ಘರ್ ಅಲಿ ಜೋರ್ಹತ್ ನ ಐತಿಹಾಸಿಕ ತಾಣ ಹಾಗೂ ಅಹೋಮ್ ಸಂಸ್ಕೃತಿಯ ಸ್ಮರಣೆಗಳ ಮಾರಾಟ ಕೇಂದ್ರ. ಘರ್ ಅಲಿಯನ್ನು ಅಹೋಮ್ ರಾಜ್ಯಾಡಳಿತದ ವೇಳೆ ನಿರ್ಮಿಸಲಾಗಿತ್ತು. ಈ ವೇಳೆ ಅಹೋಮ್ ದೊರೆಗಳು ಮೊಮರಿಯಾಸ್ ವಿರುದ್ಧ ಯುದ್ಧ ಮಾಡುತ್ತಿದ್ದರು. ಘರ್ ಅಲಿ ಬೃಹತ್ ಅಣೆಕಟ್ಟಾಗಿದ್ದು, ಇದು ಸೆಯೊನಿ ಅಲಿಯಿಂದ ಹಿಡಿದು ನಹಾ ಬೆಟ್ಟದ ತನಕ ವ್ಯಾಪಿಸಿದೆ. ಬಾಹ್ಯ ಶಕ್ತಿಗಳ ದಾಳಿಯಿಂದ ಅಹೋಮ್ ರಾಜ್ಯವನ್ನು ಕಾಪಾಡುವ ಸಲುವಾಗಿ ಈ ಅಣೆಕಟ್ಟನ್ನು ಕಟ್ಟಲಾಗಿತ್ತು.
ಈ ಐತಿಹಾಸಿಕ ತಾಣದಲ್ಲಿ ಹಲವಾರು ಗೊಂದಲ ಮೂಡಿಸುವ ಕಾಲುದಾರಿಗಳಿರುವ ಕಾರಣ ಘರ್ ಅಲಿಯನ್ನು ಬಿಬುದ್ಧಿ ಘರ್ ಎಂದೂ ಕರೆಯಲಾಗುತ್ತದೆ. ಮೊಮರಿಯಾಸ್ ಗಳು ಜೋರ್ಹತ್ ಮೇಲೆ ದಾಳಿ ಮಾಡಿದಾಗ ಅಣೆಕಟ್ಟನ್ನು ನೋಡಿ ದಿಗ್ಬ್ರಮೆಗೊಂಡರು ಮತ್ತು ಇದಕ್ಕಾಗಿಯೇ ಬಿಬುದ್ಧಿ ಘರ್ ಎನ್ನುವ ಹೆಸರು ಬಂತೆನ್ನುವ ನಂಬಿಕೆಯಿದೆ.
ಇಂದು ಘರ್ ಅಲಿ ಜೋರ್ಹತ್ ನ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿನ ಅಂಗಡಿಗಳಲ್ಲಿ ಅಹೋಮ್ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ವಿಶೇಷ ವಸ್ತುಗಳನ್ನು ಪ್ರವಾಸಿಗಳು ಖರೀದಿಸಬಹುದು. ಕಿರಿದಾದ ಮತ್ತು ಇಕ್ಕಟ್ಟಾದ ಬೀದಿಗಳು ಘರ್ ಅಲಿ ವಾಣಿಜ್ಯ ಕೇಂದ್ರಕ್ಕೆ ಭೇಟಿಯನ್ನು ಯೋಗ್ಯವನ್ನಾಗಿಸುತ್ತದೆ.