Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಲಡಿ » ಆಕರ್ಷಣೆಗಳು » ಕಲ್ಲಿಲ್ ದೇವಿ ದೇವಾಲಯ

ಕಲ್ಲಿಲ್ ದೇವಿ ದೇವಾಲಯ, ಕಾಲಡಿ

3

ಕಲ್ಲಿಲ್ ದೇವಿ ದೇವಾಲಯವು ಕಾಲಡಿಯಿಂದ 22 ಕಿ.ಮೀ ದೂರದಲ್ಲಿದೆ. ಇದೊಂದು ಜೈನ ದೇವಾಲಯವಾಗಿದ್ದು, ಸುಮಾರು 9ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದಾಗಿದೆ. ಕಲ್ಲಿಲ್ ಎಂದರೆ ಮಲೆಯಾಳಂನಲ್ಲಿ ಕಲ್ಲು ಎಂದರ್ಥ. ಈ ದೇವಾಲಯವು ಸುಮಾರು 28 ಎಕರೆಗಳಷ್ಟು ವಿಶಾಲವಾದ ಪ್ರಾಂತ್ಯದಲ್ಲಿ ತಲೆ ಎತ್ತಿದೆ. ಅಲ್ಲದೆ ಇದನ್ನು ಒಂದು ಬಂಡೆಯನ್ನು ಕಡಿದು ನಿರ್ಮಿಸಲಾಗಿದೆ. ಈ ದೇವಾಲಯ ತಲುಪಲು ಪ್ರವಾಸಿಗರು 120 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಈ ದೇವಾಲಯವು ಕಲ್ಲಿಲ್ ಪಿಶರೊಡಿ ಕುಟುಂಬದ ವಶದಲ್ಲಿದೆ. ಪಿಶರೊಡಿ ಎಂಬುದು ಬ್ರಾಹ್ಮಣ ಜಾತಿಯಾಗಿದ್ದರು ಜೈನ ಧರ್ಮದಲ್ಲಿ ನಂಬಿಕೆಯನ್ನು ಇರಿಸಿಕೊಂಡು ಬಂದ ಸಮುದಾಯವಾಗಿದೆ. ಇಲ್ಲಿ ಪೂಜಿಸಲ್ಪಡುವ ಮುಖ್ಯದೇವತೆ ದುರ್ಗಾದೇವಿ. ಪಾರ್ಶ್ವನಾಥ, ಮಹಾವೀರ ಮತ್ತು ಪದ್ಮಾವತಿ ದೇವಿ ಅಥವಾ ಭಗವತಿ ದೇವಿ ಇಲ್ಲಿ ಪೂಜಿಸಲ್ಪಡುವ ಇನ್ನಿತರ ದೇವರುಗಳಾಗಿದ್ದಾರೆ. ಬ್ರಹ್ಮನ ವಿಗ್ರಹವನ್ನು ಸಹ ಇಲ್ಲಿನ ಬಂಡೆಯಲ್ಲಿ ಕೆತ್ತಲಾಗಿದೆ.

ಈ ದೇವಾಲಯದಲ್ಲಿ ರಾತ್ರಿಯ ಸಮಯದಲ್ಲಿ ಯಾವುದೇ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಲಾಗುವುದಿಲ್ಲ. ನಿತ್ಯ ಇಲ್ಲಿ ಪೂಜೆಯನ್ನು ಹಗಲಿನಲ್ಲಿ ಅಂದರೆ ಮಧ್ಯಾಹ್ನಕ್ಕೆ ಮೊದಲೆ ಕೈಗೊಳ್ಳುತ್ತಾರೆ. ಈ ದೇವಾಲಯವನ್ನು ಪೂಜೆಯ ನಂತರ ಮುಚ್ಚಲಾಗುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಇಲ್ಲಿ ವಾರ್ಷಿಕ ಉತ್ಸವಗಳನ್ನು ಮಾಡುತ್ತಾರೆ. ಇದು ಎಂಟು ದಿನಗಳ ಕಾಲ ನಡೆಯುತ್ತದೆ. ಹೆಣ್ಣಾನೆಯ ಮೇಲೆ ಇಲ್ಲಿನ ದೇವರನ್ನು ಕೂರಿಸಿ ಭಾರೀ ಮೆರವಣಿಗೆಯನ್ನು ಮಾಡುವುದು ಇಲ್ಲಿನ ವಿಶೇಷ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat