ಸಿಕ್ಕಿಂ ವಿಜ್ಞಾನ ಕೇಂದ್ರ, ಗ್ಯಾಂಗ್ಟಾಕ್

ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಸಿಕ್ಕಿಂ ವಿಜ್ಞಾನ ಕೇಂದ್ರ

ಗ್ಯಾಂಗ್ಟಾಕ್ ಗೆ ಸಮೀಪವಿರುವ ಮರ್ಚಕ್ ನಲ್ಲಿ ಸಿಕ್ಕಿಂ ವಿಜ್ಞಾನ ಕೇಂದ್ರವಿದೆ. ಇದನ್ನು ಒಂದು ವೈಜ್ಞಾನಿಕ ಮನೋಧರ್ಮ ಅಭಿವೃದ್ಧಿಪಡಿಸಲು ಹಾಗೂ ಜನರಲ್ಲಿನ ಸೃಜನಶೀಲ ಕಲಿಕೆ ಉತ್ತೇಜಿಸುವ ಉದ್ದೇಶದೊಂದಿಗೆ ಇದನ್ನು ಆರಂಭಿಸಲಾಯಿತು. ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಈ ಕೇಂದ್ರವು ಸುಂದರ ಅನೌಪಚಾರಿಕ ರೀತಿಯಲ್ಲಿ ಮಾಹಿತಿ ನೀಡುತ್ತದೆ. ವಿದ್ಯಾರ್ಥಿಗಳ ಚಟುವಟಿಕೆ ಮತ್ತು ವಿಜ್ಞಾನ ಉದ್ಯಾನಕ್ಕಾಗಿ ತುಂಬಾ ಆಸಕ್ತಿ ಕೆರಳಿಸುವ ಮಾನವತೆ ಗ್ಯಾಲರಿ, ವಿನೋದ ವಿಜ್ಞಾನ ಗ್ಯಾಲರಿ, ತಾರಾಮಂಡಲ ಗ್ಯಾಲರಿ ಮುಂತಾದ ಹಲವಾರು ಗ್ಯಾಲರಿಗಳಿವೆ.

ವಿಜ್ಞಾನ ಕೇಂದ್ರದಲ್ಲಿರುವ ಕೆಲವು ಆಸಕ್ತಿದಾಯಕ ಗ್ಯಾಲರಿಗಳ ಬಗ್ಗೆ ಮತ್ತಷ್ಟು...

ಮನುಕುಲದ ವಿಶಿಷ್ಟ ಗ್ಯಾಲರಿ:

ಮಾನವ ಕುಲದ ಅನನ್ಯತೆ ಮತ್ತು ಭೂಮಿ ಮೇಲೆ ಅದರ ವಿವಿಧ ರೂಪಗಳ ಬಗ್ಗೆ ಈ ಮ್ಯೂಸಿಯಂ ವಿವರ ನೀಡುತ್ತದೆ. ಈ ಗ್ಯಾಲರಿಯಲ್ಲಿ 42 ವಿಧದ ಸಂವಾದಾತ್ಮಕ ಸಂಗ್ರಹಗಳಿವೆ. ಮಾನವಕುಲದ ಪ್ರಾಧಾನ್ಯತೆ ಮತ್ತು ಇತರ ಜೀವಿಗಳಿಂದ ಮಾನವ ಭಿನ್ನವಾಗಿರಲು ಕಾರಣ ಏನು ಎನ್ನುವುದನ್ನು ಈ ಗ್ಯಾಲರಿ ವಿವರಿಸುತ್ತದೆ.

