Search
  • Follow NativePlanet
Share
ಮುಖಪುಟ » ಸ್ಥಳಗಳು » ದೇಶ್ನೋಕ್ » ಆಕರ್ಷಣೆಗಳು » ಕರ್ನಿ ಮಾತಾ ದೇವಸ್ಥಾನ

ಕರ್ನಿ ಮಾತಾ ದೇವಸ್ಥಾನ, ದೇಶ್ನೋಕ್

5

ಮೂಷಕ ದೇವಸ್ಥಾನವೆಂದೂ ಪ್ರಖ್ಯಾತಿಯಾದ ದೇಶ್ನೋಕ್ ನ ಕರ್ನಿ ಮಾತಾ ದೇವಸ್ಥಾನವು ಅಪುರೂಪದ ಪ್ರವಾಸಿ ಆಕರ್ಷಣೆ. ದುರ್ಗಾ ದೇವಿಯ ಅವತಾರಗಳಲ್ಲಿ, ಒಂದಾದ ಕರ್ನಿ ಮಾತಾಳನ್ನು ಇಲ್ಲಿ ಪೂಜಿಸಲಾಗುತ್ತದೆ. ದಂತಕಥೆಗಳ ಪ್ರಕಾರ, ಒಂದೊಮ್ಮೆ ಬಿಕಾನೇರ್ ನ ಸ್ಥಾಪಕನಾದ ರಾವ್ ಬಿಕಾಜಿಯಿಂದ ದುರ್ಗಾ ದೇವಿಯು ಪ್ರಸನ್ನಳಾದಳು. ಅಂದಿನಿಂದ ಬಿಕಾನೇರ್ ಸಾಮ್ರಾಜ್ಯದ ಸಾಮ್ರಾಟಗಾರರು ದೇವಿಯನ್ನು ಪೂಜಿಸತೊಡಗಿದರು. ಗಂಗಾ ಸಿಂಗ್ ರಾಜನು 20 ನೇ ಶತಮಾನದಲ್ಲಿ ಈ ದೇವಾಲಯವನ್ನು ಕಟ್ಟಿದನು. ಶ್ವೇತ ವರ್ಣದ ಇಲಿಯ ತುಣುಕು ದರುಶನವನ್ನು ಮಂಗಳಕರವೆಂದು ಭಾವಿಸಲಾಗುತ್ತದೆ. ಅಷ್ಟೆ ಅಲ್ಲ..ಈ ಇಲಿಗಳ ಓಡಾಟ ಭಕ್ತರ ಕಾಲಿಗೆ ಸ್ಪರ್ಶಿಸಿದ್ದಲ್ಲಿ ಅದನ್ನು ಒಳ್ಳೆಯ ಬೆಳವಣಿಗೆ ಎಂದು ಭಾವಿಸಲಾಗುತ್ತದೆ. ಈ ಇಲಿಗಳು ಭಕ್ತರು ಕೊಡುವ ಪ್ರಸಾದವನ್ನು ತಿಂದು ಬದುಕುತ್ತವೆ.ಮಾರ್ಬಲ್ ಕಲ್ಲಿನ ಕೆತ್ತನೆಗಳಿಂದ ಸಿಂಗರಿಸಲ್ಪಟ್ಟ ಈ ದೇವಸ್ಥಾನವು, ತನ್ನ ಪ್ರವೇಶ ದ್ವಾರದಲ್ಲಿ ಒಂದು ದೊಡ್ಡದಾದ ಬೆಳ್ಳಿ ಬಾಗಿಲನ್ನು ಹೊಂದಿದೆ. ದೇವಸ್ಥಾನವು ಇಲಿಗಳಿಗೆ ಹೆಸರುವಾಸಿಯಾಗಿದ್ದು ಅವುಗಳನ್ನು 'ಕಬಸ್' ಎಂದು ಕರೆಯಲಾಗುತ್ತದೆ. ಸ್ಥಳೀಯರ ನಂಬಿಕೆ ಪ್ರಕಾರ ಈ ಇಲಿಗಳು, ದೇವಿಯ ಭವಿಷ್ಯದ ಮಕ್ಕಳ ಆತ್ಮಗಳನ್ನು (ಚರಣಗಳು ಎಂದು ಕರೆಯಲಾಗುತ್ತದೆ) ತಮ್ಮಲ್ಲಿ ಹೊಂದಿವೆ. ಈ ಇಲಿಗಳ ಬಗ್ಗೆ ಪವಿತ್ರ ಭಾವನೆಯನ್ನು ಹೊಂದಿರುವ ಇಲ್ಲಿಯ ಜನರು ಅವುಗಳನ್ನು ಭಯಭಕ್ತಿಗಳಿಂದ ಕಾಣುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed