Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು
  • 01ಲಕೋಟಾ ತಲಾವ್

    ಯಾವಾಗಲೂ ವಲಸೆ ಬಂದ ಹಕ್ಕಿಗಳ ಕಲರವದಲ್ಲಿ ಮನಸ್ಸನ್ನು ಖುಷಿ ಮಾಡುವ ಸರೋವರ ಇಲ್ಲಿನ ಲಖೋಟಾ ತಲಾವ್. ಇಲ್ಲಿ ಪ್ರತಿವರ್ಷ ಸುಮಾರು 75 ಪ್ರಭೇದಗಳ ಪಕ್ಷಿಗಳು ಭೇಟಿ ನೀಡುತ್ತವೆ. ಈ ಸರೋವರವು ಸಂಜೆ ಮತ್ತು ವಾರಾಂತ್ಯದ ದಿನಗಳಲ್ಲಿ ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಈ ಪ್ರಶಾಂತವಾದ ಸರೋವರದಲ್ಲಿ ಬೋಟಿಂಗ್ ನಡೆಸಬಹುದಾಗಿದೆ....

    + ಹೆಚ್ಚಿಗೆ ಓದಿ
  • 02ಲಖೋಟಾ ಅರಮನೆ ಮತ್ತು ವಸ್ತು ಸಂಗ್ರಹಾಲಯ

    ಲಖೋಟಾ ಸರೋವರದ ಒಂದು ದ್ವೀಪದಲ್ಲಿ ಇರುವ ಲಖೋಟಾ ಅರಮನೆ ಅಥವಾ ಲಖೋಟಾ ಗೋಪುರ ಇಂದು ಒಂದು ವಸ್ತು ಸಂಗ್ರಹಾಲಯವಾಗಿದೆ. ಇಂದು ಇಲ್ಲಿ ಹಳೆಯಾ ಕಾಲದ ವಸ್ತುಗಳನ್ನು ಅದರಲ್ಲೂ ಪ್ರಮುಖವಾಗಿ  ಕರಕುಶಲ ವಸ್ತುಗಳನ್ನು ಇಡಲಾಗಿದೆ. ಜಾಮ್ ರಣ್ ಮಲ್ಜಿ ಅವರ ಆದೇಶದಂತೆ ಈ ಗೋಫುರವನ್ನು ಬರಗಾಲ ಪೀಡಿತರ ನೆರವಿಗಾಗಿ ಕಟ್ಟಲಾಗಿತ್ತು....

    + ಹೆಚ್ಚಿಗೆ ಓದಿ
  • 03ಖಿಜಾದಿಯಾ ಪಕ್ಷಿಧಾಮ

    ಖಿಜಾದಿಯಾ ಪಕ್ಷಿಧಾಮ

    ಪಕ್ಷಿ ಪ್ರೀಯರಿಗೆ ಜಾಮ್ ನಗರದಲ್ಲಿ ಸಾಕಷ್ಟು ತಾಣಗಳಿವೆ. ಖಿಜಾಡಿಯಾ ಪಕ್ಷಿಧಾಮ ಇವುಗಳಲ್ಲಿ ಒಂದು. ಇಲ್ಲೂ ವಲಸೆ ಬರುವ ಹಕ್ಕಿಗಳು ಇವೆ. ಪರಿಸರ ಸಂಶೋಧನೆ ಮಾಡುವ ಆಸಕ್ತಿ ಉಳ್ಳವರಿಗೆ ಇದು ಸರಿಯಾದ ಸ್ಥಾನ ಹಾಗು ಇದೇ ಉದ್ದೇಶದಿಂದ ಇದನ್ನು 1920 ರಲ್ಲಿ ಕಟ್ಟಾಯಿತು. ಈ ಪಕ್ಷಿಧಾಮದಲ್ಲಿ ಎರಡು ಮಾನವ ನಿರ್ಮಿತ ಅಣೆಕಟ್ಟುಗಳಿವೆ....

    + ಹೆಚ್ಚಿಗೆ ಓದಿ
  • 04ಬಾಲಹನುಮಾನಜೀ ದೇವಾಲಯ

    ಬಾಲಹನುಮಾನಜೀ ದೇವಾಲಯ

    ಪ್ರಸಿದ್ಧ ದೇವಾಲಯ ಆಗಿರುವ ಜೊತೆಗೆ ಈ ದೇವಾಲಯ ಕೆಲವು ವಿಶೇಷತೆಗಳನ್ನೂ ಹೊಂದಿದೆ. ಇದು ಗಿನ್ನಿಸ್ ಬುಕ್ ಆಫ್ ವಲ್ದ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ. ಇಲ್ಲಿ ಆಗಸ್ಟ್ 1,1964 ರಿಂದ ಆರಂಭಗೊಂಡು ಕಳೆದ 48 ವರ್ಷಗಳಿಂದ ದಿನದ ಇಪ್ಪತ್ತನಾಲ್ಕೂ ಗಂಟೆಗಳೂ ‘ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಮಂತ್ರ ಪಠನೆಯ...

    + ಹೆಚ್ಚಿಗೆ ಓದಿ
  • 05ರಣ್ ಮಲ್ ಸರೋವರ

    ಲಖೋಟಾ ಸರೋವರದಂತೆ ರಣ್ ಮಲ್ ಸರೋವರವೂ ಹಲವು  ಪಕ್ಷಿಗಳನ್ನು ತನ್ನತ್ತ ಆಕರ್ಷಿಸುತ್ತದೆ. ನಗರದಿಂದ ಸುಮಾರು ಎಂಟು. ಕಿ.ಮೀ ದೂರದಲ್ಲಿ ಈ ಸರೋವರ ಇದೆ.

    + ಹೆಚ್ಚಿಗೆ ಓದಿ
  • 06ರತನ್ ಬಾಯ್ ಮಸೀದಿ

    ಹಳೆಯ ನಗರದ ಹೃದಯ ಭಾಗದಲ್ಲಿ ಇರುವ ಸುಂದರವಾದ ಕಟ್ಟಡ ರತನ್ ಬಾಯ್ ಮಸೀದಿ. ಗಂಧದ ಬಾಗಿಲುಗಳು, ಮಥರ್ ಆಫ್ ಪರ್ಲ್ಸ್ ನ ಕೆತ್ತನೆಗಳು, ಎರಡು ಆಕರ್ಷಕ ಗೋಪುರಗಳ ಜೊತೆಗೆ ಈ ಮಸೀದಿಯಲ್ಲಿ ತನ್ನದೇ ಆದ ಮಳೆ ನೀರು ಕೊಯ್ಲು ವ್ಯವಸ್ಥೆ ಇದೆ. ಇಲ್ಲಿ ನಮಾಜ಼್ ಮುನ್ನ ಕಾಲು ತೊಳೆಯಲು ವಿಶೇಷವಾದ ಒಂದು ಕೊಳವೂ ಇದೆ.

    + ಹೆಚ್ಚಿಗೆ ಓದಿ
  • 07ದರ್ಬಾರ್ ಗಡ್

    ದರ್ಬಾರ್ ಗಡ್

    ರಜಪೂತ ಮತ್ತು ಯುರೋಪಿಯನ್ ವಾಸ್ತುಶಿಲ್ಪದ ಮಿಶ್ರಣ ಈ ನಿರ್ಮಾಣದಲ್ಲಿದೆ. ದರ್ಬಾರ್ ಗಡ್ ಅರಮನೆ ಈ ನಗರದ ಅತ್ಯಂತ ಪ್ರಮುಖ ಕಟ್ಟಡಗಳಲ್ಲೊಂದಾಗಿದೆ. ಒಂದಾನೊಂದು ಕಾಲದಲ್ಲಿ ರಾಜರ ವಾಸಸ್ಥಳವಾಗಿದ್ದ ಈ ಅರಮನೆಯನ್ನು 1540 ರಲ್ಲಿ ಕಟ್ಟಲಾಗಿತ್ತಾದರೂ ಇದನ್ನು ಮುಂದೆ ನವೀಕರಿಸಿ ಗಾತ್ರವನ್ನು ಹಿಗ್ಗಿಸಲಾಗಿತ್ತು. ಹೀಗೆ ಮುಂದೆ...

    + ಹೆಚ್ಚಿಗೆ ಓದಿ
  • 08ವಿಲ್ಲಿಂಗ್ಡನ್ ಕ್ರೆಸೆಂಟ್

    ವಿಲ್ಲಿಂಗ್ಡನ್ ಕ್ರೆಸೆಂಟ್

    ಇಂದು ಪ್ರಸಿದ್ಧ ಬಂಧನಿ ಬಟ್ಟೆಗಳನ್ನು ಮಾರಾಟ ಮಾಡುವ ಕೇಂದ್ರವಾಗಿ ಬೆಳೆದ ವಿಲ್ಲಿಂಗ್ಡನ್ ಕ್ರೆಸೆಂಟ್ ಅನ್ನು ರಂಜಿತ್ ಸಿಂಹ ಜೀ ಅವರ ಆದೇಶದ ಮೇರೆಗೆ ಕಟ್ಟಲಾಗಿತ್ತು. ರಂಜಿತ್ ಸಿಂಹ ಜೀ ಯುರೋಪಿನ ಪ್ರವಾಸದ ವೇಳೆ ಯುರೋಪಿಯನ್ ಮಾದರಿಯ ಕಟ್ಟಡಗಳಿಂದ ಬಹಳ ಆಕರ್ಷಿತರಾಗಿದ್ದರು. ಇದು ನವನರಗದಲ್ಲಿದ್ದು ಮೊದಲು ಸ್ಲಮ್ ಇದ್ದ...

    + ಹೆಚ್ಚಿಗೆ ಓದಿ
  • 09ಸೋಲಾರಿಯಂ (ಬಿಸಿಲ ಮನೆ)

    ಸೋಲಾರಿಯಂ (ಬಿಸಿಲ ಮನೆ)

    ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಫ್ರಾನ್ಸ್ ನಲ್ಲಿದ್ದ ಎರಡು ಸೊಲಾರರಿಯಂ ಗಳ ನಾಶದ ನಂತರ ಇದು ಇಂದು ವಿಶ್ವದಲ್ಲಿರುವ ಏಕ ಮಾತ್ರ ಸೊಲಾರಿಯಂ ಆಗಿದೆ. ಇದು ಸೂರ್ಯನ ಬೆಳಕನ್ನು ಸರಿಯಾಗಿ ಅನುಭವಿಸಲು ಕಟ್ಟಿರುವ ರಚನೆಯಾಗಿದೆ. ಸೊಲಾರಿಯಂ ಒಂದು ತಿರುಗುವ ಮನೆಯಾಗಿದೆ. ಇದು  ದಿನವಿಡಿ ತಿರುತ್ತಾ ಇದ್ದು ಚರ್ಮ ರೋಗ, ಕ್ಷಯ...

    + ಹೆಚ್ಚಿಗೆ ಓದಿ
  • 10ಪ್ರತಾಪ್ ವಿಲಾಸ್ ಅರಮನೆ ಮತ್ತು ಪೀಟರ್ ಸ್ಕಾಟ್ ಉದ್ಯಾನ

    ಪ್ರತಾಪ್ ವಿಲಾಸ್ ಅರಮನೆ ಮತ್ತು ಪೀಟರ್ ಸ್ಕಾಟ್ ಉದ್ಯಾನ

    ಜಾಮ್ ನಗರದಲ್ಲಿರುವ ಪ್ರತಾಪ್ ವಿಲಾಸ್ ಅರಮನೆಯನ್ನು 1907 ರಿಂದ 1915 ರ ನಡುವೆ ಕಟ್ಟಲಾಗಿದೆ. ಇದನ್ನು ಯುರೋಪಿಯನ್ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಲಾಗಿದೆ. ಪರಿಸರದ ಬಗ್ಗೆ ಕಾಳಜಿ ಹೊಂದಿದ್ದ ಜಾಮ್ ಸಿಂಗ್ 1968 ರಲ್ಲಿ ಈ ಅರಮನೆಯ ಕೆಳ ಮಹಡಿಯನ್ನು ಉದ್ಯಾನವನವಾಗಿ ಪರಿವರ್ತಿಸಿದರು. ಇಲ್ಲಿ ಹಲವು ಜಾತಿಯ ಜೀವಿಗಳು ಇವೆ....

    + ಹೆಚ್ಚಿಗೆ ಓದಿ
  • 11ರಂಜಿತ್ ಸಾಗರ್ ಅಣೇಕಟ್ಟು

    ರಂಜಿತ್ ಸಾಗರ್ ಅಣೇಕಟ್ಟು

    ಪಕ್ಷಿ ವೀಕ್ಷಕರು ಅತ್ಯಂತ ಹೆಚ್ಚು ಪ್ರೀತಿಸುವ ಸ್ಥಳಗಳಲ್ಲಿ ಇದೂ ಒಂದಾಗಿದೆ. ಇದು ನಗರದ ಜನರಿಗೆ ನೀರನ್ನು ಒದಗಿಸುವ ಅಣೆಕಟ್ಟೂ ಆಗಿದೆ. ಇಲ್ಲಿ ಒಂದು ಸುಂದರವಾದ ಉದ್ಯಾನವನವೂ ಇದೆ. ಹಕ್ಕಿಗಳು ವಲಸೆ ಬರುವ ಸಮಯದಲ್ಲಿ ಇದರ ಸೌಂದರ್ಯ ಹೇಳತೀರದು.

    + ಹೆಚ್ಚಿಗೆ ಓದಿ
  • 12ಚಾಂದಿ ಬಜಾರ್

    ಚಾಂದಿ ಬಜಾರ್

    ಇದು ಜೈನ ದೇವಾಯಲಗಳು ಇರುವ ಸ್ಥಳವಾಗಿದ್ದು ಇಲ್ಲಿ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಇಂದು ಕೇವಲ ಬೆಳ್ಳಿಯ ವಸ್ತುಗಳಲ್ಲದೇ ಇಲ್ಲಿ ಇತರೆ ಲೋಹದ ಕೆಲಸ ಮಾಡುವವರೂ ಇದ್ದಾರೆ ಹಾಗೂ ತಮ್ಮ ಕುಶಲ ಕಲೆಗಳನ್ನು ಅವರು ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ.

    + ಹೆಚ್ಚಿಗೆ ಓದಿ
  • 13ಭುಜಿಯೋ ಕೋಥೋ

    ಭುಜಿಯೋ ಕೋಥೋ

    ಇದು ಪ್ರವಾಸಿಗಳಲ್ಲಿ ಒಂದು ಆಕರ್ಷಕ ಸ್ಥಳವಾಗಿದೆ. ಲಖೋಟಾ ಸರೋವರದ ದಡದ ಮೇಲಿರುವ ಈ ಐದು ಮಹಡಿಗಳ ಕಟ್ಟಡವನ್ನು ಹೊರಗಿನ ರಾಜರ ದಾಳಿಯಿಂದ ಈ ಪ್ರದೇಶವನ್ನು ರಕ್ಷಿಸಲು ಕಟ್ಟಿಸಿದ ಕಟ್ಟಡ ಎಂದು ನಂಬಲಾಗಿದೆ. ಇಲ್ಲಿನ ಮೊದಲ ಮಹಳಿ ಮತ್ತು ಗೋಡೆಗಳಲ್ಲಿ ಸಣ್ಣ ರಂಧ್ರಗಳಿದ್ದು ಇದಕ್ಕೆ ಸಮನಾಗಿ ಅಲ್ಲಿ ಬಂದೂಕುಗುಗಳನ್ನು ಇಡುವ...

    + ಹೆಚ್ಚಿಗೆ ಓದಿ
  • 14ರೋಝಿ ಬಂದರು ಮತ್ತು ಬೇಡಿ ಬಂದರು

    ರೋಝಿ ಬಂದರು ಮತ್ತು ಬೇಡಿ ಬಂದರು

    ರೋಝೀ ಬಂದರು ಮತ್ತು ಬೇಡಿ ಬಂದರು ಪಿಕ್ನಿಕ್ ಹಾಗೂ ಮೀನು ಹಿಡಿಯುವ ಆಸಕ್ತಿ ಉಳ್ಳವರಿಗೆ ಉತ್ತಮವಾದ ತಾಣವಾಗಿದೆ. ಇವುಗಳಲ್ಲಿ ರೋಝೀ ಬಂದರು ಕಛ್ ಖಾರಿಯ ದಡದಲ್ಲಿದೆ. ಬೇಡಿ ಬಂದರು ರಂಗಮತಿ ನದಿಯಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ನವ ಬಂದರಿನಿಂದ ಈ ಎರಡೂ ಬಂದರುಗಳಿಗೆ ಹೋಗಲು ಬೋಟ್ ವ್ಯವಸ್ಥೆ ಇದೆ.

    + ಹೆಚ್ಚಿಗೆ ಓದಿ
  • 15ಮರೈನ್ ನ್ಯಾಷನಲ್ ಪಾರ್ಕ್

    ಮರೈನ್ ನ್ಯಾಷನಲ್ ಪಾರ್ಕ್

    ಭಾರತದಲ್ಲಿ ಇಂತಹ ನೀರಿನ ರಾಷ್ಟ್ರೀಯ ಉದ್ಯಾನ ಮತ್ತೊಂದಿಲ್ಲ. ಇದೊಂದು ಇಲ್ಲಿ ಬಂದಾಗ ತಪ್ಪದೇ ಭೇಟಿ ನೀಡಬೇಕಾದ ಸ್ಥಳವಾಗಿದೆ. ಇದು ಜಾಮ್ ನಗರ ಜಿಲ್ಲೆಯ ಕಛ್ ಖಾರಿಯ ದಕ್ಷಿಣ ಕಿನಾರೆಯಲ್ಲಿದೆ. ಈ ನೀರಿನ ರಾಷ್ಟ್ರೀಯ ಉದ್ಯಾನ ಭಾರತದ ಮೊತ್ತ ಮೊದಲ ನೀರಿನ ಉದ್ಯಾನವಾಗಿದೆ. 1982 ರಲ್ಲಿ ನಿರ್ಮಾಣವಾದ ಈ ಉದ್ಯಾನವನ್ನು ಗುಜರಾತಿನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat