ಪಕ್ಷಿ ಪ್ರೀಯರಿಗೆ ಜಾಮ್ ನಗರದಲ್ಲಿ ಸಾಕಷ್ಟು ತಾಣಗಳಿವೆ. ಖಿಜಾಡಿಯಾ ಪಕ್ಷಿಧಾಮ ಇವುಗಳಲ್ಲಿ ಒಂದು. ಇಲ್ಲೂ ವಲಸೆ ಬರುವ ಹಕ್ಕಿಗಳು ಇವೆ. ಪರಿಸರ ಸಂಶೋಧನೆ ಮಾಡುವ ಆಸಕ್ತಿ ಉಳ್ಳವರಿಗೆ ಇದು ಸರಿಯಾದ ಸ್ಥಾನ ಹಾಗು ಇದೇ ಉದ್ದೇಶದಿಂದ ಇದನ್ನು 1920 ರಲ್ಲಿ ಕಟ್ಟಾಯಿತು. ಈ ಪಕ್ಷಿಧಾಮದಲ್ಲಿ ಎರಡು ಮಾನವ ನಿರ್ಮಿತ ಅಣೆಕಟ್ಟುಗಳಿವೆ. ಇವುಗಳಲ್ಲಿ ಒಂದು ಸಿಹಿನೀರಿನ ಅಣೆಕಟ್ಟಾಗಿದೆ ಇನ್ನೊಂದು ಉಪ್ಪು ನೀರಿನ ಅಣೆಕಟ್ಟಾಗಿದೆ.
ಇದು ಹಲವು ಹಕ್ಕಿಗಳಿಗೆ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಅವುಗಳೆಂದರೆ: ದೊಡ್ಡ ಕೊಕ್ಕಿನ ಗುಳುಮುಳುಕ, ಸಣ್ಣ ಗಾತ್ರದ ಮುಳುಗು ಹಕ್ಕಿಗಳು, ಕೂಟ್, ಬಾಲವುಳ್ಳ ಜಾಕನ್, ನೇರಳೆ ಬಣ್ಣದ ಜಂಬುಕೋಳಿ ಫಸೆಂಟ್. ಇವುಗಳಲ್ಲದೆ ಇಲ್ಲಿಗೆ ವಲಸೆ ಬರುವ ಹಕ್ಕಿಗಳಲ್ಲಿ ಪ್ರಮುಖವಾಗಿ ವ್ಯಾಂಗ್, ಕವಲುತೋಕೆ ಹಕ್ಕಿ, ವಾಟರ್ ಫ್ಲೋವ್ಸ್ ಮತ್ತು ಮಾರ್ಟಿನ್ ಗಳಾಗಿವೆ. ಇಲ್ಲಿಗೆ ಆಟೋ ರಿಕ್ಷಾ ಅಥವಾ ಖಾಸಗಿ ವಾಹನದಲ್ಲಿ ತಲುಪಬಹುದಾಗಿದೆ.