ಬಲ್ಸಾಮಂದ್ ಕೆರೆಯನ್ನು ಕಟ್ಟಿದ್ದು 1159 ರಲ್ಲಿ ಬಾಲಕ್ ರಾವ್ ಪರಿಹಾರ್. ಇದು ಜೋಧ್ಪುರ-ಮಂಡೋರ್ ರಸ್ತೆಯಲ್ಲಿದೆ. ಈ ಹಿಂದೆ ಕೆರೆಯು ಮಂಡೋರಿನ ನೀರಿನ ಮೂಲವಾಗಿತ್ತು. ಈ ಕೆರೆಯು ಹಸಿರು ಉದ್ಯಾನವನ್ನು ಹೊಂದಿದೆ.
ಬಲ್ಸಾಮಂದ್ ಕೆರೆ ಅರಮನೆಯು, ಕೆರೆಯನ್ನು ನೋಡಲು ನಿರ್ಮಿಸಲಾಗಿದೆ. ಈ ಅರಮನೆಯು ಜೋಧ್ಪುರದ ರಾಜ ಮನೆತನಕ್ಕೆ ಬೇಸಿಗೆಕಾಲವನ್ನು ಕಳೆಯುವ ತಾಣವಾಗಿತ್ತು. ರಜಪೂತರ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು, ಸದ್ಯ ಜೋಧ್ಪುರದ ಅತ್ಯಂತ ಜನಪ್ರಿಯ ಹೋಟೆಲ್ಗಳಲ್ಲಿ ಇದೂ ಒಂದಾಗಿದೆ.