ಮಾನವನ ಜೀವನಕ್ಕೆ ಸಂಬಂಧಿಸಿದ ಬೆಳವಣಿಗೆ, ಸಂತಾನೋತ್ಪತ್ತಿ, ಸ್ನಾಯು ವ್ಯವಸ್ಥೆಯ ಅಭಿವೃದ್ಧಿ, ರಕ್ತ ಪರಿಚಲನೆ, ಜೆನೆಟಿಕ್ಸ್ ಹೀಗೆ ಹಲವಾರು ವಿಚಾರಗಳ ಬಗ್ಗೆ ಗ್ಯಾಲರಿ ವಿವರ ನೀಡುತ್ತದೆ. ಐಕ್ಯೂ ಮತ್ತು ಪದಬಂಧ ವಿಭಾಗಗಳಿವೆ. ಮಲ್ಟಿಮೀಡಿಯಾ ಕ್ವಿಜ್, ದೃಷ್ಟಿ ಕಲ್ಪನೆ ವಿಭಾಗಗಳು ಪ್ರತಿಯೊಬ್ಬ ಪ್ರವಾಸಿಗನನ್ನು ಆಕರ್ಷಿಸುತ್ತದೆ.

ವಿನೋದ ವಿಜ್ಞಾನ ಗ್ಯಾಲರಿ:

ಮೋಜು ಹಾಗೂ ಮನರಂಜನೆಯೊಂದಿಗೆ ವಿಜ್ಞಾನವನ್ನು ಇಲ್ಲಿ ಕಲಿಯಬಹುದು. ಇಲ್ಲಿನ ಸಂಗ್ರಹಣೆಯಲ್ಲಿರುವ ಕೆಲವು ವಸ್ತುಗಳಿಂದ ವಿಜ್ಞಾನವನ್ನು ತುಂಬಾ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.ಗುರುತ್ವಾಕರ್ಷಣೆಗೆ ವಿರುದ್ಧವಾಗಿರುವ ಲೋಹ, ಚಮತ್ಕಾರ ಮಾಡುವ ಸುತ್ತುವ ಚೆಂಡು, ವರ್ಣರಂಜಿತ ನೆರಳು ಸೃಷ್ಟಿಸುವ ಬೆಳಕು, ತಮಾಷೆಯ ಕನ್ನಡಿಗಳು, ಬೆಳಕಿನ ಭ್ರಮೆ ಹುಟ್ಟಿಸುವ ಗ್ಯಾಜೆಟ್ ಇಂತಹ ಹಲವಾರು ಆಸಕ್ತಿ ಹುಟ್ಟಿಸುವ ಉಪಕರಣಗಳು ಇಲ್ಲಿವೆ.

ಚಿಲ್ಟ್ರನ್ಸ್ ಕಾರ್ನರ್:

ವಿಜ್ಞಾನ ಕೇಂದ್ರದಲ್ಲಿ ಮಕ್ಕಳಿಗಾಗಿಯೇ ಒಂದು ಕಾರ್ನರ್ ನ್ನು ಸ್ಥಾಪಿಸಲಾಗಿದೆ. ಮಕ್ಕಳು ವಿಜ್ಞಾನವನ್ನು ಸುಲಭ ಹಾಗೂ ಸರಳವಾಗಿ ಅರ್ಥಮಾಡಿಕೊಳ್ಳಲು ವಿವಿಧ ಬಗೆಯ ವಿಜ್ಞಾನ ಕಿಟ್ಸ್ ಮತ್ತು ಪದಬಂಧವಿದೆ. ಈ ಕೇಂದ್ರದಲ್ಲಿ ಮಕ್ಕಳ ಕಡೆ ಹೆಚ್ಚಿನ ಗಮನಹರಿಸಲಾಗುತ್ತದೆ. ಮಲ್ಟಿಮೀಡಿಯಾ ಕ್ವಿಜ್ ನಲ್ಲಿ ಆತ ಮತ್ತು ಆಕೆಗೆ ತನ್ನ ದೇಹದ ಬಗ್ಗೆ ಎಷ್ಟು ತಿಳಿದಿದೆ ಎನ್ನುವುದು ಅರ್ಥವಾಗುತ್ತದೆ.

