Search
  • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಮೋದಿ ನಗರ್

ಮೋದಿ ನಗರ್, ಘಜಿಯಾಬಾದ್

1

ಮೋದಿನಗರವನ್ನು ಉತ್ತರ ಪ್ರದೇಶದ ಪ್ರಮುಖ ಉದ್ಯಮಿ ಮನೆತನದ ಸೇಠ್ ಗುಜರ್ ಮಾಲ್ ಮೋಡಿಯವರು ಸ್ಥಾಪಿಸಿದರು. ಇದು ಘಜಿಯಾಬಾದ್‍ನಿಂದ 25 ಕಿ.ಮೀ ದೂರದಲ್ಲಿ ದೆಹಲಿ- ಮಸ್ಸೂರಿ ರಾಷ್ಟ್ರೀಯ ಹೆದ್ದಾರಿ ( NH- 58) ಯಲ್ಲ್ಲಿ ನೆಲೆಗೊಂಡಿದೆ. ಮೋದಿನಗರ್ ಎಂಬುದು ಬೇರೆ ನಗರಗಳಿಗೆ ಹೋಲಿಸಿದರೆ, ಹೊಚ್ಚ ಹೊಸ ರೀತಿಯ ನಗರ. 1975ರಲ್ಲಿ ಘಜಿಯಾಬಾದನ್ನು ಜಿಲ್ಲಾಕೇಂದ್ರವಾಗಿ ಅಸ್ತಿತ್ವಕ್ಕೆ ತಂದಾಗ ಮೋಡಿನಗರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲಾಯಿತು.

ಈ ನಗರದಲ್ಲಿ ರಾಣಿ ಬಾಲಾ ಬಾಯಿ ಸಿಂಧಿಯಾರವರು ನಿರ್ಮಿಸಿರುವ ಹಳೆಯ ಹತ್ತೊಂಬತ್ತನೆಯ ಶತಮಾನದ ದೇವಾಲಯವನ್ನು ನಾವು ಕಾಣಬಹುದು. ಅಲ್ಲದೆ ಇಲ್ಲಿ ಮೋಡಿ ಕುಟುಂಬದವರು ಸ್ಥಾಪಿಸಿರುವ ಹಲವಾರು ಕಾರ್ಖನೆಗಳನ್ನು ಸಹ ನಾವು ನೋಡಬಹುದು. ಅವುಗಳಲ್ಲಿ 1933ರಲ್ಲಿ ನಿರ್ಮಾಣಗೊಂಡ ಸಕ್ಕರೆ ಕಾರ್ಖನೆಯು ಪ್ರಮುಖವಾದುದಾಗಿದೆ.

ಮೋದಿನಗರ್ ಸುಮಾರು 571 ಎಕರೆ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ಒಂದಾನೊಂದು ಕಾಲದಲ್ಲಿ ಇದು ನವಾಬ್ ಜಫರ್ ಅಲಿ ಸ್ಥಾಪಿಸಿದ ಬೇಗಮಬಾದ್ ಎಂಬ ಐತಿಹಾಸಿಕ ಪಟ್ಟಣದ ಒಂದು ಭಾಗವಾಗಿತ್ತು. ಈತನು ಇದನ್ನು ತನ್ನ ಮಡದಿಗಾಗಿ ನಿರ್ಮಿಸಿದನು. ಆಕೆಯು ಕಾಲವಾದ ನಂತರ ಇದನ್ನು ಆಕೆಯ ಹೆಸರಿನಲ್ಲಿ ಬೇಗಮಬಾದ್ ಎಂದು ಕರೆಯಲಾಯಿತು.

ಮೋದಿನಗರದಲ್ಲಿ ಮೋಡಿ ಕುಟುಂಬದವರು ನಿರ್ಮಿಸಿರುವ ಸುಂದರ ದೇವಾಲಯಗಳನ್ನು ನಾವು ಕಾಣಬಹುದು. ಲಕ್ಷ್ಮೀ ನಾರಾಯಣ ದೇವಾಲಯ ಅಥವಾ ಸ್ಥಳೀಯರಿಂದ ಮೋಡಿ ದೇವಾಲಯವೆಂದೆ ಕರೆಯಲ್ಪಡುವ ದೇವಾಲಯ ಇಲ್ಲಿ ಭಾರೀ ಖ್ಯಾತಿ ಪಡೆದಿದೆ.  ಈ ದೇವಾಲಯವನ್ನು ಸುಮಾರು 15.2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed