ಶತ್ರುಗಳ ಆಕ್ರಮಣವನ್ನು ತಡೆಯುವ ಸಲುವಾಗಿ ಲಡಾಯಿ ಘರ್ ಕೋಟೆಯನ್ನು ನಿರ್ಮಿಸಲಾಯಿತು. ನಗರವನ್ನು ರಕ್ಷಿಸಲು ರಾಜ ಪ್ರತಾಪ್ ಸಿನ್ಹಾ ಈ ಕೋಟೆಯನ್ನು ಕಟ್ಟಿಸಿದ. ಜೋರ್ಹತ್ ನಗರದ ಮಧ್ಯಭಾಗದಿಂದ 13 ಕಿ.ಮೀ. ದೂರದಲ್ಲಿ ಲಡಾಯಿ ಘರ್ ಇದೆ.
ಕೋಟೆಯಲ್ಲಿ ಮೂರು ವಿಭಾಗಗಳಿದೆ ಮತ್ತು ಪ್ರತಿಯೊಂದು ಭಿನ್ನ ದಿಕ್ಕಿನಲ್ಲಿದೆ. ಮೇರಾ ಘರ್, ಸ್ವಲಾತ್ ಘರ್ ಮತ್ತು ಲಡಾಯಿ ಘರ್ ಎನ್ನುವ ಮೂರು ವಿಭಾಗಗಳಿವೆ. ಲಡಾಯಿ ಘರ್ ಜೋರ್ಹತ್ ನ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣ ಮತ್ತು ಇದನ್ನು ನೋಡಲೇಬೇಕಾದ ಪಟ್ಟಿಗೆ ಸೇರಿಸಬೇಕಾಗಿದೆ. ಕೋಟೆಯ ಹೆಚ್ಚಿನ ಭಾಗಗಳು ಭಗ್ನಾವಶೇಷವಾಗಿದ್ದರೂ ಅದರ ಭವ್ಯತೆ ಹಾಗೂ ಪ್ರಭಾವ ಹಾಗೆ ಉಳಿದುಕೊಂಡಿದೆ. ಲಡಾಯಿ ಘರ್ ಗೆ ಪ್ರಯಾಣಿಸಲು ಜೋರ್ಹತ್ ನಗರ ಅಥವಾ ಘರ್ ಅಲಿಯಿಂದ ಪ್ರವಾಸಿಗರಿಗೆ ಪ್ರವಾಸಿ ಟ್ಯಾಕ್ಸಿಗಳಿವೆ.


Click it and Unblock the Notifications