Search
 • Follow NativePlanet
Share
ಮುಖಪುಟ » ಸ್ಥಳಗಳು» ಧರ್ಮಶಾಲಾ

ಧರ್ಮಶಾಲಾ - ಹಿಮ ಪರ್ವತಗಳ ನಾಡು

51

ಹಿಮ ಬೆಟ್ಟವನ್ನು ನೋಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಇಲ್ಲಿನ ಮನಮೋಹಕ ದೃಶ್ಯಗಳು ನಮಗೆ ಸ್ವರ್ಗದ ಅನುಭವವನ್ನು ನೀಡುತ್ತದೆ. ಇಂತಹ ಅದ್ಭುತ ಪ್ರವಾಸಿ ತಾಣಕ್ಕೆ ವರ್ಷದ ಯಾವುದೇ ಘಳಿಗೆಯಲ್ಲಾದರೂ ಬೇಟಿ ನೀಡಬಹುದು.

ನಿಮ್ಮ ರಜಾ ದಿನವನ್ನು ಮೋಜಿನ ದಿನವನ್ನಾಗಿ ಮಾಡಲು ಅತ್ಯಂತ ಪ್ರಶಸ್ತವಾದ ಸ್ಥಳವೆಂದರೆ ಹಿಮಾಚಲ ಪ್ರದೇಶದ ಧರ್ಮಶಾಲಾ ಪಟ್ಟಣ. ಹಿಮದ ಟೊಪ್ಪಿಗೆಯನ್ನು ಹಾಕಿದಂತೆ ಅನುಭವ ನೀಡುವ ಪರ್ವತ ಶ್ರೇಣಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಈ ಪ್ರಕೃತಿಯ ಮಡಿಲಲ್ಲಿ ಒಂದಿಷ್ಟು ಸಮಯವನ್ನು ಕಳೆಯಲು ನೀವು ಸಿದ್ಧರಿದ್ದಿರಿ ತಾನೇ ?

ಧರ್ಮಶಾಲಾ ಪ್ರದೇಶವು ಈಶಾನ್ಯ ಕಾಂಗ್ರಾದಿಂದ 17 ಕೀ.ಮಿ ದೂರದಲ್ಲಿ ನೆಲೆಯಾಗಿದೆ. ಇದೊಂದು ಹಿಮಾಚಲ ಪ್ರದೇಶದ ಹೆಸರುವಾಸಿ ಗಿರಿಧಾಮವಾಗಿದೆ. ಈ ನಗರವು ಚಂಡೀಘಡ ದಿಂದ 239 ಕೀ.ಮಿ, ಹಾಗೂ ಮನಾಲಿಯಿಂದ 252 ಕೀ.ಮಿ, 322 ಕೀ.ಮಿ ಶಿಮ್ಲಾ ಮತ್ತು ದೆಹಲಿಯಿಂದ 514 ಕೀ.ಮಿ  ಅಂತರದಲ್ಲಿದೆ. ಈ ಸ್ಥಳವನ್ನು ಕಾಂಗ್ರಾ ಕಣಿವೆಗೆ ಪ್ರವೇಶ ಮಾರ್ಗ ಎಂದೇ ಪರಿಗಣಿಸಲಾಗಿದೆ. ಈ ಸ್ಥಳದಿಂದ ಪ್ರಾಕೃತಿಕ ಸೌಂದರ್ಯದ ಹಿನ್ನೆಲೆಯೊಂದಿಗೆ ಹಿಮದಿಂದ ಆವೃತವಾದ ಧೌಲಾಧರ್ ಪರ್ವತ ಗೋಚರಿಸುತ್ತದೆ. ಕಾಂಗ್ರಾ ಕಣಿವೆಯ ಈ ಪ್ರಮುಖ ನಗರವನ್ನು, 1905 ರಲ್ಲಿ, ಇಲ್ಲಿ ನಡೆದ ಒಂದು ವಿಧ್ವಂಸಕ ಭೂಕಂಪದ ನಂತರ ಇದನ್ನು ಮರುನಿರ್ಮಾಣ ಮಾಡಲಾಯಿತು ಮತ್ತು ಒಂದು ಸುಂದರ ಆರೋಗ್ಯಧಾಮ ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆ ತಾಣವನ್ನಾಗಿ ಪರಿವರ್ತಿಸಲಾಯಿತು. ಧರ್ಮಶಾಲಾ ನಗರವನ್ನು ಎರಡು ವಿವಿಧ ಪ್ರದೇಶಗಳಲ್ಲಿ, ಮೇಲ್ ಧರ್ಮಶಾಲಾ ಮತ್ತು ಕೆಳಭಾಗದ ಧರ್ಮಶಾಲಾ ಎಂದು ವಿಂಗಡಿಸಲಾಗಿದೆ. ಕೆಳ ಧರ್ಮಶಾಲಾ ಪ್ರದೇಶವು ವಾಣಿಜ್ಯ ಕೇಂದ್ರವಾಗಿದೆ. ಆದರೆ ಮೇಲ್ ಧರ್ಮಶಾಲಾ ಪ್ರದೇಶವು ಅಲ್ಲಿನ ವಸಾಹತು ಜೀವನಶೈಲಿಯಿಂದಾಗಿ ಪ್ರಸಿದ್ಧವಾಗಿದೆ. ಈ ಪ್ರದೇಸದಲ್ಲಿರುವ ಬ್ರಿಟಿಷ್ ಉಪನಗರಗಳಾದ ಮೆಕ್ ಲಿಯೋಡ್ ಗಂಜ್ ಮತ್ತು ಫಾರ್ಸಿತ್ ಗಂಜ್ ನೋಡಲೇ ಬೇಕಾದಂತಹ ಸ್ಥಳವಾಗಿದೆ.

ಧರ್ಮಶಾಲಾ ನಗರವು ಧೌಲಾಧರ್ ಶ್ರೇಣಿಗಳ ಗಡಿಯ ಮೂರು ಕಡೆಗಳಲ್ಲಿ ಓಕ್ ಮತ್ತು ಕೊನಿಫೆರಸ್ (ಶಂಕುವಿನಾಕಾರದ ಫಲವನ್ನು ಹೊಂದಿರುವ ಮರ) ಮರಗಳಿಂದ ಕೂಡಿದ ಅರಣ್ಯದ ನಡುವೆ ಅತ್ಯಂತ ರಮಣೀಯವಾಗಿ ಗೋಚರಿಸುತ್ತದೆ. ಆದ್ದರಿಂದ ಕಾಂಗ್ರಾ ಕಣಿವೆಯು ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ! ಧರ್ಮಶಾಲಾದಲ್ಲಿರುವ ಕಾಂಗ್ರಾ ಆರ್ಟ್ ಮ್ಯೂಸಿಯಂ (ಕಲಾ ವಸ್ತು ಸಂಗ್ರಹಾಲಯ) ಅನೇಕ ಕಲಾತ್ಮಕ ಮತ್ತು ಸಾಂಸ್ಕೃತಿಕ ಕುರುಹುಗಳನ್ನು ಹೊಂದಿದೆ. ಜೊತೆಗೆ 5 ನೇ ಶತಮಾನದ ಅಮೂಲ್ಯ ಕಲಾಕೃತಿಗಳಾದ ಶಿಲ್ಪಗಳು, ವರ್ಣಚಿತ್ರಗಳು, ನಾಣ್ಯಗಳು, ಕುಂಬಾರಿಕೆ/ಮಣ್ಣಿನ ಮಡಿಕೆ, ಆಭರಣ, ಹಸ್ತಪ್ರತಿಗಳು, ಮತ್ತು ರಾಜಮನೆತನದ ವೇಷಭೂಷಣಗಳನ್ನು ಇಲ್ಲಿ ಕಾಣಬಹುದು.

