ಹರಿಕನ್ಯಾಕ / ಹರಿಕನ್ಯಕ ದೇವಾಲಯ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ಹರಿಕನ್ಯಾಕ / ಹರಿಕನ್ಯಕ ದೇವಾಲಯ

 ಹರಿಕನ್ಯಕ ದೇವಾಲಯವು ಅರಿಯೂರು ಎಂಬಲ್ಲಿ ಸ್ಥಾಪಿತವಾಗಿದೆ. ಇದೊಂದು ಪವಿತ್ರ ನಗರವೆನಿಸಿದ ಗುರುವಾಯೂರ್ ನಲ್ಲಿರುವ ಒಂದು ಚಿಕ್ಕ ಹಳ್ಳಿ. ಪೆರುಮತ್ತಚ್ಚನ್ (Perumthachan) ಎಂಬ ಪ್ರಾಚೀನ ಪೌರಾಣಿಕ ಬಡಗಿಯಿಂದ ಈ ಹಳೆಯ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ.

ಹರಿಕನ್ಯಾಕ ದೇವಾಲಯ ಭಗವಾನ್ ವಿಷ್ಣುವಿನ ದೇವಾಲಯವಾಗಿದೆ. ಹರಿಕನ್ಯಾಕ ಭಗವಾನ್  ಶ್ರೀ ವಿಷ್ಣುವಿನ ಒಂದು ಕಟ್ಟಾ ರೂಪವಾಗಿದೆ. ಪೌರಾಣಿಕ ಕಥೆಯಂತೆ, ಅಯ್ಯಪ್ಪ ಸ್ವಾಮಿಯು ಮೋಹಿನಿ ಅಥವಾ ಹರಿಕನ್ಯಕ ಹಾಗೂ ಮಹಾ ವಿಷ್ಣುವಿನ ಸುಪುತ್ರ ಎಂದು ಹೇಳಲಾಗುತ್ತದೆ. ಹಿಂದಿನ ಹರಿಕನ್ಯಕಪುರಂ ಎಂದಿದ್ದ ಹಳ್ಳಿಯ ಹೆಸರು ಇಂದು ಅರಿಯೂರ್ ಎಂದು ಬದಲಾಗಿದೆ. ಇದು 32 ದೇಶಂ ನ ರಾಜಧಾನಿ ಯಾಗಿತ್ತು.

ಹರಿಕನ್ಯಾಕ ದೇವಾಲಯವು ಭಾರತದ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಡುತ್ತಿದೆ. ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಅದರಲ್ಲೂ ಮಾರ್ಚ್ – ಎಪ್ರೀಲ್ ನಲ್ಲಿ 15 ದಿನಗಳ ಕಾಲ ಆಚರಿಸಲಾಗುವ ಹಬ್ಬದ ಸಂದರ್ಭದಲ್ಲಿ ಇಲ್ಲಿಗೆ ಬರುವ ಜನರ ಸಂಖ್ಯೆ ಅಪಾರ.

Please Wait while comments are loading...