Search
  • Follow NativePlanet
Share
ಮುಖಪುಟ » ಸ್ಥಳಗಳು» ಕಲಾಹಂಡಿ

ಕಲಾಹಂಡಿ ಪ್ರವಾಸೋದ್ಯಮ - ಪೂರ್ವೇತಿಹಾಸದ ನಾಗರೀಕತೆಯ ಸಮೃದ್ಧ, ಸಂಪನ್ನ ಭೂಮಿ.

18

ಕಲಾಹಂಡಿಯು ಒಡಿಶಾದ ಒಂದು ಜಿಲ್ಲೆಯಾಗಿದ್ದು, ಇತಿಹಾಸ ಮತ್ತು ಸಂಸ್ಕೃತಿಗಳಿಂದ ಸಮೃದ್ಧವಾಗಿದೆ.  ನದಿಗಳಾದ ಉತ್ತೈ ಮತ್ತು ತೇಲ್ ಗಳ ಸಂಗಮ ಸ್ಥಾನದಲ್ಲಿರುವ ಕಲಾಹಂಡಿಯು 12 ನೆಯ ಶತಮಾನಕ್ಕೆ ಸೇರಿದ, ವ್ಯಾಪಕವಾದ ವಾಸ್ತುಶಿಲ್ಪದ ಶ್ರೇಷ್ಟತೆಗೆ ಹೆಸರುವಾಸಿಯಾದ ಅತಿ ಪುರಾತನ ದೇವಸ್ಥಾನಗಳ ನೆಲೆವೀಡಾಗಿದೆ.

ಅನೇಕ ರಮಣೀಯವಾದ, ಮನಸೂರೆಗೊಳ್ಳುವ ಬೆಟ್ಟಗಳೊಂದಿಗೆ, ಮಹಡಿಗಳಂತಹ ರಚನೆಯುಳ್ಳ ಜಲಪಾತಗಳು, ಈ ಜಿಲ್ಲೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಮಾನವ ಜನಾಂಗದ ಪೂರ್ವೇತಿಹಾಸಕ್ಕೆ ಸಂಬಂಧಿಸಿದ ಹಾಗೆ, ಶಿಲಾಯುಗ ಮತ್ತು ಕಬ್ಬಿಣದ ಯುಗಗಳಿಗೆ ಸಂಬಂಧ ಪಟ್ಟಂತೆ, ಹಲವು ಸಾಕ್ಷ್ಯಾಧಾರಗಳು ಇಲ್ಲಿ ಕಂಡುಬಂದಿವೆ.

ಪ್ರತೀವರ್ಷವೂ ಕೂಡ ಕಲಾಹಂಡಿಯಲ್ಲಿ ಉತ್ಸವವು ಆಯೋಜಿಸಲ್ಪಡುವುದು ಇಲ್ಲಿನ ವಿಶೇಷ.  ಈ ಉತ್ಸವವು , ಜಗತ್ತಿನಾದ್ಯಂತ ಪ್ರಸಿದ್ಧವಾದ ಕಲಾಹಂಡಿಯ ಕುಶಲಕಲೆ, ಸಂಸ್ಕೃತಿ, ಸಂಗೀತ, ಮತ್ತು ಕರಕುಶಲ ಕಲೆಯನ್ನು ಜಗಜ್ಜಾಹೀರುಗೊಳಿಸಲು ವೇದಿಕೆಯನ್ನೊದಗಿಸುತ್ತದೆ.

ಕಲಾಹಂಡಿಯಲ್ಲಿ ಮತ್ತು ಸುತ್ತಮುತ್ತಲಿರುವ ಪ್ರವಾಸೀ ತಾಣಗಳು

ಕಲಾಹಂಡಿ ಪ್ರವಾಸೋದ್ಯಮವು ತನ್ನ ಪ್ರವಾಸಿಗರಿಗೆ, ಇತಿಹಾಸಕ್ಕೆ ಸಂಬಂಧಿಸಿದಂತೆ  ಆಸಕ್ತಿದಾಯಕವಾದ ಮತ್ತು ರೋಚಕವಾದ ಪ್ರಾಕೃತಿಕ ಸೌಂದರ್ಯವಿರುವ, ಬೇರೊಂದು ಜಗತ್ತಿಗೇ ಹೋದಂತಹ ಅನುಭವವನ್ನು ನೀಡುವ ಕೆಲವು ತಾಣಗಳನ್ನು ಒಳಗೊಂಡಿದೆ.  ಅಸುರ್‌‌‌‌‌‍ಗಡ್ ಎಂಬ ಸ್ಥಳದಲ್ಲಿ, 2000 ವರ್ಷಗಳಷ್ಟು ಹಿಂದಿನ ಮಾನವನ ಜೀವನ ಕುರಿತಾದ ಅಲ್ಪಪ್ರಮಾಣದ, ಆದರೆ ಬೇರೆಲ್ಲೂ ಕಾಣಸಿಗದ ಕುರುಹುಗಳಿವೆ.

ಗುಡಹಂಡಿ ಬೆಟ್ಟದ ಗುಹೆಗಳಲ್ಲಿ ಮೂಕವಿಸ್ಮಿತರನ್ನಾಗಿಸುವ ಕೆಲವು ಪುರಾತನ ಚಿತ್ರಕಲೆಗಳಿವೆ.  ರಬಂದಾತ ಒಂದು ಸುಂದರವಾದ ಜಲಪಾತವಾಗಿದ್ದು, ಮೋಹನಗಿರಿಯಲ್ಲಿ ಪುರಾತನವಾದ ಭಗವಾನ್ ಶಿವನ ದೇವಸ್ಥಾನವೊಂದಿದೆ.  ಮಾತ್ರವಲ್ಲದೆ, ಮೋಹನಗಿರಿಯಲ್ಲಿ ಕೆಲವು ರೋಚಕವಾದ ಪ್ರಕೃತಿ ಸೌಂದರ್ಯವನ್ನೂ ಕೂಡ ಸವಿಯಬಹುದಾಗಿದೆ.  ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣವೂ ಕೂಡ ಇಲ್ಲಿದ್ದು, ವಿವಿಧ ಕ್ರೀಡೆಗಳು ಮತ್ತು ಮೇಳಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.

ಕಲಾಹಂಡಿಯನ್ನು ತಲುಪುವುದು ಹೇಗೆ ?

ಒಡಿಶಾ ರಾಜ್ಯದ ಎಲ್ಲಾ ಪ್ರಮುಖ ನಗರಗಳೊಂದಿಗೆ ಕಲಾಹಂಡಿಯು ಸಂಪರ್ಕವನ್ನು ಹೊಂದಿದೆ.  ಕಲಾಹಂಡಿಗೆ ಕೇಸಿಂಗ ರೈಲ್ವೆ ನಿಲ್ದಾಣದ ಮೂಲಕ ರೈಲಿನಲ್ಲಿ ಹಾಗೂ ಭುಬನೇಶ್ವರ್ ವಿಮಾನ ನಿಲ್ದಾಣದ ಮೂಲಕ ವೈಮಾನಿಕವಾಗಿಯೂ ಸಹ ಸುಲಭವಾಗಿ ತಲುಪಬಹುದು.

ಕಲಾಹಂಡಿಗೆ ಭೇಟಿ ನೀಡಲು ಪ್ರಶಸ್ತ ಕಾಲಾವಧಿ

ಮಳೆಗಾಲವು ಕಲಾಹಂಡಿಗೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ.

ಕಲಾಹಂಡಿ ಪ್ರಸಿದ್ಧವಾಗಿದೆ

ತಲುಪುವ ಬಗೆ ಕಲಾಹಂಡಿ

  • ರಸ್ತೆಯ ಮೂಲಕ
    ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ 201 ಮತ್ತು 217 ಗಳು ಕಲಾಹಂಡಿಯ ಮೂಲಕ ಹಾದುಹೋಗುತ್ತವೆ. ಭುವನೇಶ್ವರ್, ಕಟಕ್, ಸಂಬಲ್ಪುರ್ ನಂತಹ ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸಲು ಅನೇಕ ರಾಜ್ಯ ಸಾರಿಗೆ ಬಸ್ಸುಗಳು ಸುಲಭವಾಗಿ ಲಭ್ಯವಿವೆ. ಅನೇಕ ಖಾಸಗಿ ಬಸ್ಸುಗಳ ಸೇವೆಯೂ ಲಭ್ಯ. ಭುವನೇಶ್ವರ್ ನಿಂದ ಕಲಾಹಂಡಿಗೆ ತಲುಪಲು ಸುಮಾರು 120 ರೂಪಾಯಿಗಳಷ್ಟು ವೆಚ್ಚವಾಗುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲಾಹಂಡಿಗೆ ಅತಿ ಸಮೀಪವಿರುವ ಪ್ರದೇಶದಲ್ಲಿ ಕೇಸಿಂಗ ರೈಲ್ವೆ ನಿಲ್ದಾಣವು ಅತಿ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಈ ರೈಲ್ವೆ ನಿಲ್ದಾಣವು ಮುಂಬೈ, ಡೆಲ್ಲಿ, ಬೆಂಗಳೂರು, ಕೊಲ್ಕತ್ತಾ, ಮತ್ತು ಚೆನ್ನೈ ನಗರಗಳನ್ನೂ ಒಳಗೊಂಡಂತೆ ದೇಶದ ಎಲ್ಲಾ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ವಿವಿಧ ಪ್ರವಾಸೀ ಸಂಸ್ಥೆಗಳು ಒದಗಿಸುವ ಅನೇಕ ಪ್ರವಾಸೀ ಪ್ಯಾಕೇಜ್ ಗಳು ಯಾವುದೇ ಪ್ರವಾಸಿಗರನ್ನು ರೈಲ್ವೆ ನಿಲ್ದಾಣದಿಂದ ತಮಗೆ ಬೇಕಾದ ತಾಣವನ್ನು ತಲುಪಲು ಸಹಕಾರಿಯಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪ್ರವಾಸಿಗರು ಕಲಾಹಂಡಿಗೆ ವಿಮಾನದಲ್ಲಿ, 259 ಕಿ. ಮೀ. ದೂರದಲ್ಲಿರುವ ರಾಯ್ ಪುರ್ ವಿಮಾನ ನಿಲ್ದಾಣದಿಂದ ತೆರಳಬಹುದು ಅಥವಾ 341 ಕಿ. ಮೀ. ದೂರದಲ್ಲಿರುವ ವಿಶಾಖಪಟ್ಟಣಮ್ ವಿಮಾನ ನಿಲ್ದಾಣದಿoದಲೂ ಕೂಡ ತೆರಳಬಹುದು. 450 ಕಿ. ಮೀ. ದೂರದಲ್ಲಿರುವ ಭುವನೇಶ್ವರ ವಿಮಾನ ನಿಲ್ದಾಣವು ಮತ್ತೊಂದು ಆಯ್ಕೆಯಾಗಿದೆ. ಈ ಯಾವುದೇ ವಿಮಾನ ನಿಲ್ದಾಣದಿಂದಲೂ ಸಹ ಬಸ್ಸು ಮಾರ್ಗವಾಗಿ ಕಲಾಹಂಡಿಯನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed