ಜೊರ್ಹತ್ ನ ನಾ ಅಲಿಯಲ್ಲಿರುವ ಬಂಗಾಲಪುಖರಿ ಜನಪ್ರಿಯ ನೀರಿನ ಜಲಾಶಯ. ಜಲಾಶಯ ನಿರ್ಮಾಣದ ಬಗ್ಗೆ ಒಂದು ಆಸಕ್ತಿದಾಯಕ ಘಟನೆಯಿದೆ ಮತ್ತು ಜೋರ್ಹತ್ ನ ಜನರು ಇಂದಿಗೂ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
1739ರಲ್ಲಿ ರುಪ್ ಸಿಂಗ್ ಬಂಗಾಲ್ ಅಹೊಮ್ ನ ರಾಜ್ಯಪಾಲ ಬದಾನ ಬರ್ಫುಕನ್ ನನ್ನು ಹತ್ಯೆ ಮಾಡುತ್ತಾನೆ. ಬರ್ಫುಕನ್ ಕ್ರೂರಿಯಂತೆ ವರ್ತಿಸಿ ಬರ್ಮಾದ ಸೈನಿಕರು ಮತ್ತು ಅಸ್ಸಾಂನ ಜನರಿಗೆ ಹಿಂಸೆ ನೀಡುತ್ತಿದ್ದ. ಇದೆಲ್ಲವನ್ನು ನೋಡುತ್ತಿದ್ದ ರೂಪ್ ಸಿಂಗ್ ಬಂಗಾಲ ಸಾಕದ ಶ್ರಾವಣ ತಿಂಗಳಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ಬರ್ಫುಕನ್ ನನ್ನು ಹತ್ಯೆ ಮಾಡುತ್ತಾರೆ. ಧೈರ್ಯ ತೋರಿಸಿದ ಬಂಗಾಲಗೆ ದೊಡ್ಡ ಮಟ್ಟದ ಹಣವನ್ನು ಬಹುಮಾನ ರೂಪದಲ್ಲಿ ನೀಡಲಾಗುತ್ತದೆ. ಆತ ಈ ಹಣವನ್ನು ಬಂಗಾಲಪುಖರ್ ನಿರ್ಮಾಣಕ್ಕೆ ವ್ಯಯಿಸುತ್ತಾನೆ.
ಅದಾಗ್ಯೂ ವ್ಯಕ್ತಿಯನ್ನು ಕೊಂದ ಹಣದಿಂದ ನಿರ್ಮಿಸಲಾದ ಈ ಜಲಾಶಯದ ನೀರನ್ನು ಜನರು ಯಾವತ್ತೂ ಉಪಯೋಗಿಸಲಿಲ್ಲ. ಇದರ ನೀರನ್ನು ಉಪಯೋಗಿಸುವುದರಿಂದ ದುರಾದೃಷ್ಟ ಉಂಟಾಗುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಇದರ ನೀರನ್ನು ಉಪಯೋಗಿಸದಿದ್ದರೂ ಜಲಾಶಯ ಮಾತ್ರ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.


Click it and Unblock the Notifications