Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊಸೂರು » ಹವಾಮಾನ

ಹೊಸೂರು ಹವಾಮಾನ

ಹೊಸೂರು ನಗರಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ ಚಳಿಗಾಲ. ಅಂದರೆ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳುಗಳ ನಡುವಿನ ಅವಧಿಯಾಗಿದೆ. ಈ ಸಮಯದ ಸೌಮ್ಯ ಆಹ್ಲಾದಕರ ಚಳಿಗಾಲ, ಹೊಸೂರಿಗೆ ತೆರಳುವ ಪ್ರವಾಸಿಗರಿಗೆ ಬಹಳಷ್ಟು ಖುಷಿಯನ್ನು ನೀಡುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಹೊಸೂರಿನ ಹೆಚ್ಚಿನ ಭಾಗಗಳು ಆಹ್ಲಾದಕರ ಮತ್ತು ಶುಷ್ಕವಾಗಿರುತ್ತದೆ. ಭಾರೀ ಕೈಗಾರೀಕರಣದ ಕಾರಣ, ಬೇಸಿಗೆಯಲ್ಲಿ ಸರಾಸರಿ ತಾಪಮಾನ ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಬೇಸಿಗೆಯಲ್ಲಿ ತಾಪಮಾನ ಸಾಮಾನ್ಯವಾಗಿ  20 ಡಿ. ಸೆ ನಿಂದ 35 ಡಿ.ಸೆಗೆ ಏರುತ್ತದೆ. ಮಾರ್ಚ್ ನಿಂದ ಮೇ ತಿಂಗಳಿನವರೆಗೆ ಇಲ್ಲಿ ಬೇಸಿಗೆ ಕಾಲ. ಏಪ್ರೀಲ್ ಅತ್ಯಂತ ಬಿಸಿಲಿರುವ ತಿಂಗಳು.

ಮಳೆಗಾಲ

ಹೊಸೂರಿನಲ್ಲಿ ಮಳೆಗಾಲ ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ ಅಂತ್ಯದಲ್ಲಿ ಮುಗಿಯುತ್ತದೆ. ದಕ್ಷಿಣ ಪಶ್ಚಿಮ ಮತ್ತು ಈಶಾನ್ಯ ಮಾರುತಗಳು ತರುವ ಮಳೆ, ಬೇಸಿಗೆ ಕಾಲದ ಶುಷ್ಕತೆ ಮತ್ತು ಸ್ವಲ್ಪ ಬಿಸಿ ಹವಾಮಾನಕ್ಕೆ ಪರಿಹಾರ ನೀಡುತ್ತವೆ.

ಚಳಿಗಾಲ

ಉಷ್ಣವಲಯದ ಹವಾಮಾನದೊಂದಿಗೆ ಹೊಸೂರು, ಸೌಮ್ಯ ಚಳಿಗಾಲವನ್ನು ಅನುಭವಿಸುತ್ತದೆ. ಈ ಸಮಯದ ತಾಪಮಾನ 12- 24 ಡಿ.ಸೆ. ಹೊಸೂರಿನಲ್ಲಿ ಅಕ್ಟೋಬರ್ ನಿಂದ ಫೆಬ್ರವರಿಯವರೆಗೆ ಚಳಿಗಾಲವಿರುತ್ತದೆ. ಈ ಸಮಯದಲ್ಲಿ, ಇತರ ಋತುಗಳಿಗಿಂತ ಹೆಚ್ಚು ಪ್ರವಾಸಿಗರ ಒಳಹರಿವನ್ನು ಕಾಣಬಹುದು.