ಗ್ಯಾಂಗ್ಟಾಕ್ ನಲ್ಲಿ ದಿ ರಿಡ್ಜ್ ಅತ್ಯಂತ ಸುಂದರ ವಸತಿ ಸಂಕೀರ್ಣವಾಗಿದೆ. ಇದು ಸ್ಥಳೀಯರಿಗೆ ಹಾಗೂ ಪ್ರವಾಸಿಗಳ ಫೇವರಿಟ್ ತಾಣ. ನಮ್ಗಾಯಲ್ ರಾಜರ ಅರಮನೆಯ ಪ್ರವೇಶ ದ್ವಾರದಿಂದ ಸಿಕ್ಕಿಂನ ಮೊದಲ ರಾಜಕೀಯ ಅಧಿಕಾರಿ ಕ್ಲೌಡ್ ವೈಟ್ ನೆನಪಿಗಾಗಿ ನಿರ್ಮಿಸಿದ ವೈಟ್ ಹಾಲ್ ಕಟ್ಟಡದ ತನಕ ಇದು ವಿಸ್ತರಿತವಾಗಿದೆ.
ರಿಡ್ಜ್ ನ ಪಾರ್ಕ್ ನ್ನು ಹೊಂದಿದ್ದು, ಅದರ ಒಳಗಡೆ ಹವಾ ಘರ್ ಇದೆ. ಇದರಲ್ಲಿರುವ ಬೆಂಚುಗಳ ಸಾಲಿನಲ್ಲಿ ಪ್ರವಾಸಿಗಳಿಗೆ ವಿಶ್ರಾಂತಿ ಪಡೆಯಲು ಪ್ರಶಾಂತವಾದ ಸ್ಥಳವಾಗಿದೆ. ಇಲ್ಲೇ ಸುತ್ತುತ್ತಿರುವ ಫೋಟೊಗ್ರಾಪರ್ ಗಳ ಮೂಲಕ ನಿಮ್ಮ ಫೋಟೊಗಳನ್ನು ಕ್ಲಿಕ್ಕಿಸಬಹುದು.
ವೈಟ್ ಹಾಲ್ ನ ವಿರುದ್ಧ ದಿಕ್ಕಿನಲ್ಲಿರುವ ಗಾಜಿನ ಮನೆಯಲ್ಲಿ ವರ್ಷಪೂರ್ತಿ ನಡೆಯುವ ಹೂಗಳ ಹಬ್ಬವನ್ನು ರಿಡ್ಜ್ ಗೆ ಭೇಟಿ ನೀಡಿದ ಪ್ರತಿಯೊಬ್ಬರು ವೀಕ್ಷಿಸಲೇ ಬೇಕು. ಮಾರ್ಚ್ ನಲ್ಲಿ ಆರಂಭವಾಗುವ ಈ ಪುಷ್ಪಗಳ ಹಬ್ಬ ವರ್ಷದ ಅಂತ್ಯದತನಕವೂ ಇರುತ್ತದೆ ಮತ್ತು ಇದು ಜೀವನದಲ್ಲೊಮ್ಮೆ ವೀಕ್ಷಿಸಲೇಬೇಕಾದ ಪುಷ್ಪ ಮೇಳವಾಗಿದೆ.


Click it and Unblock the Notifications