ಅನನ್ಯತೆಯ ತಾಣ

ಅಲ್ಲದೇ ಧರ್ಮಶಾಲಾ ನಗರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮತ್ತು 'ಭಾರತದ ಲಿಟಲ್ ಲ್ಹಾಸಾ' ಎಂಬ ಪ್ರತಿಷ್ಠಿತ ಶೀರ್ಷಿಕೆಯನ್ನೂ ಈ ನಗರಕ್ಕೆ ನೀಡಲಾಗಿದೆ. ಪವಿತ್ರ 'ದಲೈ ಲಾಮ'  1960 ರಲ್ಲಿ, ಗಡಿ ಪಾರಾಗಿದ್ದ ಸಂದರ್ಭದಲ್ಲಿ, ಈ ಸುಂದರ ಸ್ಥಳದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದರು ಎನ್ನಲಾಗಿದೆ. ವಿಶಾಲವಾದ ಟಿಬೆಟ್ ವಸಾಹತುಗಳನ್ನು ಹೊಂದಿರುವ ಕಾರಣದಿಂದ, ಈ ಸ್ಥಳವನ್ನು ಈಗ 'ಲಾಮಾಗಳ ಲ್ಯಾಂಡ್(ಭೂಮಿ)' ಎಂದೂ ಕರೆಯಲಾಗುತ್ತದೆ. ಮೆಕ್ ಲಿಯೋಡ್ ಗಂಜ್ ನಂತಹ ಪ್ರದೇಶಗಳು ಇಂದು ಟಿಬೆಟಿಯನ್ ಬೌದ್ಧಧರ್ಮದ ಶಿಕ್ಷಣ ಮತ್ತು ಪ್ರಚಾರ ನಡೆಸುವ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾಗಿ ಮಾರ್ಪಟ್ಟಿವೆ. ಅಲ್ಲದೇ ವಿವಿಧ ಧಾರ್ಮಿಕ ಮತ್ತು ಕಲಿಕಾ ಕೇಂದ್ರಗಳು, ಹಲವಾರು ಹಿಂದೂ ಮತ್ತು ಜೈನ ದೇವಾಲಯಗಳು ಧರ್ಮಶಾಲಾದಲ್ಲರುವ ಆಕರ್ಷಣೆಗಳಾಗಿವೆ. ಈ ಸ್ಥಳಕ್ಕೆ ಭೇಟಿ ನೀಡಿದಾಗ ಮೆಕ್ ಲಿಯೋಡ್ ಗಂಜ್ ಮಾರುಕಟ್ಟೆಯಲ್ಲಿ ಸುಂದರವಾದ ಟಿಬೆಟಿಯನ್ ಕರಕುಶಲ ವಸ್ತುಗಳು, ಉಡುಪುಗಳು, ಮತ್ತು ಇನ್ನೂ ಅನೇಕ ವಸ್ತುಗಳೂ ಸೇರಿದಂತೆ ಸ್ಥಳೀಯ ಚಿರಸ್ಮರಣೀಯ ವಸ್ತುಗಳನ್ನು ಖರೀದಿಸಬಹುದು.

ಈ ಪ್ರದೇಶಗಳಲ್ಲಿ ಹಲವಾರು ಚರ್ಚ್ ಗಳು, ದೇವಾಲಯಗಳು, ಮಸೀದಿಗಳು ಮತ್ತು ಧಾರ್ಮಿಕ ಮಂದಿರಗಳನ್ನು ಕಾಣಬಹುದು. ಅಲ್ಲದೇ ಅನೇಕ ಹಳೆಯ ದೇವಸ್ಥಾನಗಳಾದ ಜ್ವಾಲಾಮುಖಿ ದೇವಸ್ಥಾನ, ಬ್ರಿಜೇಶ್ವರಿ ದೇವಾಲಯ ಮತ್ತು ಚಾಮುಂಡ ದೇವಾಲಯಗಳು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಧರ್ಮಶಾಲಾ ಪ್ರದೇಶದ ಇತರ ಪ್ರಮುಖ ಪ್ರವಾಸಿ ತಾಣಗಳೆಂದರೆ ಕಾಂಗ್ರಾ ಆರ್ಟ್ ಮ್ಯೂಸಿಯಂ, ಸೇಂಟ್ ಜಾನ್ ಚರ್ಚ್, ಮತ್ತು ಯುದ್ಧ ಸ್ಮಾರಕ ಮೊದಲಾದವುಗಳು. ಇವುಗಳ ಜೊತೆಗೆ, ಕೋಟ್ವಾಲಿ ಬಜಾರ್, ಇಲ್ಲಿನ ಒಂದು ಪ್ರಖ್ಯಾತ ಶಾಪಿಂಗ್ ಕೇಂದ್ರವಾಗಿದ್ದು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇವಿಷ್ಟೇ ಅಲ್ಲದೇ  ಚಹಾ ತೋಟಗಳು, ಪೈನ್ (ಪೀತದಾರು) ಅರಣ್ಯಗಳು ಮತ್ತು ದೇವದಾರು ಮರಗಳು ಧರ್ಮಶಾಲಾದ  ಮತ್ತಷ್ಟು ಆಕರ್ಷಣೆಗಳೆನಿಸಿವೆ.

ತಲುಪುವ ಬಗೆ

ಕಾಂಗ್ರಾ ಕಣಿವೆಯಲ್ಲಿರುವ ಗಗ್ಗಲ್ ವಿಮಾನ ನಿಲ್ದಾಣ ಧರ್ಮಶಾಲಾದಿಂದ ಸುಮಾರು 15 ಕಿಮೀ ದೂರದಲ್ಲಿದ್ದು, ಧರ್ಮಶಾಲಾಕ್ಕೆ ಹತ್ತಿರದ ವಾಯುನೆಲೆ ಎನಿಸಿದೆ. ಈ ವಿಮಾನ ನಿಲ್ದಾಣದ ಮೂಲಕ ಹೊರಡುವ ದೇಶೀಯ ವಿಮಾನಗಳು ದೆಹಲಿ ವಿಮಾನ ವಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತವೆ. ಅಂತಾರಾಷ್ಟ್ರೀಯ ಪ್ರವಾಸಿಗರು ದೆಹಲಿಯಿಂದ ಗಗ್ಗಲ್  ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ವಿಮಾನ ಸೌಲಭ್ಯವನ್ನು ಪಡೆಯಬಹುದು. ಧರ್ಮಶಾಲಾ ನಗರಕ್ಕೆ ಹತ್ತಿರದ ರೈಲೈ ನಿಲ್ದಾಣ  22 ಕಿಮೀ ದೂರ ಇರುವ ಕಾಂಗ್ರಾ ಮಂದಿರವಾಗಿದೆ.  ಆದಾಗ್ಯೂ ಇದೊಂದು ಸಣ್ಣ ರೈಲ್ವೆ ಜಂಕ್ಷನ್ ಆಗಿರುವುದರಿಂದ ಎಲ್ಲಾ ನಗರಗಳಿಗೂ ಇಲ್ಲಿಂದ ರೈಲುಗಳು ಲಭ್ಯವಿಲ್ಲ. ಧರ್ಮಶಾಲಾದಿಂದ 85 ಕೀ.ಮಿ ಅಂತರದಲ್ಲಿರುವ ಪಠಾನ್ಕೋಟ್ ರೈಲು ನಿಲ್ದಾಣವು ಪ್ರಯಾಣಿಕರಿಗೆ ಇನ್ನೊಂದು ಹತ್ತಿರದ ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತದ ಎಲ್ಲಾ ಪ್ರಮುಖ ಪಟ್ಟಣಗಳನ್ನು ಈ ಮೂಲಕ ಸಂಪರ್ಕಿಸುತ್ತದೆ. ರಸ್ತೆಯ ಮೂಲಕ ಪ್ರಯಾಣ ಮಾಡುವ ಆಸಕ್ತಿ ಹೊಂದಿರುವ ಪ್ರವಾಸಿಗರು ಧರ್ಮಶಾಲಾ ಹತ್ತಿರದ ನಗರಗಳಿಂದ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ಸೌಲಭ್ಯಗಳನ್ನು ಪಡೆಯಬಹುದು.

ಹವಾಮಾನ

ಧರ್ಮಶಾಲಾ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳು ಮತ್ತು ಜೂನ್ ತಿಂಗಳುಗಳ ನಡುವೆ ವಿಸ್ತರಿಸಿರುತ್ತದೆ. ಈ ಸಮಯದಲ್ಲಿ ತಾಪಮನವು 22 ಡಿ.ಸೆ ಮತ್ತು 38 ಡಿ. ಸೆ ನಡುವೆ ದಾಖಲಾಗುತ್ತದೆ. ಈ ಸಮಯದಲ್ಲಿ ಆಹ್ಲಾದಕರ ಹವಾಗುಣ ಇರುವ ಕಾರಣದಿಂದ ಈ ಋತುವಿನಲ್ಲಿ ಚಾರಣಮಾಡಲು ಇಷ್ಟಪಡುವ ಸಾಹಸ ಪ್ರಿಯರಿಗೆ ಸೂಕ್ತವಾದ ಸಮಯವಾಗಿದೆ. ಧರ್ಮಶಾಲಾ ನಗರವು  ಭಾರೀ ಮಳೆಯನ್ನು ಅನಿಭವಿಸುವುದರಿಂದಾಗಿ ಪ್ರವಾಸಿಗರು ಸಾಮಾನ್ಯವಾಗಿ ಮಳೆಗಾಲದಲ್ಲಿ ಧರ್ಮಶಾಲಾ ಸ್ಥಳಕ್ಕೆ ಪ್ರವಾಸಕ್ಕೆ ಬರುವುದನ್ನು ಇಷ್ಟಪಡುವುದಿಲ್ಲ. ಚಳಿಗಾಲದಲ್ಲಿಯೂ ಇಲ್ಲಿನ ವಾತಾವರಣವು ಅತ್ಯಂತ ತಂಪಾಗಿರುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ದಾಖಲಾಗುವ ತಾಪಮಾನ -4 ಡಿ.ಸೆ ನಷ್ಟು! ಇದರಿಂದಾಗಿ ರಸ್ತೆ ಸಂಚಾರ ದುಸ್ಸಾಧ್ಯವೆನಿಸತ್ತದೆ. ಆದ್ದರಿಂದಾಗಿ ಪ್ರವಾಸಿಗರು ಧರ್ಮಾಶಾಲಾ ಪ್ರದೇಶಕ್ಕೆ ಸೆಪ್ಟಂಬರ್ ಹಾಗೂ ಜೂನ್ ತಿಂಗಳಿನಲ್ಲಿ ಪ್ರವಾಸವನ್ನು ಕೈಗೊಳ್ಳಬಹುದು. 

