ಗ್ಯೂಟೋ (Gyuto) ಮಠವು ಧರ್ಮಶಾಲಾದಿಂದ 6 ಕೀ.ಮಿ ದೂರದಲ್ಲಿದೆ. ಇದೊಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಪುಣ್ಯಕ್ಷೇತ್ರವು ಟಿಸಿವಿ ಶಾಲಾ ಎಂದೂ ಕರೆಯಲ್ಪಡುವ ಟಿಬೆಟಿಯನ್ ಬುದ್ಧದ ಪ್ರಮುಖ ಶಾಲೆಯಾದ ಕರ್ಮ ಕಗ್ಯೂ ಮುಖ್ಯಸ್ಥನ ನೆಲೆಯಾಗಿದೆ. ಗೌತಮ ಬುದ್ಧ ಎಂದು ಗುರುತಿಸಲ್ಪಡುವ ಸಖ್ಯಮುನಿ ಬುದ್ಧನ ಮೂರ್ತಿಯನ್ನು ಇಲ್ಲಿನ ಒಂದು ಚಿಕ್ಕ ಕೊಠಡಿಯಲ್ಲಿ ಕಾಣಬಹುದು. ಈ ಮಠವನ್ನು, ಟಿಬೆಟ್ ನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸೈನಿಕರ ನೆನಪಿಗಾಗಿ ಕಟ್ಟಲಾಗಿದೆ. 3 ನೇ ಶತಮಾನದಲ್ಲಿ ರಾಜ ಅಶೋಕನು ನಿರ್ಮಿಸಿದ ಸ್ತೂಪವನ್ನು ಹೋಲುವ ಒಂದು ರಚನೆ ಕೂಡ ಇಲ್ಲಿದೆ. ಗ್ಯುಟೊ ಮಠವು ಪ್ರಮುಖ ಪಟ್ಟಣದಿಂದ ಬಸ್ಸುಗಳು ಮತ್ತು ಟ್ಯಾಕ್ಸಿಗಳ ಸಂಪರ್ಕವನ್ನು ಹೊಂದಿದೆ.