Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಪಿಳ್ಳಯರ್ ಪಟ್ಟಿ ಕರ್ಪಗ ವಿನಾಯಕರ್ ದೇವಾಲಯ

ಪಿಳ್ಳಯರ್ ಪಟ್ಟಿ ಕರ್ಪಗ ವಿನಾಯಕರ್ ದೇವಾಲಯ, ಕಾರೈಕುಡಿ

2

ಪಿಳ್ಳಯರ್ ಪಟ್ಟಿ ಕರ್ಪಗ ವಿನಾಯಕರ್ ದೇವಾಲಯವು ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿನ ಪಿಳ್ಳಯರ್ ಪಟ್ಟಿಯಲ್ಲಿ ನೆಲೆಗೊಂಡಿದೆ. ಇದು ಈ ರಾಜ್ಯದಲ್ಲಿರುವ ಅತ್ಯಂತ ಹಳೆಯ ಗುಹಾಂತರ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಕಾರೈಕುಡಿ ಮತ್ತು ಪಡುಕೊಟ್ಟೈ ನಗರಗಳ ಮಧ್ಯೆ ನೆಲೆಸಿದೆ. ಈ ದೇವಾಲಯದ ಗೋಡೆಗಳ ಮೇಲೆ ಇರುವ ಶಾಸನಗಳಿಂದ ಈ ದೇವಾಲಯವು ಸರಿ ಸುಮಾರು ಕ್ರಿ.ಶ 1091 ರಿಂದ 1238ರ ಮಧ್ಯಭಾಗದಲ್ಲಿ ನಿರ್ಮಾಣವಾಯಿತೆಂದು ತಿಳಿದುಬರುತ್ತದೆ.

ಈ ವಿಶ್ವ ವಿಖ್ಯಾತ ಗುಹಾಂತರ ದೇವಾಲಯವು ಕಲ್ಲಿನಿಂದ ಕೆತ್ತಿದ ಹಲವಾರು ದೇವಾನುದೇವತೆಗಳ ಚಿತ್ರಗಳನ್ನು ಹೊಂದಿದೆ. ಈ ದೇವಾಲಯವನ್ನು ಗಣಪತಿಗಾಗಿ ನಿರ್ಮಿಸಲಾಗಿದೆ. ಗಣಪತಿಯೇ ಇಲ್ಲಿನ ಮುಖ್ಯದೇವರು. ಪಿಳ್ಳಯರ್ ಪಟ್ಟಿ ಗಣೇಶನನ್ನು ಬೆಟ್ಟದಲ್ಲಿದ್ದ 6 ಅಡಿ ಎತ್ತರದ ಕಲ್ಲು ಬಂಡೆಯನ್ನು ಕೆತ್ತಿ ನಿರ್ಮಿಸಲಾಗಿದೆ. ಪಾಂಡ್ಯ ರಾಜರಿಂದ ನಿರ್ಮಿಸಲ್ಪಟ್ಟ ಈ ದೇವಾಲಯದಲ್ಲಿ ಗಣಪತಿಯ ಸೊಂಡಿಲು ಸಾಮಾನ್ಯವಾಗಿಲ್ಲದೆ ಬಲಕ್ಕೆ ಇದೆ.

ಇಲ್ಲಿ ಗಣೇಶ ಚತುರ್ಥಿ ಅಥವಾ ವಿನಾಯಕ ಚತುರ್ಥಿಯನ್ನು, ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಅಸಂಖ್ಯಾತ ಭಕ್ತಾಧಿಗಳು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಹಬ್ಬವನ್ನು ಇಲ್ಲಿ ಹತ್ತು ದಿನಗಳ ಕಾಲ ಆಚರಿಸುತ್ತಾರೆ. ಇದೇ ಸಂದರ್ಭದಲ್ಲಿ ಇಲ್ಲಿ ವಿನಾಯಕನಿಗಾಗಿ ರಥಯಾತ್ರೆಯನ್ನು ಸಹ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
30 Jul,Thu
Return On
31 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
30 Jul,Thu
Check Out
31 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
30 Jul,Thu
Return On
31 Jul,Fri