ಮೆಡ್ಜಿಫೆಮವು ದಿಮಾಪುರದಲ್ಲಿರುವ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಡಿಮಪುರ ಜಿಲ್ಲೆಯ ಒಂದು ಉಪ- ವಿಭಾಗವಾಗಿದೆ. ಹಿಂದೆ ಮೆಡ್ಜಿಫೆಮವನ್ನು "ಘಸ್ಪನಿ" ಎಂದು ಕರೆಯುತ್ತಿದ್ದರು. ಇದರರ್ಥ ನೀರಿನಿಂದ ಬಂದ ಗಿಡವೆಂದರ್ಥ. ಮೆಡ್ಜಿಫೆಮವು ಅತ್ಯಂತ ಸುಂದರವಾದ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಅತ್ತ ಗಿರಿಗಳ ಮೇಲು ಮತ್ತು ಇತ್ತ ಕಣಿವೆಯ ಮೇಲು ನೆಲೆಸಿಲ್ಲ. ಇದು ಸಮುದ್ರ ಮಟ್ಟದಿಂದ 360 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.
ಮೆಡ್ಜಿಫೆಮವು ದಿಮಾಪುರ್ ಮತ್ತು ಕೊಹಿಮಾಗೆ ಸಮೀಪದಲ್ಲಿ ನೆಲೆಗೊಂಡಿರುವುದರಿಂದ ಸಹಜವಾಗಿ ಪ್ರಸಿದ್ಧಿಯನ್ನು ಗಳಿಸಿದೆ. ಇದು ಡಿಮಪುರದಿಂದ 33 ಕಿ.ಮೀ ಹಾಗು ಕೊಹಿಮಾದಿಂದ 44 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮೆಡ್ಜಿಫೆಮದಲ್ಲಿ ಕೃಷಿ ವಿಙ್ಞಾನ ಮತ್ತು ಗ್ರಾಮೀಣ ಅಭಿವೃದ್ದಿ ವಿದ್ಯಾಲಯ ( SASRD) ನಾಗಾಲ್ಯಾಂಡ್ ವಿಶ್ವ ವಿದ್ಯಾನಿಲಯಗಳು ನೆಲೆಸಿವೆ. ಈ ಸಂಸ್ಥೆಗಳು ಈ ನಗರದ ಹೆಗ್ಗುರುತುಗಳಾಗಿವೆ.
ಮೆಡ್ಜಿಫೆಮ ನಗರವು ಒಯಿಮ್‍ಕುಮ್, ಒಯಿಮ್ಟಿ ಮತ್ತು ದರೊಗರ್ಜನ್ ಎಂಬ ಹಲವು ಹಳ್ಳಿಗಳಿಂದ ಆವೃತಗೊಂಡಿದೆ. ಮೆಡ್ಜಿಫೆಮದ ಅನಾನಸ್ ಭಾರೀ ಪ್ರಸಿದ್ಧಿಯನ್ನು ಪಡೆದಿವೆ. ಇಲ್ಲಿಗೆ ಸಮೀಪದ ಹಳ್ಳಿಗಳಲ್ಲಿ ಈ ಅನಾನಸನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.


Click it and Unblock the Notifications