ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ಮೀನಿನ ಆಕಾರದ ಈ ಅಕ್ವೇರಿಯಂ 220 ಮೀಟರ್ಗೂ ಅಧಿಕ ಉದ್ದವಾಗಿದ್ದು, ಭಾರತದಲ್ಲೆ ದೊಡ್ಡದಾದ ಭೂಗತ ಅಕ್ವೇರಿಯಮ್ ಇದು ಎಂದು ಪರಿಗಣಿಸಲಾಗಿದೆ. ಸಮುದ್ರ ನೀರಿನ ಮೀನುಗಳ ಹೊರತಾಗಿ ಸಿಹಿನೀರಿನ ಮೀನುಗಳನ್ನು ಇದರಲ್ಲಿ ವಿಕ್ಷೀಸಬಹುದಾಗಿದೆ. 24 ಅಕ್ವೇರಿಯಂ ಗುಹೆಗಳನ್ನು ಹೊಂದಿರುವ ಈ ಮತ್ಸ್ಯಾಲಯವು 13 ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಗುಹಾ ಅಕ್ವೇರಿಯಮ್ ಗಳನ್ನೂ ಸಹ ಹೊಂದಿದೆ.
ಈ ಅಕ್ವೇರಿಯಂ 400 ವಿವಿಧ ಜಾತಿಯ ಮೀನುಗಳ ನೆಲೆಯಾಗಿದೆ. ಮೀನು ನೋಡುವದರಿಂದ ಹಿಡಿದು, ಪ್ರವಾಸಿಗರು ಇಲ್ಲಿ ಮಲ್ಟಿಮೀಡಿಯಾ ಸೆಂಟರ್, ಸಾರ್ವಜನಿಕ ಗ್ಯಾಲರಿ ಮತ್ತು ಈ ಸೈಟ್ ನಲ್ಲಿ ಸ್ಥಾಪಿಸಲ್ಪಟ್ಟಿರುವ ಜಲವಾಸಿಗಳ ಕುರಿತು ಅರಿವು ಮೂಡಿಸುವ ಪ್ರಯೋಗಾಲಯ, ಮ್ಯೂಸಿಯಮ್ ಗಳನ್ನೂ ಅನ್ವೇಷಿಸಬಹುದು.


Click it and Unblock the Notifications