ಉದಯ ಮಂದಿರವು ಜೋಧ್‌ಪುರದ ಅತ್ಯಂತ ಜನಪ್ರಿಯ ವಾಸ್ತುಶಿಲ್ಪವಾಗಿದೆ. 102 ಕಂಬಗಳ ಬೆಂಬಲವನ್ನು ಹೊಂದಿರುವ ಈ ದೇವಸ್ಥಾನವು ಅತ್ಯಂತ ದೊಡ್ಡದು. ದೇವಸ್ಥಾನದ ಮೇಲಿನ ಭಾಗವನ್ನು ಕಲ್ಲಿನಿಂದ ಕೆತ್ತಲಾಗಿದೆ. ನಾಥ್ ಯೋಗಿಗಳ ಚಿನ್ನದ ಚಿತ್ರಗಳನ್ನು ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸಲು ಕೆತ್ತಲಾಗಿದೆ. ಗರ್ಭ ಗೃಹವು ಬಟ್ಟೆಯಿಂದ ಮುಚ್ಚಲ್ಪಟ್ಟಿದೆ. ಪ್ರವಾಸಿಗರು ಇಲ್ಲಿ ಶ್ರೀಗಂಧದ ರೇಲಿಂಗ್‌ಗಳನ್ನು ನೋಡಿ ಚಕಿತರಾಗಬಹುದು. ದೇವಸ್ಥಾನದ ಮುಖ್ಯ ದ್ವಾರವನ್ನೂ ಕೂಡಾ ಶ್ರೀಗಂಧದಿಂದಲೇ ಮಾಡಲಾಗಿದೆ.


Click it and Unblock the Notifications