Search
  • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಫರಿದ್‍ನಗರ್

ಫರಿದ್‍ನಗರ್, ಘಜಿಯಾಬಾದ್

1

ಫರಿದ್‍ನಗರ್ ಎಂಬುದು ಘಜಿಯಾ ಬಾದ್ ಜಿಲ್ಲೆಯಲ್ಲಿರುವ ಮೋಡಿನಗರ್ ತಾಲ್ಲೂಕಿನ ಒಂದು ಸಣ್ಣ ಪಟ್ಟಣವಾಗಿದೆ. ಇದು ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಬೇಗಮಬಾದ್ - ಹಪುರ್ ರಸ್ತೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಭೋಜ್‍ಪುರ್ ಬ್ಲಾಕಿನಿಂದ ಇಲ್ಲಿಗೆ ಅಂದಾಜು 2 ಕಿ.ಮೀ ದೂರವಾಗುತ್ತದೆ.

ಈ ಪಟ್ಟಣವು ಮೊಘಲರ ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿದ್ದ ಫರಿದ್ -ಉದ್- ದಿನ್ ಖಾನ್ ಎಂಬ ಅಧಿಕಾರಿಯಿಂದ ಈ ಹೆಸರನ್ನು ಪಡೆದಿದೆ. ಚಕ್ರವರ್ತಿಯು ಈ ಅಧಿಕಾರಿಯ ಪ್ರಾಮಾಣಿಕತೆಯನ್ನು ಮೆಚ್ಚಿ ಜಾಗೀರಾಗಿ ಈ ಊರನ್ನು ನೀಡಿದನಂತೆ. ಈ ಜಾಗೀರ್ ಪಿಲ್ಖುವಾ ಮತ್ತು ಬೇಗಮಬಾದ್ ನಡುವಿನ 17 ಹಳ್ಳಿಗಳನ್ನು ಒಳಗೊಂಡಿದೆ.

ಫರಿದ್‍ನಗರ್ ಎಂಬುದು ಒಂದು ದಂಡು ಪಟ್ಟಣವಾಗಿತ್ತು. ಮೊಘಲರ ಕಾಲದಲ್ಲಿ ಇದನ್ನು ರಕ್ಷಣಾ ಪಡೆಯವರ ಅದರಲ್ಲಿಯು ಬಲೊಚ್ ಸೈನಿಕರ ನೆಲೆಯಾಗಿ ಬಳಸಲಾಗುತ್ತಿತ್ತು. ಅಲ್ಲದೆ ಅಕ್ಬರ್ ಮತ್ತು ಆತನ ಮಗ ಜಹಂಗೀರನ ಕಾಲದಲ್ಲಿ ಈ ನಗರದಲ್ಲಿ ಟಂಕಶಾಲೆಯನ್ನು ತೆರೆದು, ನಾಣ್ಯಗಳನ್ನು ಟಂಕಿಸುತ್ತಿದ್ದರು.

ಈ ನಗರದಲ್ಲಿದ್ದ ವಾಸದ ಪ್ರದೇಶವನ್ನು ಗರ್ಹಿ ಬಲ್ಲೊಚನ್ ಎಂದು ಕರೆಯುತ್ತಿದ್ದರು.ಇದನ್ನು ಬಲ್ಲೊಚ್ ಸೈನಿಕರ ಮತ್ತು ಅವರ ಕುಟುಂಬಸ್ಥರು ವಾಸಿಸಲು ಬಳಸಲಾಗುತ್ತಿತ್ತು. ಇದರ ಪ್ರವೇಶ ದ್ವಾರವು ಕಬ್ಬಿಣದ ದ್ವಾರಗಳಿಂದ ಕೂಡಿದೆ. ಗರ್ಹಿ ಬಲ್ಲೊಚನ್ ಬಳಿಯಲ್ಲಿ ಜಾಮ ಮಸೀದಿ ಎಂಬ ಸುಂದರವಾದ ಮಸೀದಿ ನೆಲೆಗೊಂಡಿದೆ. ಅಕ್ಬರನ ಆಳ್ವಿಕೆಯ ಕಾಲದಲ್ಲಿ ಫರಿದ್‍ನಗರ್ ಉಚ್ಛ್ರಾಯ ಸ್ಥಿತಿಯಲ್ಲಿತ್ತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed