Search
  • Follow NativePlanet
Share
ಮುಖಪುಟ » ಸ್ಥಳಗಳು» ಚುಂಗ್ಥಾಂಗ್

ಚುಂಗ್ ಥಾಂಗ್ - ಪವಿತ್ರ ಕಣಿವೆ

9

ಚುಂಗ್ ಥಾಂಗ್ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ.  ಪ್ರಸ್ತುತ ಯುಮಥಾಂಗ್ ಹೋಗುವ ದಾರಿಯಲ್ಲಿ ಚುಂಗ್ ಥಾಂಗ್  ಕಣಿವೆಯನ್ನು,  ಲಾಚುಂಗ್ ಚು ಮತ್ತು ಲಾಚೆನ್ ನದಿಗಳ  ಸಂಗಮದ ಬಳಿ ಕಾಣಬಹುದು. ಸಿಕ್ಕಿಂನ ಈ ಸಣ್ಣ ಪಟ್ಟಣ ಸಾಕಷ್ಟು ಪವಿತ್ರವಾಗಿದ್ದು  ಸಿಕ್ಕಿಂನ ಪ್ರಸಿದ್ಧ ಪೋಷಕ ಸಂತ ಗುರು ಪದ್ಮಸಂಭವನ ಅನುಗ್ರಹವನ್ನು  ಪಡೆದಿದೆ ಎಂದು ಹೇಳಲಾಗುತ್ತದೆ.  ಚುಂಗ್ ಥಾಂಗ್ ಪಟ್ಟಣ ಶ್ರೀಮಂತ ಜೈವಿಕ ವೈವಿಧ್ಯತೆ ಮತ್ತು ಆಸಕ್ತಿದಾಯಕ ಸಸ್ಯರಾಶಿ ಮತ್ತು ಪ್ರಾಣಿಗಳ ವ್ಯಾಪಕ ಬಳಗವನ್ನೊಳಗೊಂಡಿದೆ.

ಇತಿಹಾಸ

ಸಿಕ್ಕಿಂ ನ ಚುಂಗ್ ಥಾಂಗ್ ಪಟ್ಟಣ ಬಹಳ ಆಸಕ್ತಿದಾಯಕ ಇತಿಹಾಸವನ್ನು ಹೊಂದಿದೆ. ಗುರು ಪದ್ಮಸಂಭವ ಅವರು ಆಶೀರ್ವದಿಸಿದ ಪಟ್ಟಣ ಇದು ಎಂದು ನಂಬಲಾಗುತ್ತದೆ, ಜೊತೆಗೆ ಪವಿತ್ರ ಪಟ್ಟಣ ಎಂದೂ ಪರಿಗಣಿಸಲಾಗುತ್ತದೆ. ಈ ಪಟ್ಟಣದ ಇತಿಹಾಸ, ವಿವಿಧ ಆಸಕ್ತಿದಾಯಕ ಪುರಾಣ ಮತ್ತು ಐತಿಹ್ಯಗಳೊಂದಿಗೆ ಸಂಬಂಧ ಹೊಂದಿದೆ. ಒಂದು ಕಥೆ ಪ್ರಕಾರ, ಪ್ರಸಿದ್ಧ ಬೌದ್ಧ ಸಂತ ಗುರು ಪದ್ಮಸಂಭವ, ಚುಂಗ್ ಥಾಂಗ್ ಗೆ ಭೇಟಿ ನೀಡಿದ್ದರು ಮತ್ತು  ಇಂದಿಗೂ ಅವರ ಹೆಜ್ಜೆಗುರುತುಗಳನ್ನು ಇಲ್ಲಿನ ಬಂಡೆಗಳ ಮೇಲೆ ಕಾಣಬಹುದು ಎಂದು ಹೇಳುತ್ತಾರೆ.

