ಕಲ್ಪೆಟ್ಟಾ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿದೆ ವರಂಬೆಟ್ಟಾ ಮಸೀದಿ. ಈ ಮಸೀದಿಯು ಪದಿನಂಜರತೀರ್ಥ ಸಮೀಪದಲ್ಲಿ ಸ್ಥಾಪಿತವಾಗಿದೆ. 300 ವರ್ಷ ಹಳೆಯದಾದ ನಿರ್ಮಾಣ ಇದಾಗಿದೆ. ವೈನಾಡು ಜಿಲ್ಲೆಯ ಮೊದಲ ಮಸೀದಿ ಎಂಬ ಖ್ಯಾತಿಯೂ ಇದಕ್ಕಿದೆ. ಮುಸ್ಲೀಮರ ಧಾರ್ಮಿಕ ಕೇಂದ್ರವಾಗಿರುವ ವರಂಬೆಟ್ಟಾ ಮಸೀದಿಗೆ ಪ್ರತಿಯೊಬ್ಬರಿಗೂ ಪ್ರವೇಶಾವಕಾಶ ಇದೆ. ಇಲ್ಲಿನ ಪ್ರವೇಶಕ್ಕೆ ಜಾತಿ, ಧರ್ಮ ಹಾಗೂ ವರ್ಣದ ಅಡ್ಡಿ ಇಲ್ಲ. ಅಲ್ಲದೇ ಇದು ವೈನಾಡು ಜಿಲ್ಲೆಯ ಅತ್ಯಂತ ಜನಪ್ರಿಯ ತಾಣ ಕೂಡ ಹೌದು. ವರಂಬೆಟ್ಟಾ ಮಸೀದಿಯಲ್ಲಿ ಪ್ರತಿ ವರ್ಷ ಮಾರ್ಚ್ ನಲ್ಲಿ ಇಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಅತ್ಯಂತ ವಿಜ್ರಂಭಣೆಯಿಂದ ಇದನ್ನು ಆಚರಿಸಲಾಗುತ್ತದೆ.


Click it and Unblock the Notifications