ವೆಂಕಟಚಲಪತಿ ದೇವಾಲಯ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ವೆಂಕಟಚಲಪತಿ ದೇವಾಲಯ

 ವೆಂಕಟಚಲಪತಿ ದೇವಾಲಯಯವು ಗುರುವಾಯೂರಿನ ಪಾರ್ಥಸಾರಥಿ ದೇವಾಲಯದ ಬಳಿ ಸ್ಥಾಪಿತವಾಗಿದೆ. ಈ ದೇವಾಲಯವನ್ನು ಭಗವಾನ್ ವೆಂಕಟಚಲಪತಿ ಗಾಗಿ ಸಮರ್ಪಿಸಲಾಗಿದೆ. ಭಗವಾನ್ ವಿಷ್ಣುವಿನ ಇನ್ನೊಂದು ಅವತಾರದ ರೂಪವೇ ವೆಂಕಟಚಲಪತಿ ದೇವರು. ಸಹಸ್ರಾರು ಭಕ್ತಾದಿಗಳು ಈ ದೇವಾಲಯಕ್ಕೆ ಬರುತ್ತಾರೆ. ತನ್ನ ಜೀವನದ ಸಕಲ ಕಷ್ಟಗಳೂ ದೂರವಾಗಿ ಸಂತೋಷಕರವಾದ ಉತ್ತಮ ಅದೃಷ್ಟದೊಂದಿಗೆ ಒಳ್ಳೆಯ ಭವಿಷ್ಯ ದೊರೆಯುತ್ತದೆ ಎಂಬ ನಂಬಿಕೆಯನ್ನಿಟ್ಟು ತೈಲಾಭಿಷೇಕವನ್ನು ಮಾಡಿಸಲು ಜನರು ಈ ದೇವಾಲಯಕ್ಕೆ ಮುಗಿ ಬೀಳುತ್ತಾರೆ. ಚಳಿಗಾಲದಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚು.

ಈ ದೇವಾಲಯವು ಅತ್ಯಂತ ಮನಮೋಹಕ ಭೂಪ್ರದೇಶದಲ್ಲಿ ನೆಲೆಯಾಗಿದ್ದು, ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಮಲಿನಗೊಳ್ಳದ ಹಾಗೂ ಶಾಂತವಾದ ವಾತಾವರಣವನ್ನು ಹೊಂದಿದೆ. ಅಲ್ಲದೇ ಅತ್ಯಂತ ಪ್ರಭಾವಶಾಲಿ ಹಿನ್ನೆಲೆಯಿಂದ ಕೋಡಿದ ಈ ಸ್ಥಳಕ್ಕೆ ಭೇಟಿ ನೀಡಿದರೆ ನಿಮ್ಮ ಮನಸ್ಸಿಗೆ ಸಾಂತ್ವಾನ ಸಿಗುವುದಲ್ಲದೆ ನೀವು ನಿಮ್ಮ ಎಲ್ಲಾ ಒತ್ತಡ, ಉದ್ವೇಗಗಳಿಂದ ಕೊಂಚ ಹೊತ್ತು ದೂರವುಳಿಯಬಹುದು.

Please Wait while comments are loading...