Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ಗ್ರೀನ್ ರಾಕ್ ರಾಂಚ್

ಗ್ರೀನ್ ರಾಕ್ ರಾಂಚ್, ಚಿರಾಪುಂಜಿ

1

ಗ್ರೀನ್ ರಾಕ್ ರಾಂಚ್ ಚಿರಾಪುಂಜಿಯ ಹೊಸ ಆಕರ್ಷಣೆಯಾಗಿದೆ. ಇದು ಕುದುರೆ ಸವಾರಿ, ಸಾಂಪ್ರದಾಯಿಕ ಬಿಲ್ಲುಗಾರಿಕೆ ಅಂಗಣ ಮತ್ತು ಹಚ್ಚ ಹಸಿರಿನ ಹೊದಿಕೆಯನ್ನು ಹೊದ್ದ ಕಾಡಿನ ಅದ್ಭುತ ಸಮಾಗಮವಾಗಿದೆ. ಈ ಮೂರು ಸೇರಿ ಈ ಸ್ಥಳವನ್ನು ಅತ್ಯದ್ಭುತವೆನ್ನುವಂತೆ ಮಾಡಿವೆ. ಈ ಸ್ಥಳವು "ಶಡ್ವೆಲ್"ಗಳೆಂಬುವವರಿಗೆ ಸೇರಿದ್ದಾಗಿದೆ. ಇವರು ಚಿರಾಪುಂಜಿಯಲ್ಲಿ ಮೊಟ್ಟ ಮೊದಲು ನೆಲೆಗೊಂಡ ಬ್ರಿಟೀಷರಲ್ಲಿ ಒಬ್ಬರಾಗಿದ್ದಾರೆ. ಇವರ ಹಲವು ತಲೆಮಾರಿನವರು ಇಲ್ಲಿ ನೆಲೆಗೊಂಡಿದ್ದಾರೆ. ಹಲವಾರು ವರ್ಷಗಳ ಶ್ರಮದಿಂದ ಇವರು ಈ ರಾಂಚ್ ಅನ್ನು ನಿರ್ಮಿಸಿದ್ದಾರೆ. ಈ ರಾಂಚ್ ಪ್ರವಾಸಿಗರಿಗೆ ಗತಕಾಲದ ಇತಿಹಾಸವನ್ನು ನೆನಪು ಮಾಡಿಕೊಡುತ್ತದೆ. ಇಲ್ಲಿರುವ ಕೌಟುಂಬಿಕ ರುದ್ರಭೂಮಿಯು ಸಹ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇಂದು ಇಲ್ಲಿ ಒಂದು ಕಾಫಿ ಶಾಪ್, ಹಳೆಯ ಕಾಲದ ಅವಶೇಷಗಳ ನಡುವೆ ನೆಲೆಗೊಂಡಿರುವ ಒಂದು ಲಾಂಜ್, ತೋಟ ಹಾಗು ಪ್ರಾಕೃತಿಕ ನಡಿಗೆಯ ಪಥವನ್ನು ನಿರ್ಮಿಸಲಾಗಿದೆ. ಸುತ್ತಮುತ್ತ ಇರುವ ನೀಲಮಯ ಪರ್ವತಗಳು, ಕಣಿವೆಗಳು ಹಾಗು ಸುಂದರ ಪ್ರಕೃತಿಯ ವಿಹಂಗಮ ನೋಟವನ್ನು ಒದಗಿಸಲು ಇಲ್ಲಿ ಒಂದು ವೀಕ್ಷಣಾಲಯವನ್ನು ಸಹ ನಿರ್ಮಿಸಲಾಗಿದೆ.

ಪ್ರವಾಸಿಗರು ಶಿಲ್ಲಾಂಗ್‍ನಿಂದ ಕ್ಯಾಬ್ ಮಾಡಿಕೊಂಡು ಬಂದು ಈ ಅತ್ಯದ್ಭುತವಾದ ವಿಹಾರ ತಾಣದಲ್ಲಿ ವಿಹರಿಸಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun