Search
  • Follow NativePlanet
Share

ಕಾಲಡಿ - ಅಲೌಕಿಕತೆಯ ಹೆಜ್ಜೆಗುರುತುಗಳು

20

ಕಾಲಡಿ ಎಂಬುದು ಪೆರಿಯಾರ್ ನದಿಗೆ ಸಮೀಪದಲ್ಲಿ ನೆಲೆಗೊಂಡಿರುವ ಒಂದು ಹಳ್ಳಿಯಾಗಿದೆ. ಈ ಹಳ್ಳಿಯು ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿ ನೆಲೆಸಿದೆ. ಈ ಊರು ಆದಿ ಶಂಕರರು ಜನಿಸಿದ ಊರು. ಆದಿ ಶಂಕರರ ಅನುಯಾಯಿಗಳು ಮತ್ತು ಭಾರತ ಮೂಲೆ ಮೂಲೆಯಿಂದ ಬರುವ ಯಾತ್ರಾರ್ಥಿಗಳಿಗೆ ಈ ಊರು ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇಲ್ಲಿ 1910 ರಲ್ಲಿ ಆದಿ ಶಂಕರರ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ. ಕಾಲಡಿ ಎಂದರೆ ಹೆಜ್ಜೆಗುರುತು ಎಂದರ್ಥ. ಈ ಊರು ಮೊದಲಿಗೆ ಸಸಲಂ ಎಂದು ಕರೆಯಲ್ಪಡುತ್ತಿತ್ತು. ಕಾಲಡಿ ದೇಗುಲದ ಶತಮಾನೋತ್ಸವವನ್ನು 2010 ರಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಅಲ್ಲದೆ ಮಾಧ್ಯಮಗಳಲ್ಲಿ ಇದು ಸಂಪೂರ್ಣವಾಗಿ ಬಿತ್ತರಗೊಂಡಿತು.

ಕುತೂಹಲಕರ ದಂತಕತೆ

ಆದಿ ಶಂಕರ ಮತ್ತು ಅವರ ಮಾತೃಶ್ರೀಯವರ ಕುರಿತಾದ ಒಂದು ಪೂರ್ವದ ದಂತಕತೆಗೆ ಈ ಊರು ಸಾಕ್ಷಿಯಾಗಿದೆ. ಪೆರಿಯಾರ್ ನದಿಯು ಮೊದಲಿಗೆ ಪೂರ್ಣ ನದಿ ಎಂದು ಕರೆಯಲ್ಪಡುತ್ತಿತ್ತು. ಇದು ಶಂಕರರು ಮತ್ತು ಅವರ ತಾಯಿ ನೆಲೆಸಿದ್ದ ಸ್ಥಳದಿಂದ ತುಂಬಾ ದೂರದಲ್ಲಿ ಹರಿಯುತ್ತಿತ್ತು.  ಒಮ್ಮೆ ಶಂಕರರ ತಾಯಿಯು ಪ್ರತಿದಿನದಂತೆ ಅಂದು ಸಹ ಸ್ನಾನಮಾಡಲು ಹೋಗುವಾಗ ತಲೆಸುತ್ತು ಬಂದು ಕುಳಿತುಬಿಟ್ಟರು. ಆಗ ನಿಸ್ಸಹಾಯಕರಾದ ಶಂಕರರು ಭಗವಾನ್ ಕೃಷ್ಣನನ್ನು ಪ್ರಾರ್ಥಿಸಿದರು. ಆಗ ಶ್ರೀ ಕೃಷ್ಣನು ಅವರ ಮೊರೆಗೆ ಓಗೊಟ್ಟು ಬಂದನು.’ ತನ್ನ ಕಾಲಿನ ಹೆಜ್ಜೆಗುರುತು ಎಲ್ಲಿದೆಯೊ ಅಲ್ಲಿಂದ ನದಿ ಹರಿಯುತ್ತದೆ’ ಎಂದು ಶ್ರೀ ಕೃಷ್ಣನು ಶಂಕರರಿಗೆ ಹೇಳಿದನು. ಅದರ ಪರಿಣಾಮವಾಗಿ ಶಂಕರರ ಉದ್ಯಾನವನದ ಬಳಿಯಲ್ಲಿ ನದಿಯು ಹರಿಯಲು ಪ್ರಾರಂಭಿಸಿತು.

ನಂತರ ಶಂಕರರು ಶ್ರೀ ಕೃಷ್ಣನಿಗಾಗಿ ಇಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು, ಅಲ್ಲದೆ ಕೃಷ್ಣನಿಗಾಗಿ ಅಚ್ಯುತ ಅಷ್ಟಕಂ ಎಂಬ ಪ್ರಸಿದ್ಧ ಸ್ತೋತ್ರವನ್ನು ಪಠಿಸಿದರು. ಈ ಸ್ಥಳದ ಪ್ರಮುಖ ಆಕರ್ಷಣೆಗಳಲ್ಲಿ ರಾಮಕೃಷ್ಣ ಆಶ್ರಮ, ಕಲ್ಲಿಲ್ ದೇವಿ ದೇವಾಲಯ, ಶೃಂಗೇರಿ ಮಠದ ಸಂಕೀರ್ಣ, ಮಹಾದೇವ ದೇವಾಲಯ, ವನಮೂರ್ತಿ ದೇವಾಲಯ, ಕುಳುಪ್ಪಿಲ್ಲಿಕ್ಕವೆ ಜಲದುರ್ಗ ದೇವಾಲಯಗಳು ಸೇರಿವೆ.

ಕಾಲಡಿಗೆ ಹೋಗಲು ಅತ್ಯುತ್ತಮ ಅವಧಿ

ಕಾಲಡಿಯಲ್ಲಿ ಆಗಸ್ಟ್ ನಿಂದ ಮಾರ್ಚ್ ವರೆಗಿನ ಅವಧಿಯು ತಂಪಾಗಿ, ಆಹ್ಲಾದಕರವಾಗಿರುವುದರಿಂದ ಈ ಅವಧಿಯು ಕಾಲಡಿಗೆ ಹೋಗಲು ಅತ್ಯುತ್ತಮ ಕಾಲವಾಗಿದೆ. ಕಾಲಡಿಯು ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ದಕ್ಷಿಣ ಭಾರತದ ಹಲವು ನಗರಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ.

ಕಾಲಡಿ ಪ್ರಸಿದ್ಧವಾಗಿದೆ

ಕಾಲಡಿ ಹವಾಮಾನ

ಉತ್ತಮ ಸಮಯ ಕಾಲಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಾಲಡಿ

  • ರಸ್ತೆಯ ಮೂಲಕ
    ಕಾಲಡಿಗೆ ಬಸ್ ಸೇವೆಯು ಕೇರಳದ ಎಲ್ಲ ಮೂಲೆಗಳಿಂದ ಲಭ್ಯವಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಕಾಲಡಿಗೆ ಬಂದು ಹೋಗುತ್ತಿರುತ್ತವೆ. ಖಾಸಗಿ ಬಸ್ಸುಗಳು ಸಹ ಇಲ್ಲಿಗೆ ಬಸ್ ಸೌಕರ್ಯವನ್ನು ಒದಗಿಸುತ್ತವೆ. ಬಸ್ಸಿನಲ್ಲಿ ಪ್ರವಾಸ ಮಾಡುವುದು ಅತ್ಯಂತ ಸುಖಕರವಾದ ಅನುಭವವಾಗಿರುತ್ತದೆ. ದಕ್ಷಿಣ ಭಾರತದ ಹಲವು ನಗರಗಳಿಂದ ಕಾಲಡಿಗೆ ಸುವಿಹಾರಿ ಬಸ್ಸುಗಳ ವ್ಯವಸ್ಥೆ ಇದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಾಲಡಿಯಲ್ಲಿನ ಅಲ್ವಯೆ ರೈಲು ನಿಲ್ದಾಣವು ಉತ್ತಮ ರೈಲು ನಿಲ್ದಾಣವಾಗಿದ್ದು, ಇದು ಚೆನ್ನೈ, ಬೆಂಗಳೂರು, ದೆಹಲಿ ಮತ್ತು ಮುಂಬಯಿಯಂತಹ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದ ಮೂಲಕ ಹಾದು ಹೋಗುವ ಎಲ್ಲ ಪ್ರಮುಖ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುತ್ತವೆ. ಪ್ರಯಾಣಿಗರು ರೈಲಿನಲ್ಲಿ ಪ್ರವಾಸ ಮಾಡುವುದು ಮಿತವ್ಯಯಿಯಾಗಿರುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಾಲಡಿಗೆ ಅತ್ಯಂತ ಸಮೀಪದಲ್ಲಿದ್ದ ವಿಮಾನನಿಲ್ದಾಣವೆಂದರೆ ಕೊಚ್ಚಿ ವಿಮಾನ ನಿಲ್ದಾಣ. ಇದು ಇಲ್ಲಿಂದ 35 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಮತ್ತು ವಿದೇಶದ ಹಲವು ನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಕಾಲಡಿಗೆ ಟ್ಯಾಕ್ಸಿಗಳಲ್ಲಿ ಆರಾಮವಾಗಿ ತಲುಪಬಹುದು. ಪ್ರಯಾಣದರವು ಇಲ್ಲಿ ಕೈಗೆಟುಕುವಂತಿರುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri