Search
  • Follow NativePlanet
Share
ಮುಖಪುಟ » ಸ್ಥಳಗಳು» ಕಾರ್ಕಳ

ಬಾಹುಬಲಿಯ ನೆಲ - ಕಾರ್ಕಳ

15

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳ  ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣ. ಗೊಮ್ಮಟೇಶ್ವರನಿರುವ ಬೆಟ್ಟವೆಂದರೆ ಎಲ್ಲರಿಗೂ ಬೇಗನೇ ನೆನಪಿಗೆ ಬರಬಹುದು.

 

ಎಲ್ಲರೂ ನೋಡಲೇಬೇಕಾದಂತಹ ಒಂದು ಸಾಂಪ್ರದಾಯಿಕ ಸ್ಥಳ

10ನೇ ಶತಮಾನದಿಂದಲೇ ತನ್ನ ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರ್ಕಳ ಪಟ್ಟಣವು ಇಲ್ಲಿರುವ ಜೈನ್ ಪ್ರತಿಮೆಗಳು ಮತ್ತು ವಿವಿಧ ದೇವಸ್ಥಾನಗಳಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ. 10ನೇ ಶತಮಾನದಲ್ಲಿನ ರಾಜಾಡಳಿತದಲ್ಲಿ ನಿರ್ಮಿಸಲಾದ ಇಲ್ಲಿನ ಜೈನ ಬಸದಿ ಮತ್ತು ಹಲವಾರು ದೇವಸ್ಥಾನಗಳು ವಿಶ್ವ ಹೆರಿಟೇಜ್ ಸೈಟ್ ಎಂದು ಯುನೆಸ್ಕೋ ಘೋಷಿಸಿದ್ದು ರಾಜ್ಯಕ್ಕೆ ಹೆಮ್ಮೆಯ ಸಂಗತಿ.ಸುಮಾರು 18 ಐತಿಹಾಸಿಕ ಜೈನ ಬಸದಿಗಳನ್ನು ಹೊಂದಿರುವ ಕಾರ್ಕಳವು, ಇಲ್ಲಿರುವ 42  ಅಡಿ ಎತ್ತರದ ಬಾಹುಬಲಿಯ ಪ್ರತಿಮೆಯಿಂದ ಎಲ್ಲರ ಗಮನ ಸೆಳೆದಿದೆ. ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಪ್ರತಿಮೆ ಬಾಹುಬಾಲಿಯ ಎದುರಿಗಿರುವ ಬ್ರಹ್ಮದೇವ ಕಂಬವು ವಿಶಿಷ್ಟವಾಗಿ ನಿರ್ಮಿಸಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಇಲ್ಲಿನ ಅನಂತಶಯನ ಮತ್ತು ಆದಿಶಕ್ತಿ ದೇವಸ್ಥಾನಗಳು ಇಲ್ಲಿರುವ ಹಲವಾರು ಪುರಾತನ ದೇವಸ್ಥಾನಗಳಲ್ಲಿ ವಿಶಿಷ್ಟವಾದವುಗಳು.ಟೈಗರ್ ಡಾನ್ಸ್ ಎಂದೇ ವಿದೇಶಿಗರಿಂದ ಕರೆಯಿಸಿಕೊಳ್ಳುವ  ಹುಲಿವೇಷದ ನೃತ್ಯ ಮತ್ತು ಎಮ್ಮೆ ಪಂದ್ಯಗಳು ಇಲ್ಲಿನ ಜನಪ್ರಿಯ ಕ್ರೀಡೆಗಳು. ಬೆಂಗಳೂರಿನಿಂದ 380 ಕಿ.ಮೀ.ಅಂತರದಲ್ಲಿರುವ ಕಾರ್ಕಳಕ್ಕೆ ರಾಜ್ಯ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಭೇಟಿ ನೀಡಬಹುದು.

ಕಾರ್ಕಳ ಪ್ರಸಿದ್ಧವಾಗಿದೆ

ಕಾರ್ಕಳ ಹವಾಮಾನ

ಉತ್ತಮ ಸಮಯ ಕಾರ್ಕಳ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಾರ್ಕಳ

  • ರಸ್ತೆಯ ಮೂಲಕ
    ಕಾರ್ಕಳ , ರಸ್ತೆ ಮೂಲಕ ಪ್ರಮುಖ ಹತ್ತಿರದ ನಗರಗಳಿಗೆ ಸಂಪರ್ಕಿಸಲ್ಪಟ್ಟಿದೆ. ಕಾರ್ಕಳಕ್ಕೆ , ಬೆಂಗಳೂರು, ಚೆನೈ ಮತ್ತು ಹೈದರಾಬಾದ್ ನಿಂದ ಐಷಾರಾಮಿ ಮತ್ತು ಖಾಸಗಿ ಬಸ್ ಗಳು ಲಭ್ಯವಿವೆ. ಬಸ್ ಪ್ರಯಾಣವು ಸುಲಭದ, ಸಮಾಧಾನಕರ ಮತ್ತು ಮಿತವ್ಯಯದ್ದೆಂದು ಪರಿಗಣಿಸಲಾಗುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸುಮಾರು 29 ಕಿಮೀ ದೂರದಲ್ಲಿರುವ ಉಡುಪಿ ರೈಲು ನಿಲ್ದಾಣ ಕಾರ್ಕಳದ ಅತಿ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ.ಈ ರೈಲು ನಿಲ್ದಾಣವು ಪ್ರಮುಖ ಭಾರತೀಯ ನಗರ ಮತ್ತು ಪಟ್ಟಣಗಳ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ವಿಮಾನ ನಿಲ್ದಾಣ ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕಿಸುವ ಕಾರ್ಕಳದ ಹತ್ತಿರದ ವಿಮಾನ ನಿಲ್ದಾಣ. ಹಿಂದಿನ ಬಜ್ಪೆ ವಿಮಾನ ನಿಲ್ದಾಣ ಎಂದೇ ಕರೆಸಿಕೊಳ್ಳುತ್ತಿದ್ದ ನಿಲ್ದಾಣವು ಕಾರ್ಕಳ ಪಟ್ಟಣದಿಂದ 52 ಕಿಮೀ ದೂರ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun