Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು » ವಟ್ಟಕೊಟ್ಟೈ ಕೋಟೆ

ವಟ್ಟಕೊಟ್ಟೈ ಕೋಟೆ, ಕನ್ಯಾಕುಮಾರಿ

4

ಕನ್ಯಾಕುಮಾರಿಯ ಈಶಾನ್ಯ ಭಾಗದಲ್ಲಿ ಸುಮಾರು 6 ಕಿ.ಮೀ ದೂರದಲ್ಲಿ ಈ ಕೋಟೆಯಿದೆ. ಇದು 18 ನೇ ಶತಮಾನದ ಕೋಟೆಯಾಗಿದೆ ಮತ್ತು ತಿರುವಾಂಕೂರು ರಾಜವಂಶಸ್ಥರಿಂದ ನಿರ್ಮಿಸಲ್ಪಟ್ಟ ಕರಾವಳಿ ಕೋಟೆಗಳಲ್ಲಿ ಕೊನೆಯದಾಗಿದೆ.

ವಟ್ಟಕೊಟ್ಟೈ ಕೋಟೆಯ ಗೋಡೆಗಳು ಸುಮಾರು 25 ಅಡಿ ಎತ್ತರವಾಗಿವೆ ಹಾಗು ಮುಂಭಾಗದಲ್ಲಿ 29 ಅಡಿಗಳಷ್ಟು ದಪ್ಪವಾಗಿದೆ. ಡಚ್ ನೌಕಾ ಅಧಿಕಾರಿಯಾಗಿದ್ದ ಡೆ ಲನೋಯ್ ಇದನ್ನು ಕಟ್ಟಿದರು(ಅವರ ಮುಂದಾಳತ್ವದಲ್ಲಿ) ಎನ್ನಲಾಗುತ್ತದೆ.

ಕೋಟೆಯನ್ನು ಕಲ್ಲಿನಲ್ಲಿ ಕಟ್ಟಲಾಗಿದೆ ಮತ್ತು ಇದರಲ್ಲಿ ವಿಶ್ರಾಂತಿ ಕೊಠಡಿ, ಶಸ್ತ್ರಾಸ್ತ್ರ ಕೊಠಡಿ ಮತ್ತು ಕಾವಲು ಗೋಪುರಗಳಿವೆ. ಪಾಂಡ್ಯರ ಲಂಛನವೆನ್ನಲಾದ ಮೀನಿನ ಆಕೃತಿಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಪುರಾತತ್ವ ಶಾಸ್ತ್ರಜ್ಞರ ಪ್ರಕಾರ, ಕೋಟೆಯು ಪಾಂಡ್ಯ ರಾಜರ ಸುಪರ್ದಿಗೆ ಒಳಪಟ್ಟಿತ್ತು ಎನ್ನಲಾಗುತ್ತದೆ.

ಮೊದಲು ಈ ಕೋಟೆಯ ಉತ್ತುಂಗದಿಂದ ಪದ್ಮನಾಭಾಪುರಂ ಅರಮನೆಯನ್ನು ನೋಡಬಹುದಿತ್ತು. ಕೋಟೆಯಿಂದ ಅರಮನೆಯವರೆಗೆ 1.2 ಮೀಟರ್ ಅಗಲವಾದ ಸುರಂಗ ಮಾರ್ಗವಿದ್ದು ಆದರೆ ಈಗ ಅದನ್ನು ಮುಚ್ಚಲಾಗಿದೆ.

ಪ್ರವಾಸಿಗರು ಕೋಟೆಯ ತುದಿಯಲ್ಲಿರುವ ಪರೇಡ್ ಮೈದಾನದಿಂದ ಸಮುದ್ರವನ್ನು ಕೂಡ ಕಾಣಬಹುದು. ಪರೇಡ್ ಮೈದಾನದ ಒಂದು ಭಾಗದಿಂದ ಬಂಗಾಳ ಕೊಲ್ಲಿಯನ್ನು ಮತ್ತೊಂದು ಭಾಗದಿಂದ ಅರಬ್ಬೀ ಸಮುದ್ರವನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu