಿಕ ಹಿನ್ನಲೆಗಳಿಗನುಸಾರವಾಗಿ, ಅವರವರ ಭಾವ ಮತ್ತು ಭಕ್ತಿಗಳ ಪ್ರಕಾರವಾಗಿ ಪೂಜಿಸುತ್ತ ಬಂದಿರುತ್ತಾರೆ. ಈಕೆಯು ವಿಶ್ವದಲ್ಲಿನ ಎಲ್ಲಾ ಮಾನವರ ತಾಯಿಯಂತಷ್ಟೇ ಅಲ್ಲದೆ ದೇವಾನುದೇವತೆಗಳ ಮಾತೆಯಾಗಿ ಸಹ ಪೂಜಿಸಲಾಗುತ್ತಿದೆ.

ಈಕೆಯು ಸಾಕ್ಷಾತ್ ಪರಮಶಿವನ ಸತಿಯಷ್ಟೇ ಅಲ್ಲದೆ ಆತನ ( ಶಿವನ) ಕಷ್ಟಗಳನ್ನು ಸಹ ನಿವಾರಿಸುವ ಆದಿಶಕ್ತಿಯಾಗಿ ಗುರುತಿಸಲ್ಪಟ್ಟಿದ್ದಾಳೆ. ಕೆಲವೊಮ್ಮೆ ಈಕೆ ಅಸುರ ಶಕ್ತಿಗಳನ್ನು ಸಂಹರಿಸಲು ಶಿವನಿಗೆ ಸಹಾಯ ಮಾಡಿರುವ ಘಟನೆಗಳು ನಮ್ಮ ಪುರಾಣದಲ್ಲಿ ಹಲವಾರು ಇವೆ. ಒಮ್ಮೆ ಮಹಿಷಾಸುರನು ಶಿವನಿಂದ ಒಂದು ವರವನ್ನು ಪಡೆದನು.ಅದೇನಪ್ಪ ಎಂದರೆ ಈ ರಾಕ್ಷಸನು ಯಾವುದಾದರು ಒಬ್ಬ ಮನುಷ್ಯನ ಮೇಲೆ ತನ್ನ ಕೈಯನ್ನುಇಟ್ಟರೆ ಆತ ಭಸ್ಮವಾಗಬೇಕು ಎಂಬುದು ಆ ವರದ ಉದ್ದೇಶವಾಗಿತ್ತು. ಈ ವರವನ್ನು ನೀಡಿದ ಶಿವನು ಇದರಿಂದ ಸ್ವತಃ ತಾನೇ ಇಕ್ಕಟ್ಟಿಗೆ ಸಿಲುಕಿನು. ಆಗ ದುರ್ಗಾ ಮಾತೆಯು ಒಬ್ಬ ಸುಂದರ ನರ್ತಕಿಯ ವೇಷದಲ್ಲಿ ಬಂದು ಆ ರಾಕ್ಷಸನನ್ನು ಮೋಹಗೊಳಿಸಿ, ನರ್ತಿಸುವ ಭರದಲ್ಲಿ ಅವನು ತನ್ನಕೈಯನ್ನು ತಾನೇ ತಲೆಯ ಮೇಲೆ ಇಟ್ಟುಕೊಂಡು ಭಸ್ಮವಾಗುವಂತೆ ಮಾಡಿದಳು.

ನಂಬಿಕೆಗಳ ಪ್ರಕಾರ ದುರ್ಗಾಮಾತೆಯ ತನ್ನ ಮಾತೆಯ ಬಳಿಗೆ ಪ್ರತಿ ವರ್ಷ ಒಂಬತ್ತು ದಿನ ಬಂದು ಹತ್ತನೆಯ ದಿನ ಹೊರಟು ಹೋಗುತ್ತಾಳಂತೆ. ಇದನ್ನೆ ನಾವು ನವರಾತ್ರಿ ಎಂದು ಒಂಬತ್ತು ದಿನವನ್ನು ಆಚರಿಸುತ್ತೇವೆ ಮತ್ತು ಹತ್ತನೆಯ ದಿನ ವಿಜಯ ದಶಮಿಯೆಂದು ಆಚರಿಸುತ್ತೇವೆ. ಸುಮಾರು ಸಾವಿರಕ್ಕು ಅಧಿಕ ವರ್ಷಗಳ ಹಿಂದೆ ನಿರ್ಮಾಣ ಮಾಡಲಾದ ಈ ದುರ್ಗಾ ದೇವಾಲಯವನ್ನು ಕರ್ನಾಲ್‍ನ ಬಸ್ ನಿಲ್ದಾಣದ ಬಳಿ ನಾವು ಕಾಣಬಹುದು. ಇಲ್ಲಿಗೆ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ದೇವಿಗೆ ಪೂಜೆ ಸಲ್ಲಿಸಲು ಭಕ್ತ ಸಮೂಹವು ಪ್ರತಿದಿನವು ಬರುತ್ತಿರುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri