ಖೊಹ್ ರಾಮ್ಹಹ್ ಅಥವಾ " ಪಿಲ್ಲರ್ ರಾಕ್" ಅಥವಾ "ಮೊಹ್ಟ್ರಾಪ್" ಎಂದು ಕರೆಯಲ್ಪಡುವ ಸ್ಥಳವು ಚಿರಾಪುಂಜಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ದೊಡ್ಡ ಮತ್ತು ಆಕರ್ಷಕವಾದ ಬಂಡೆಯಾಗಿದ್ದು, ಶಂಖಾಕೃತಿಯಲ್ಲಿದೆ (ಕೋನ್).
ದಂತ ಕತೆಗಳ ಪ್ರಕಾರ ಖೊಹ್ ರಾಮ್ಹಹ್ ಎಂಬುದು ಶಂಖಾಕೃತಿಯಲ್ಲಿರುವ ದುಷ್ಟ ಶಕ್ತಿಯ ಚೀಲದ ಪಳೆಯುಳಿಕೆಯಂತೆ. ಇಲ್ಲಿ ಕೇವಲ ಬಂಡೆ ಮಾತ್ರ ನೋಡಬೇಕೆ ಎಂದು ಬೇಸರಿಸಿಕೊಳ್ಳಬೇಡಿ. ಈ ಬಂಡೆಗಳ ಮೇಲೆ ಬಿದ್ದ ನೀರು ಕೆಳಗೆ ಧುಮ್ಮಿಕ್ಕುತ್ತ ಸೃಷ್ಟಿಸುವ ಜಲಪಾತವು ನೋಡುಗರ ಕಣ್ಣಿಗೆ ನಯನ ಮನೋಹರವಾಗಿ ಕಾಣುತ್ತದೆ. ಇದರ ಜೊತೆಗೆ ಬೆಟ್ಟಗಳ ಮೂಲಕ ಹಾದು ಬರುವ ಮೋಡಗಳು ಈ ಬಂಡೆಯ ಮುಂದೆ ಸಾಗುವಾಗ ಇಲ್ಲಿನ ಸೌಂದರ್ಯವು ಮತ್ತಷ್ಟು ಇಮ್ಮಡಿಕೊಳ್ಳುತ್ತದೆ.
ಈ ಮೇಲಿನ ಎಲ್ಲಾ ದೃಶ್ಯಾವಳಿಗಳನ್ನು ಈ ಬಂಡೆಯ ಮುಂದೆ ಇರುವ ವೀಕ್ಷಣಾ ತಾಣದಿಂದ ನೋಡಬಹುದು. ಇದರ ಜೊತೆಗೆ ಈ ಬಂಡೆಗೆ ಸಾಗುವಾಗ ಮತ್ತು ಬರುವಾಗ ರಸ್ತೆಯಲ್ಲಿ ಚಿರಾಪುಂಜಿಯ ಸ್ವರ್ಗ ಸದೃಶ್ಯವಾದ ಸೌಂದರ್ಯ ನಮ್ಮನ್ನು ಸೆಳೆಯುತ್ತದೆ. ಖೊಹ್ ರಾಮ್ಹಹ್‍ಗೆ ತಲುಪಲು ಶಿಲ್ಲಾಂಗ್‍ನಿಂದ ಪ್ರವಾಸಿ ವಾಹನದಲ್ಲಿ ತೆರಳಿದರೆ ಉತ್ತಮ.


Click it and Unblock the Notifications