Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಹವಾಮಾನ

ಧರ್ಮಶಾಲಾ ಹವಾಮಾನ

ಪ್ರವಾಸಿಗರು ಧರ್ಮಶಾಲಾ ನಗರಕ್ಕೆ ಪ್ರವಾಸಕ್ಕೆ ಬರಲು ಸೂಕ್ತವಾದ ಸಮಯವೆಂದರೆ, ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಜೂನ್ ತಿಂಗಳಿನ ವರೆಗೆ ಮುಂದುವರೆಯುವ ಬೇಸಿಗೆಗಾಲ. ಈ ಸಮಯದಲ್ಲಿ ಧರ್ಮಶಾಲಾದಲ್ಲಿ ಚಾರಣ ಮಾಡುವುದು ಒಂದು ಪ್ರಮುಖ ಚಟುವಟಿಕೆಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್) ಧರ್ಮಶಾಲಾ ನಗರದಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಜೂನ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಬೇಸಿಗೆಯ ಸಮಯದಲ್ಲಿ ಇಲ್ಲಿನ ತಾಪಮಾನ ಗರಿಷ್ಠ 38 ಡಿ. ಸೆ ನಿಂದ ಕನಿಷ್ಠ 22 ಡಿ. ಸೆ ದಾಖಲಾಗುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್) : ಧರ್ಮಶಾಲಾ ನಗರದಲ್ಲಿ ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳಿನವರೆಗೆ ಮಳೆಗಾಲ ಮುಂದುವರಿಯುತ್ತವೆ. ಈ ಸ್ಥಳದಲ್ಲಿ ಜುಲೈ ಹಾಗೂ ಆಗಸ್ಟ ತಿಂಗಳುಗಳಲ್ಲಿ ಅತಿಯಾದ ಮಳೆ ಸುರಿಯುತ್ತದೆ. ಆದ್ದರಿಂದಾಗಿ ಧರ್ಮಶಾಲಾ ನಗರಕ್ಕೆ ಬರಲು ಮಳೆಗಾಲವು ಸೂಕ್ತವಾದ ಸಮಯವಲ್ಲ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಡಿಸೆಂಬರ್ ತಿಂಗಳು ಧರ್ಮಶಾಲಾ ನಗರವನ್ನು ಚಳಿಗಾಲ ಋತುವನ್ನಾಗಿ ಪರಿವರ್ತಿಸುತ್ತದೆ. ಈ ಚಳಿಗಾಲವು ಫೆಬ್ರವರಿ ತಿಂಗಳವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಇಲ್ಲಿ ದಾಖಲಾಗುವ ಕನಿಷ್ಠ ತಾಪಮಾನ -4 ಡಿ. ಸೆ ನಷ್ಟು! ಅಲ್ಲದೇ ಜನವರಿ ತಿಂಗಳಿನಲ್ಲಿ ಹಿಮ ರೂಪದ ಭಾರಿ ಮಳೆ ಸುರಿಯುವುದರಿಂದಾಗಿ ಪ್ರಮುಖ ರಸ್ತೆ ಹಿಮದಿಂದ ಆವೃತವಾಗಿ ರಸ್ತೆ ತಡೆಯುಂಟಾಗುತ್ತದೆ.