ಧರ್ಮಶಾಲಾ ಪ್ರಸಿದ್ಧವಾಗಿದೆ

ಧರ್ಮಶಾಲಾ ಹವಾಮಾನ

ಉತ್ತಮ ಸಮಯ ಧರ್ಮಶಾಲಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಧರ್ಮಶಾಲಾ

 • ರಸ್ತೆಯ ಮೂಲಕ
  ಪ್ರಯಾಣಿಕರು ಬಯಸಿದಲ್ಲಿ ಧರ್ಮಶಾಲಾವನ್ನು ತಲುಪಲು ಉತ್ತಮವಾದ ಬಸ್ ಸಾರಿಗೆ ವ್ಯವಸ್ಥೆಯಿದೆ. ಈ ನಗರವು ನೆರೆಹೊರೆಯ ಎಲ್ಲಾ ನಗರಗಳೊಂದಿಗೆ ಸರಿಯಾದ ಬಸ್ ಸೌಕರ್ಯವನ್ನು ಹೊಂದಿದೆ. ದೆಹಲಿಯಿಂದ, ಧರ್ಮಶಾಲಾ ನಗರಕ್ಕೆ ಐಷಾರಾಮಿ ಬಸ್ಸುಗಳು ಕೂಡಾ ಲಭ್ಯವಿದೆ. ಈ ಬಸ್ಸು ಪ್ರಯಾಣಕ್ಕೆ ತಗುಲುವ ವೆಚ್ಚ 1600 ರೂಪಾಯಿಗಳು ಮಾತ್ರ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಧರ್ಮಶಾಲಾ ನಗರದಿಂದ 22 ಕೀ.ಮಿ ದೂರದಲ್ಲಿರುವ ಕಂಗ್ರಾ ಮಂದಿರ ರೈಲ್ವೆ ನಿಲ್ದಾಣವು ಅತ್ಯಂತ ಹತ್ತಿರದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಆದರೆ ಕೆಲವೇ ರೈಲುಗಳು ಮಾತ್ರ ಈ ನಿಲ್ದಾಣದಲ್ಲಿ ನಿಲ್ಲುತ್ತವೆ. ಪಠಾನ್ ಕೋಟ್ ರೈಲ್ವೆ ನಿಲ್ದಾಣವು ಧರ್ಮಶಾಲಾ ನಗರಕ್ಕೆ ಬರುವ ಪ್ರವಾಸಿಗರಿಗೆ ಇನ್ನೊಂದು ರೈಲ್ವೆ ಮಾರ್ಗವಾಗಿದೆ. ಈ ರೈಲ್ವೆ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಧರ್ಮಶಾಲಾ ನಗರದಿಂದ 15 ಕೀ.ಮಿ ದೂರದಲ್ಲಿರುವ ಗಗ್ಗಲ್ ವಿಮಾನ ನಿಲ್ದಾಣ ಅಥವಾ ಧರ್ಮಶಾಲಾ ವಿಮಾನ ನಿಲ್ದಾಣ ಎಂದೂ ಕರೆಯಲ್ಪಡುವ ಈ ನಿಲ್ದಾಣ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ನವ ದೆಹಲಿಯಯಲ್ಲಿರುವ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಅಂತರ ರಾಷ್ಟ್ರೀಯ ಪ್ರಯಾಣಿಕರಿಗೆ ಧರ್ಮಶಾಲಾ ತಲುಪಲು ಉತ್ತಮ ಸಾರಿಗೆ ವ್ಯವಸ್ಥೆಯಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
04 Feb,Sat
Return On
05 Feb,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
04 Feb,Sat
Check Out
05 Feb,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
04 Feb,Sat
Return On
05 Feb,Sun