ತಾರಾಮಂಡಲ:

ಇದೊಂದು ತಾರಾಲಯ ಮತ್ತು ಇದರ ಮೂಲಕ ಬಾಹ್ಯಾಕಾಶದ ಅನುಭವ ಪಡೆಯಬಹುದು ಮತ್ತು ವಿವಿಧ ಆಕಾಶಕಾಯಗಳ ಬಗ್ಗೆ ವಿವರಗಳನ್ನು ಕಲಿಯಬಹುದು. ಇದರೊಳಗೆ 25 ಮಂದಿ ಮಾತ್ರ ಪ್ರವೇಶಿಸಬಹುದು. ರಾತ್ರಿ ವೇಳೆ ಗ್ಯಾಂಗ್ಟಾಕ್ ಮತ್ತು ಉತ್ತರಾರ್ಧ ಗೋಳದ ಮಿನುಗುವ ಆಕಾಶ ನೋಡಿ ಮನತುಂಬಿಕೊಳ್ಳಬಹುದು. ಪ್ರವಾಸಿಗರೊಂದಿಗೆ ಸಂವಾದ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇದರಿಂದ ಜನರು ಬಾಹ್ಯಾಕಾಶದ ಬಗ್ಗೆ ಹೆಚ್ಚು ಜ್ಞಾನ ಸಂಪಾದಿಸಬಹುದು.

ವಿದ್ಯಾರ್ಥಿಗಳ ಚಟುವಟಿಕೆ ಕಾರ್ನರ್:

ವಿಜ್ಞಾನದ ವಿಷಯಗಳನ್ನು ಇಲ್ಲಿ ಕಲಿಯಬಹುದಾಗಿದೆ. ಪ್ರಯೋಗಗಳಿಂದ ವಿಜ್ಞಾನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಕಾರ್ನರ್ ನಲ್ಲಿ ಹೇಳಿಕೊಡಲಾಗುತ್ತದೆ. ವಿಜ್ಞಾನ ರಸಪ್ರಶ್ನೆ, ಸೆಮಿನಾರ್, ಮೇಳಗಳು, ರಜಾ ಹವ್ಯಾಸ ಶಿಬಿರಗಳು ಹೀಗೆ ನಾನಾ ಬಗೆಯ ಕಾರ್ಯಕ್ರಮಗಳನ್ನು ಒಳಾಂಗಣ ಹಾಗೂ ಹೊರಾಂಗಣದಲ್ಲಿ ಆಯೋಜಿಸಲಾಗುತ್ತದೆ.ರಾಷ್ಟ್ರೀಯ ವಿಜ್ಞಾನ ದಿನ, ವಿಶ್ವ ಜನಸಂಖ್ಯಾ ದಿನ, ವಿಶ್ವ ಪರಿಸರ ದಿನ, ರಾಷ್ಟ್ರೀಯ ತಂತ್ರಜ್ಞಾನ ದಿನ ಮತ್ತು ಇತರ ಕೆಲವು ಮಹತ್ವದ ದಿನಗಳನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಈ ಕೇಂದ್ರದಲ್ಲಿ ಆಚರಿಸಲ್ಪಡಲಾಗುತ್ತದೆ.

ವಿಜ್ಞಾನ ಪಾರ್ಕ್:

ವಿಜ್ಞಾನ ಪಾರ್ಕ್ ಹಸಿರು ಹಾಗೂ ಪ್ರಶಾಂತವಾಗಿದೆ. ಪ್ರವಾಸಿಗಳು ಇಲ್ಲಿ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಅನುವೇದಿತಾ ಸ್ವಿಂಗ್ ಮತ್ತು ಪುನರಾವರ್ತಿತ ಸ್ವರ, ಬಿಂಬಗ್ರಹ ಮೂಲಕ ವೀಕ್ಷಣೆ ಸಹಿತ ಹೀಗೆ ಹಲವಾರು ಮೋಜಿನ ಆಟಗಳಿವೆ.

Please Wait while comments are loading...