ಆಯಿರಂ ಜನ್ನಲ್ ವೀಡು ಎಂಬುದು ಕರೈಕುಡಿಯ ಪ್ರಸಿದ್ಧ ಹೆಗ್ಗುರುತಾಗಿದೆ. "ಸಾವಿರ ಕಿಟಕಿಗಳಿರುವ ಮನೆ" ಎಂಬುದು ಇದರ ಅರ್ಥ. ನಿಜಕ್ಕೂ ಈ ಹೆಸರು ಸಾರ್ಥಕವೆನ್ನುವಂತೆ ಈ ಮನೆಯಲ್ಲಿ ಸಾವಿರ ಕಿಟಕಿಗಳಿವೆ!
ಕರೈಕುಡಿಗೆ ಬರುವ ಪ್ರವಾಸಿಗರ ವಲಯದಲ್ಲಿ ಈ ಮನೆಯು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ನೀವು ಈ ಮನೆಗೆ ಹೇಗೆ ಹೋಗಬೇಕೆಂದು ಯಾರನ್ನು ಬೇಕಾದರು ಕೇಳಿ ಸುಲಭವಾಗಿ ತಲುಪಬಹುದು. ಈ ಮನೆಯು ಅತ್ಯಂತ ವಿಶಾಲವಾಗಿದ್ದು, 20,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಈ ಮನೆಯನ್ನು 1941ರಲ್ಲಿ ನಿರ್ಮಾಣ ಮಾಡಲಾಯಿತು. ಆ ಕಾಲಕ್ಕೆ ಇದಕ್ಕೆ ತಗುಲಿದ ವೆಚ್ಚ ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳು. ಈ ಮನೆಯಲ್ಲಿ 25 ದೊಡ್ಡ ಕೋಣೆಗಳು ಮತ್ತು ಐದು ದೊಡ್ಡ ಹಜಾರಗಳು ಇವೆ. ಇದರಲ್ಲಿ 20 ಬಾಗಿಲುಗಳು ಮತ್ತು 1000 ಕಿಟಕಿಗಳು ಇವೆ.