ಅಲ್ಲದೆ, ಈ ಬಂಡೆಯಲ್ಲಿ ನೀರು ನಿರಂತರವಾಗಿ ಹರಿಯುವ ಒಂದು ಸಣ್ಣ ಆರಂಭವನ್ನು ಕಾಣಬಹುದು. ಇಲ್ಲಿ ಸದಾ ನೀರು ಬರುತ್ತಲೇ ಇರುತ್ತದೆ. ಜೊತೆಗೆ ಚುಂಗ್ ಥಾಂಗ್ ಭತ್ತ ಬೆಳೆಯಲಾಗುವ ತುಣುಕು ನೆಲವನ್ನು ಕೂಡ ಹೊಂದಿದೆ. ಇಲ್ಲಿನ ಹವಾಮಾನ ಪರಿಸ್ಥಿತಿಯಲ್ಲಿ ಇಲ್ಲಿ ಭತ್ತ ಬೆಳೆಯುತ್ತಿರುವುದು ಪವಾಡ ಎಂದೇ ಹೇಳಲಾಗುತ್ತದೆ. ಚ್ಂಗ್ ಥಾಂಗ್ ಮತ್ತಷ್ಟು ಪವಿತ್ರ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಮತ್ತೊಂದು ಆಸಕ್ತಿದಾಯಕ ದಂತಕಥೆಯನ್ನು ಹೊಂದಿದೆ. ಗುರು ನಾನಕ್ ದೇವ್ ಕೂಡ ಟಿಬೆಟ್ ಮತ್ತು ಚೀನಾಕ್ಕೆ ತಮ್ಮ ಪ್ರಯಾಣದ ಸಮಯದಲ್ಲಿ ಚುಂಗ್ ಥಾಂಗ್ ನಲ್ಲಿ ತಂಗಿದ್ದರು ಎಂಬ ನಂಬಿಕೆ ಇದೆ. ಚುಂಗ್ ಥಾಂಗ್ ಹೆಸರು ಗುರು ನಾನಕ್ ಜಿಯವರಿಂದ ಪ್ರದಾನ ಮಾಡಲಾಗಿದ್ದು, ಅವರು ನಂಬಿದ್ದ  'ಒಂದು ಉತ್ತಮ ಸ್ಥಾನ' ಎಂಬ ಅರ್ಥವುಳ್ಳ ಪಂಜಾಬಿ ಪದ 'ಚಂಗಾ ಸ್ಥಾನ' ದಿಂದ ಪಡೆಯಲಾಗಿದೆ. ಪಂಜಾಬಿಯಲ್ಲಿ 'ಚಂಗಾ' ಎಂದರೆ ಉತ್ತಮ ಎಂಬರ್ಥವಿದೆ.

ಭೌಗೋಳಿಕತೆ

ಚುಂಗ್ ಥಾಂಗ್, ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ ನಿಂದ 95 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಪಟ್ಟಣ 1790 ಮೀಟರ್ ಗಳಷ್ಟು ಎತ್ತರದಲ್ಲಿದೆ. ಮತ್ತು 27.62 ಡಿಗ್ರಿ ಉತ್ತರ ಮತ್ತು 88.63 ಡಿಗ್ರಿ ಪೂರ್ವ ದಿಕ್ಕಿನಲ್ಲಿದೆ.

ಚುಂಗ್ಥಾಂಗ್ ಪ್ರಸಿದ್ಧವಾಗಿದೆ

ಚುಂಗ್ಥಾಂಗ್ ಹವಾಮಾನ

ಉತ್ತಮ ಸಮಯ ಚುಂಗ್ಥಾಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚುಂಗ್ಥಾಂಗ್

  • ರಸ್ತೆಯ ಮೂಲಕ
    ಚುಂಗ್ ಥಾಂಗ್, ಮಂಗನ್ ಸ್ಥಳಕ್ಕೆ ಹತ್ತಿರದಲ್ಲಿದೆ. ಇದು ಮಂಗನ್ ನಿಂದ 30 ಕಿಮೀ ದೂರದಲ್ಲಿದೆ. ಇಲ್ಲಿಂದ ಸುಲಭವಾಗಿ ಬಸ್ ಅಥವಾ ಟ್ಯಾಕ್ಸಿಗಳು ಮೂಲಕ ಚುಂಗ್ ಥಾಂಗ್ ಪಟ್ಟಣವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನ್ಯೂ ಜಲ್ಪೈಗುರಿ ಸಿಕ್ಕಿಂ ಇತರೆ ತಾಣಗಳ ಜೊತೆಗೆ ಚುಂಗ್ ಥಾಂಗ್ ಪಟ್ಟಣಕ್ಕೆ ಹತ್ತಿರದ ರೈಲ್ವೇ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಚುಂಗ್ ಥಾಂಗ್ ಪಟ್ಟಣದ ಹತ್ತಿರದ ವಿಮಾನ ನಿಲ್ದಾಣ ಬಾಗ್ದೋಗ್ರ ವಿಮಾನ ನಿಲ್ದಾಣ. ಇದು ಸ್ಥಳದಿಂದ 121 ಕಿ. ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed