ನೊಂಗ್‍ಸವ್ಲಿಯವು ಸೊಹ್ರಾದ (ಚಿರಾಪುಂಜಿ) ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ತಾಣವು ದೇಶ- ವಿದೇಶದ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ 1848ರಲ್ಲಿ ವೆಲ್ಷ್ ಮಿಷನರಿಗಳಿಂದ ಆಗ್ನೇಯ ಭಾರತದ ಮೊಟ್ಟ ಮೊದಲ ಚರ್ಚ್ ಸ್ಥಾಪನೆಗೊಂಡ ಕಾರಣಕ್ಕಾಗಿ ಈ ಪ್ರದೇಶ ಖ್ಯಾತಿ ಪಡೆದಿದೆ. ಬ್ರಿಟೀಷರ ಕಾಲದ ಭಾರತದ ಸುಂದರ ವಾಸ್ತುಶಿಲ್ಪ ಕಲೆಯು ಈ ಚರ್ಚಿನ ರೂಪದಲ್ಲಿ ನೆಲೆ ನಿಂತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
ಇದೇ ಸ್ಥಳದಲ್ಲಿ ಥಾಮಸ್ ಜೋನ್ಸ್ ಎಂಬುವ ಮಿಷನರಿಯೊಬ್ಬರು ಖಾಸಿ ವರ್ಣಮಾಲೆಯನ್ನು ಪರಿಚಯಿಸಿದರು. ಮುಂದೆ ಇದು ಖಾಸಿ ಮತ್ತು ಜೈನ್ಷಿಯ ಬೆಟ್ಟಗಳಿಗೆ ತಲುಪಿ ಖಾಸಿ ಸಾಹಿತ್ಯವನ್ನು ಅಭಿವೃದ್ಧಿಪಡಿಸಲು ನೆರವಾಯಿತು.
ಚಿರಾಪುಂಜಿ ಹಾಲಿಡೇ ರೆಸಾರ್ಟ್, ಕೊನಿಫೆರಸ್ ರೆಸಾರ್ಟ್ ಮತ್ತು ಸ-ಇ-ಮಿಕ ಪಾರ್ಕ್ ಗಳೆಂಬ ಸುಂದರವಾದ ಹೋಟೆಲ್‍ಗಲಳು ಮತ್ತು ರೆಸಾರ್ಟುಗಳು ಇಲ್ಲಿ ಒಂದೆರಡು ದಿನ ತಂಗಲು ಬರುವ ಪ್ರವಾಸಿಗರ ಬೇಡಿಕೆಗಳನ್ನು ಪೂರೈಸುತ್ತವೆ. ನೊಂಗ್‍ಸವ್ಲಿಯವು ಚಿರಾಪುಂಜಿಯಿಂದ ಎರಡು ಕಿ.ಮೀ.ನಷ್ಟು ದೂರದಲ್ಲಿದೆ. ಶಿಲ್ಲಾಂಗ್‍ನಿಂದ ಅಥವಾ ಚಿರಾಪುಂಜಿಯಿಂದ ಇಲ್ಲಿಗೆ ಟ್ಯಾಕ್ಸಿಯ ಮೂಲಕ ತಲುಪಬಹುದು.


Click it and Unblock the Notifications