Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಹವಾಮಾನ

ಜಾಮನಗರ್ ಹವಾಮಾನ

ಜಾಮ್ ನಗರದ ಚಳಿಗಾಲ ಬಹಳ ಆಹ್ಲಾದಕರಾವದ ಸಮಯವಾಗಿದೆ. ಬೇಸಿಗೆ ಮತ್ತು ಮಳೆಗಾಲ ಇಲ್ಲಿ ಭೇಟಿ ನೀಡಲು ಸರಿಯಾದ ಸಮಯವಲ್ಲ.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ತನಕ ಇರುವ ಬೇಸಿಗೆಯಲ್ಲಿ ಜಾಮ್ ನಗರ ಸಮುದ್ರಕ್ಕೆ ಸಮೀಪ ಇರುವ ನಗರವಾದ ಕಾರಣ ಬಹಳ ಬಿಸಿಯಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ತಾಪಮಾನ 26 ರಿಂದ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಮಳೆಗಾಲ

ಜೂನ್ ನಲ್ಲಿ ಆರಂಭಆಗುವ ಮಳೆಗಾಲ ಸೆಪ್ಟೆಂಬರ್ ತನಕ ಇರುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಹೆಚ್ಚಿನ ಮಳೆ ಇರುತ್ತದೆ.

ಚಳಿಗಾಲ

ಚಳಿಗಾಲ ಜಾಮ್ ನಗರವನ್ನು ಭೇಟಿ ಮಾಡಲು ಅತ್ಯಂತ ಉತ್ತಮವಾದ ಅವಧಿಯಾಗಿದೆ. ಅಕ್ಟೋಬರ್ ನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿಯ ತನಕ ಉತ್ತಮ ಹವಾಮಾನವನ್ನು ನೀಡುತ್ತದೆ. ಇವುಗಳಲ್ಲಿ ಫೆಬ್ರವರಿ ಅತ್ಯಂತ ಚಳಿ ಇರುವ ತಿಂಗಳಾಗಿದೆ. ಈ ಅವಧಿಯಲ್ಲಿ ಇಲ್ಲಿನ ತಾಪಮಾನ 12 ರಿಂದ 32 ಡಿಗ್ರಿ ಸೆಲ್ಸಿಯಸ್ ಇರುತ್ತದೆ.