Search
  • Follow NativePlanet
Share
ಮುಖಪುಟ » ಸ್ಥಳಗಳು» ಜೆಪೋರ್

ಜೆಪೋರ್ : ಪ್ರಕೃತಿ ಸ್ನೇಹಿಗಳ ಸ್ವರ್ಗ

18

ದಕ್ಷಿಣ ಒಡಿಶದ ಎರಡನೇ ದೊಡ್ಡ ಪಟ್ಟಣವಾದ ಜೆಪೋರ್, 'ಗೆಲುವಿನ ನಾಡು' ಎಂದು ಹೆಸರುವಾಸಿಯಾಗಿದೆ. ಇದು ಕೊರಪುಟ್ ಜಿಲ್ಲೆಯಲ್ಲಿನ ಒಂದು ನಗರವಾಗಿದೆ. ಈ ಸ್ಥಳವು ಪ್ರಾಕೃತಿಕ ಸೌಂದರ್ಯದ ಗಣಿಯಾಗಿದ್ದು, ಚಿತ್ರಮಯವಾದ ದಟ್ಟ ಹಸಿರು ಕಾಡುಗಳು, ಜುಳುಜುಳು ಧುಮ್ಮುಕ್ಕುವ ಜಲಪಾತ, ಹುಲ್ಲುಗಾವಲು ಹಾಗೂ ಹಚ್ಚ ಹಸಿರ ಕಂದರಗಳಿಂದ ಅನುಗ್ರಹೀತವಾಗಿದೆ.

ಇಲ್ಲಿನ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಬುಡಕಟ್ಟು ಜನಾಂಗದವರಾಗಿದ್ದು, ಇದು ಅವರ ತಾಯಿನಾಡಾಗಿದೆ. ಈ ಸ್ಥಳವು ಪೂರ್ವ ಘಟ್ಟದ ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿದ್ದು, ಮುಖ್ಯವಾಗಿ ಇದರ ಮೂರು ಬದಿಗಳು ಅರಕು ಪರ್ವತಗಳಿಂದ ಸುತ್ತುವರೆಯಲ್ಪಟ್ಟಿದೆ. ಇದು ಆಂಗ್ಲ ಭಾಷೆಯ 'U' ಆಕಾರದಲ್ಲಿದ್ದು, ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಜೆಪೋರ್ ನ ಸುತ್ತಲಿನ ಯಾತ್ರಾಸ್ಥಳಗಳು

ಜೆಪೋರ್ ನ ವೈಭವಯುತ ಜಲಪಾತಗಳಾದ ಶಕ್ತಿ, ಬಗರ ಮತ್ತು ದುದುಮ ಗಳು ಹೆಚ್ಚಿನ ಸಂಖ್ಯೆಯ ಯಾತ್ರಿಗಳನ್ನು ಆಕರ್ಷಿಸುತ್ತವೆ. ದೆಮಲಿಯ ಸೊಗಸಾದ ಪರ್ವತಗಳು, ಸುನಬೇದದಲ್ಲಿನ ಸೊಂಪಾದ ಕಣಿವೆ ಹಾಗೂ ಅಸಾಮಾನ್ಯ ವನ್ಯಜೀವಿಗಳು, ಕೊಲಬ್ ನ ಅನುಭಾವಿ ನದಿ ಹಾಗೂ ಕೊರಪುಟ್ ನ ಸುಂದರ ನಗರ, ಜೆಪೋರ್ ನ ಇತರ ಉತ್ಕೃಷ್ಟ ಪ್ರಾಕೃತಿಕ ಸ್ಥಳಗಳು.

ಮಲಿಗುರದ ಬ್ರಾಡ್ ಗೇಜ್ ಸುರಂಗಮಾರ್ಗ, ನಂದ್ಪುರ್ ನ ಬತ್ರಿಸ ಸಿಂಹಾಸನ, ಜೆಪೋರ್ ಪಾರ್ಕ್ ಮತ್ತು ಆಕರ್ಷಕವಾದ ಮಿನ್ನ ಝೊಲ ಪಟ್ಟಣ ಮುಂತಾದುವುಗಳು ಜೆಪೋರ್ ಪ್ರವಾಸೋದ್ಯಮಕ್ಕೆ ಇನ್ನಷ್ಟು ಮೆರಗನ್ನು ನೀಡುತ್ತವೆ. ಇದಲ್ಲದೆ, ಜೆಪೋರ್ ನಲ್ಲಿರುವ ಹಲವಾರು ಪುರಾತನ ಅರಮನೆಗಳು ಹಾಗೂ ಕೋಟೆಗಳು ಇಲ್ಲಿನ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತದೆ.

ಜೆಪೋರ್ ಗೆ ತಲುಪುವ ಬಗೆ

ಜೆಪೋರ್ ಗೆ ಸಮೀಪದ ವಿಮಾನ ನಿಲ್ದಾಣ 237 ಕಿ.ಮೀ ದೂರದ ವಿಶಾಖಪಟ್ಟಣದಲ್ಲಿದೆ. ಯಾತ್ರಿಗಳು ಬಸ್ ಅಥವಾ ರೈಲಿನ ಮೂಲಕ ಜೆಪೋರ್ ತಲುಪಬಹುದಾಗಿದೆ. ಈ ಪಯಣದುದ್ದಕ್ಕೂ ಮನಸೂರೆಗೊಳ್ಳುವ ಅರಕು ಬೆಟ್ಟಗಳ ಸಮಗ್ರ ಚಿತ್ರಣವನ್ನು ಅನುಭವಿಸಬಹುದಾಗಿದೆ.

ಜೆಪೋರ್ ಸಂದರ್ಶಿಸಲು ಸೂಕ್ತ ಸಮಯ

ಚಳಿಗಾಲದಲ್ಲಿ ಜೆಪೋರ್ ಅನ್ನು ಸಂದರ್ಶಿಸುವುದು ಉತ್ತಮ.

ಜೆಪೋರ್ ಪ್ರಸಿದ್ಧವಾಗಿದೆ

ಜೆಪೋರ್ ಹವಾಮಾನ

ಉತ್ತಮ ಸಮಯ ಜೆಪೋರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜೆಪೋರ್

  • ರಸ್ತೆಯ ಮೂಲಕ
    ಭುವನೇಶ್ವರ, ಬ್ರಹ್ಮಪುರ, ವಿಶಾಖಪಟ್ಟಣಂ ಮುಂತಾದ ನಗರಗಳಿಂದ ಜೆಪೋರ್ ಗೆ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಅಲ್ಲದೆ ಖಾಸಗಿ ಬಸ್ಸುಗಳ ಸೇವೆಯನ್ನು ಇಲ್ಲಿಗೆ ತಲುಪಲು ಪಡೆಯಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೆಪೋರ್ ಗೆ ರೈಲುಗಳ ಸಂಪರ್ಕ ಉತ್ತಮವಾಗಿದೆ. ರಾಜ್ಯದ ಎಲ್ಲಾ ಭಾಗಗಳಿಗೂ ಇಲ್ಲಿಂದ ಸಂಪರ್ಕಿಸಬಹುದಾಗಿದೆ. ವಿಶಾಖಾಪಟ್ಟಣಂ ನಿಂದ ಜೆಪೋರ್ ಗೆ ತಲುಪಲು ಕಿರಾಂದುಲ್ ಎಕ್ಸ್ ಪ್ರೆಸ್ ರೈಲು ಪಡೆಯಬಹುದು. ಈ ರೈಲು ಸುಂದರ ಗಿರಿಧಾಮವಾದ ಅರಕು ಕಣಿವೆಯ ಮೂಲಕ ಹಾದು ಹೋಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜೆಪೋರ್ ವಾಯು ನಿಲ್ದಾಣವನ್ನು ಹೊಂದಿದ್ದು, ಪ್ರಸ್ತುತ ಅದು ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಕೇವಲ ವಿ.ಐ.ಪಿ ಪ್ರಯಾಣಿಕರು ಮತ್ತು ಖಾಸಗಿ ವಿಮಾನಗಳಿಗೆ ಮಾತ್ರ ಇಲ್ಲಿ ಅವಕಾಶವಿದೆ. ವೈಜಾಗ್ ಅಥವಾ ವಿಶಾಖಾಪಟ್ಟಣಂ ಇಲ್ಲಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ಇದು 237 ಕಿ.ಮೀ ದೂರದಲ್ಲಿದೆ. ಇದಲ್ಲದೆ 507 ಕಿ.ಮೀ ದೂರದಲ್ಲಿರುವ ಭುವನೇಶ್ವರ ವಿಮಾನ ನಿಲ್ದಾಣ ಮತ್ತೊಂದು ಆಯ್ಕೆ. ಈ ನಿಲ್ದಾಣಗಳಿಂದ ಜೆಪೋರ್ ಗೆ ತೆರಳಲು ಟ್ಯಾಕ್ಸಿಗಳನ್ನು ಪಡೆಯಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City