ಜೋರ್ಹತ್ ನ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿಯಾಗಿರುವ ಕರಂಗಾ ಜೋರ್ಹತ್ ನಗರದ ಜಿಲ್ಲಾಕೇಂದ್ರದ ಸಮೀಪದಲ್ಲೇ ಇದೆ. ಕರಂಗಾ ಹಳ್ಳಿಯು ಇಲ್ಲಿನ ಕಮ್ಮಾರ ಸಾಲೆಗೆ ಹೆಸರುವಾಸಿಯಾಗಿದೆ. ಸುತ್ತಮುತ್ತಲಿನ ಟೀ ಗಾರ್ಡನ್ ಗಳಿಂದಾಗಿ ಇಲ್ಲಿನ ಕಮ್ಮಾರರಿಗೆ ಭಾರೀ ಬೇಡಿಕೆಯಿದೆ. ಟೀ ಗಾರ್ಡನ್ ನ ಸುತ್ತಮುತ್ತಲು ವಾಸಿಸುವ ಸ್ಥಳೀಯರು ಕೂಡ ಕರಂಗಾ ಕಮ್ಮಾರಸಾಲೆಯ ಗ್ರಾಹಕರಾಗಿದ್ದಾರೆ.
ಕರಂಗಾದ ಕಮ್ಮಾರರು ಇಲ್ಲಿನ ಟೀ ಎಸ್ಟೇಟ್ ಗಳ ಮಾತ್ರವಲ್ಲದೆ ಜೋರ್ಹತದ ಸ್ಥಳೀಯ ಜನರ ಬೇಡಿಕೆಗಳನ್ನು ಪೂರೈಸುತ್ತಾರೆ. ಹಳ್ಳಿಗೆ ಭೇಟಿ ನೀಡಿದಾಗ ಅಸ್ಸಾಂನ ಪ್ರಾಚೀನ ಕಮ್ಮಾರ ಸಾಲೆಯ ಪರಿಚಯವಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಮ್ಮಾರರು ತಮ್ಮ ಮನೆಯ ಬಾಗಿಲನ್ನು ತೆರೆಯುವುದಲ್ಲದೆ ಆಸಕ್ತಿಯಿರುವವರಿಗೆ ಇದರ ಬಗ್ಗೆ ವಿವರಿಸುತ್ತಾರೆ. ಕರಂಗಾದ ಕಮ್ಮಾರಸಾಲೆಗಳಿಂದ ಪ್ರವಾಸಿಗರು ಕೆಲವು ವಸ್ತುಗಳನ್ನು ನೇರವಾಗಿ ಖರೀದಿಸಬಹುದು. ಜೋರ್ಹತ್ ನಗರದ ಮಧ್ಯಭಾಗದಿಂದ ಪ್ರವಾಸಿ ಕ್ಯಾಬ್ ನಿಂದ ಈ ಹಳ್ಳಿಗೆ ಪ್ರಯಾಣಿಸಬಹುದು.


Click it and Unblock the Notifications