Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊಸೂರು » ಆಕರ್ಷಣೆಗಳು » ಕೆಲವರಪಳ್ಳಿ ಆಣೆಕಟ್ಟು

ಕೆಲವರಪಳ್ಳಿ ಆಣೆಕಟ್ಟು, ಹೊಸೂರು

1

ತಮಿಳುನಾಡಿನಲ್ಲಿರುವ ಕೆಲವರಪಳ್ಳಿ ಆಣೆಕಟ್ಟನ್ನು ಪೊನ್ನೈಯರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಮತ್ತು ಇದು 13.50 ಮೀಟರ್ ವರೆಗಿನ ಎತ್ತರವನ್ನು ಹೊಂದಿದ್ದು 480 ಘನ ಅಡಿಗಳಷ್ಟು ನೀರು ಶೇಖರಿಸುವ ಸಾಮರ್ಥ್ಯವನ್ನು ಹೊಂದಿದೆ. ಆಣೆಕಟ್ಟಿನಿಂದ ಕಡಲೂರು, ಧರ್ಮಪುರಿ, ಕೃಷ್ಣಗಿರಿ ಮತ್ತು ವೆಲ್ಲೂರು ಜಿಲ್ಲೆಗಳಿಗೆ ನೀರನ್ನು ಒದಗಿಸಲಾಗುತ್ತದೆ. ಇದು ಹೊಸೂರಿನಿಂದ ಸುಮಾರು 10 ಕಿ.ಮೀ ದೂರದಲ್ಲಿದೆ ಮತ್ತು ಬೆಂಗಳೂರಿನಿಂದ ಕೆಲವರಪಳ್ಳಿ ಕಡೆಗೆ ಹೋಗುವ ರಸ್ತೆ ಮಾರ್ಗದ ಮಧ್ಯದಲ್ಲಿದೆ.

ಇದೊಂದು ಪರಿಪೂರ್ಣ ಪ್ರವಾಸಿತಾಣವಾಗಿದ್ದು, ಹೊಸೂರಿನ ನಿವಾಸಿಗಳಿಗೆ ಹಾಗೂ ಪ್ರವಾಸಿಗರಿಗೆ ಅದ್ಭುತ ಪಿಕ್ನಿಕ್ ಸ್ಥಳವಾಗಿದೆ. ಇದರ ಜೊತೆಗೆ ಇಲ್ಲಿರುವ ಮಕ್ಕಳ ಉದ್ಯಾನ ಎಲ್ಲರಿಗೂ ಕೆಲವರಪಳ್ಳಿ ಆಣೆಕಟ್ಟು ಇಷ್ಟವಾಗುವಂತಹ ಸ್ಥಳವಾಗಿದೆ. ಮಾಲಿನ್ಯದಾಯಕ ನಗರಗಳಲ್ಲಿ ಅಲ್ಲಿನ ಗೊಂದಲ, ಒತ್ತಡಗಳಿಂದ ಬೇಸತ್ತ ಪ್ರಕೃತಿ ಪ್ರಿಯರಿಗೆ ಇಲ್ಲಿನ ಪ್ರಶಾಂತ ವಾತಾವರಣ ಉತ್ತಮ ಅನುಭವವನ್ನು ನೀಡುತ್ತದೆ. ಪಕ್ಷಿ ವೀಕ್ಷಕರಿಗೆ, ಪೆಲಿಕನ್ ಮತ್ತು ಚಮಚಕೊಕ್ಕಿನ ಪಕ್ಷಿಗಳು ಸೇರಿದಂತೆ ವಿವಿಧ ವಲಸೆ ಪಕ್ಷಿಗಳು ಕಣ್ಣಿಗೆ ಔತಣವನ್ನು ನೀಡುತ್ತವೆ. ಸ್ಥಳೀಯ ಸಂಸ್ಕೃತಿಯ ಬಗ್ಗೆ ಕುತೂಹಲ ಇರುವವರು ಮಾಲಿನ್ಯ ಮುಕ್ತವಾದ ಉಲ್ಲಾಸಕರ ವಾತಾವರಣವಿರುವ ಜಲಾಶಯದ ಪಕ್ಕದಲ್ಲಿರುವ ಚೆನ್ನತ್ತೂರ್ ಗ್ರಾಮಕ್ಕೆ ಭೇಟಿ ಮಾಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue