ನಾಥು ಲಾ ಪಾಸ್, ಗ್ಯಾಂಗ್ಟಾಕ್

ನಾಥು ಲಾ ಎನ್ನುವುದು ಚೀನಾದ ಸ್ವಾಯತ್ತ ಪ್ರದೇಶ ಟಿಬೆಟ್ ನ್ನು ಸಂಪರ್ಕಿಸುವ ಪರ್ವತ ಪಾಸ್ ಆಗಿದೆ. ಇದು ಸಮುದ್ರ ಮಟ್ಟಕ್ಕಿಂತ 4,310 ಮೀ ಎತ್ತರದಲ್ಲಿದೆ. ಇದು ಗ್ಯಾಂಗ್ಟಾಕ್ ನಿಂದ 54 ಕಿ.ಮೀ. ಪೂರ್ವದಲ್ಲಿದೆ. ಗ್ಯಾಂಗ್ಟಾಕ್ ನಲ್ಲಿ ಸೂಕ್ತ ಅನುಮತಿಯನ್ನು ಪಡೆದುಕೊಂಡ ಭಾರತೀಯರು ಮಾತ್ರ ಬುಧವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಈ ಪಾಸ್ ಗೆ ಭೇಟಿ ನೀಡಬಹುದು. ಭಾರತದ ಯುದ್ಧ ಸ್ಮಾರಕವೂ ಇಲ್ಲಿದೆ.

ಈ ಪ್ರದೇಶದಲ್ಲಿ ಜನರು ವಾಸಿಸುವುದು ತುಂಬಾ ಕಡಿಮೆ. ಆದರೆ ಗಡಿಯ ಇಕ್ಕೆಲಗಳಲ್ಲಿ ಸೈನಿಕರು ಗಡಿಕಾಯುತ್ತಾ ಇರುತ್ತಾರೆ. ಈ ಪಾಸ್ ಅನೇಕ ಕಡೆ ಮುಳುಗು ವಲಯ ಹೊಂದಿದೆ ಮತ್ತು ಭೂಕುಸಿತಕ್ಕೂ ಇದು ಗುರಿಯಾಗಿದೆ.ನಾಥು ಎಂದರೆ ಆಲಿಸುವ ಕಿವಿಗಳೆಂದರ್ಥ ಮತ್ತು ಲಾ ಎಂದರೆ ಟಿಬೆಟ್ ಭಾಷೆಯಲ್ಲಿ ಪಾಸ್ ಎಂದರ್ಥ. ಚೀನಾ ಮತ್ತು ಭಾರತ ಮಧ್ಯೆ ಇರುವ ಮುಕ್ತ ವ್ಯಾಪಾರ ಮಾರ್ಗಗಲ್ಲಿ ನಾಥು ಲಾ ಪಾಸ್ ಕೂಡ ಒಂದಾಗಿದೆ.  1962ರಲ್ಲಿ ನಡೆದ ಸಿನೊ-ಇಂಡಿಯಾ ಯುದ್ಧದ ವೇಳೆ ಈ ಪಾಸ್ ನ್ನು ಮುಚ್ಚಲಾಗಿತ್ತು. ಆದರೆ 2006ರಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಇದನ್ನು ಮತ್ತೆ ತೆರೆಯಲಾಗಿತ್ತು. ಪಾಸ್ ನ್ನು ಮತ್ತೆ ತೆರೆಯುವ ವೇಳೆ ಎರಡು ರಾಷ್ಟ್ರಗಳ ಸೇನೆಯ ಅಧಿಕಾರಿಗಳು ಹಾಜರಿದ್ದು, ಸಂಭ್ರಮವನ್ನು ಆಚರಿಸಿದ್ದರು.

ಪಾಸ್ ತೆರೆಯುವುದರಿಂದ ಈ ಭಾಗದ ವ್ಯಾಪಾರ ಮತ್ತು ಆರ್ಥಿಕತೆ ಉತ್ತಮವಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಇದುವರೆಗೆ ಯಾವುದೇ ರೀತಿಯ ಅಭಿವೃದ್ಧಿ ಕಂಡುಬಂದಿಲ್ಲ. ಪಾಸ್ ತೆರೆದಿರುವುದರಿಂದ ಈ ಭಾಗದ ಬೌದ್ಧ ಹಾಗೂ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಪ್ರಯಾಣದ ಅಂತರ ಕಡಿಮೆಯಾಗಿರುವುದು ಇದರಿಂದ ಆದ ದೊಡ್ಡ ಲಾಭ.

ನಾಥು ಲಾ ದ ಭೌಗೋಳಿಕತೆ

ಗ್ಯಾಂಗ್ಟಾಕ್ ನ ಪೂರ್ವದಿಂದ 54 ಕಿ.ಮೀ. ದೂರದಲ್ಲಿ ಈ ಪಾಸ್ ಇದೆ. ಅತಿಯಾದ ಹಿಮಪಾತದಿಂದಾಗಿ ಚಳಿಗಾಲದಲ್ಲಿ ಈ ಪಾಸ್ ನ್ನು ಮುಚ್ಚಲಾಗುತ್ತದೆ. ಈ ಪ್ರದೇಶದ ಮಾರ್ಗಗಳ ಕೆಲಸಗಳನ್ನು ಭಾರತೀಯ ಸೇನೆಯ ಗಡಿ ರಸ್ತೆ ಸಂಸ್ಥೆ ನೋಡಿಕೊಳ್ಳುತ್ತದೆ.

ಸಾರಿಗೆ

ನಾಥು ಲಾ ಪಾಸ್ ಗೆ ಇರುವ ಹತ್ತಿರದ ರೈಲ್ವೆ ನಿಲ್ದಾಣ ನ್ಯೂ ಜಾಲಪೈಗುರಿ ನಿಲ್ದಾಣ. ಡಾರ್ಜಲಿಂಗ್ ನ ಸೆವೊಕ್ ನಿಂದ ಸಿಕ್ಕಿಂನ ಗ್ಯಾಂಗ್ಟಾಕ್ ಗೆ ರೈಲ್ವೆಯನ್ನು ವಿಸ್ತರಿಸಲು ಭಾರತ ಸರ್ಕಾರ ಚಿಂತಿಸುತ್ತಿದೆ.

Please Wait while comments are loading...