ಕುಂಡ್ರಕುಡಿ ಮುರುಗನ್ ದೇವಾಲಯವು ಸುಬ್ರಹ್ಮಣ್ಯನ ದೇವಾಲಯವಾಗಿದ್ದು, ಇದು ಮದುರೈನಲ್ಲಿದೆ. ಈ ದೇವಾಲಯದಲ್ಲಿ ದೇವರ ಸಂಗಾತಿಗಳಾದ ವಲ್ಲಿ ಮತ್ತು ದೇವಯಾನಿಯರ ವಿಗ್ರಹ ಸಹ ಇದೆ. ಈ ಗುಡಿಯು ಒಂದು ಸಣ್ಣ ಗುಡ್ಡದ ಮೇಲೆ ಇದೆ.
ಕುಂಡ್ರಕುಡಿ ಮುರುಗನ್ ದೇವಾಲಯದ ವಿಶೇಷತೆಯೇನೆಂದರೆ ಇಲ್ಲಿರುವ ವಿಗ್ರಹಕ್ಕೆ ಆರು ಮುಖಗಳಿವೆ. ಏಕೆಂದರೆ ಸುಬ್ರಹ್ಮಣ್ಯನನ್ನು ಷಣ್ಮುಖ ಅಂದರೆ ಆರು ಮುಖವುಳ್ಳವನು ಎಂದು ಕರೆಯುತ್ತಾರೆ.
ನೀವು ಈ ದೇವಾಲಯಕ್ಕೆ ಹೋಗಲು ಬೆಟ್ಟ ಏರುತ್ತಿರುವಾಗ ದಾರಿ ಮಧ್ಯದಲ್ಲಿ ಗಣಪತಿಯ ದೇವಾಲಯವನ್ನು ಕಾಣಬಹುದು. ಇದು ಬೆಟ್ಟದ ಬುಡದಲ್ಲಿದೆ. ಈ ವಿನಾಯಕನ ದೇವಾಸ್ಥಾನದ ಪಕ್ಕದಲ್ಲಿಯೆ ಒಂದು ಮುರುಗನ್ ದೇವಾಲಯವಿದೆ. ಇಲ್ಲಿರುವ ಮುರುಗನ್ ದೇವರನ್ನು ಪಳನಿ ಮುರುಗನ್ ಎಂದು ಪೂಜಿಸುತ್ತಾರೆ.


Click it and Unblock the Notifications