ಚೆನ್ನೈನ ಜಾರ್ಜ್ ಟೌನ್ ನಲ್ಲಿರುವ ತಂಬು ಚೆಟ್ಟಿ ಬೀದಿಯಲ್ಲಿ ನೆಲೆಸಿದೆ ಕಾಲಿಕಂಬಲ್ ದೇವಾಲಯ. ಈ ದೇವಾಲಯ ನೆಲೆಸಿರುವ ಪ್ರದೇಶವು ಚೆನ್ನೈ ನಗರದ ಪ್ರಮುಖ ಆರ್ಥಿಕ ಕೇಂದ್ರವಾಗಿದ್ದು, ಈ ದೇವಸ್ಥಾನವನ್ನು ನೋಡುವ ಅವಕಾಶ ಮಿಸ್ ಮಾಡಿಕೊಳ್ಳುವ ಪ್ರಮೇಯವೆ ಇಲ್ಲ. ಈ ದೇವಸ್ಥಾನವು ಕಾಲಿಕಂಬಲ್ ದೇವತೆಗೆ ಮುಡಿಪಾಗಿದೆ. ಇವಳನ್ನು ಭಾರತದ ಕೆಲವು ಭಾಗಗಳಲ್ಲಿ ಕಾಮಾಕ್ಷಿ ಎಂತಲೂ ಕರೆಯಲಾಗುತ್ತದೆ.
ಪ್ರಸ್ತುತ ಈ ದೇವಸ್ಥಾನವನ್ನು, ಮೂಲ ದೇವಾಲಯ ನಾಶ ಹೊಂದಿದ ತರುವಾಯ ಸುಮಾರು ಕ್ರಿ.ಶ.1640 ರಲ್ಲಿ ನಿರ್ಮಿಸಲಾಗಿದೆ. ಮೂಲ ದೇವಸ್ಥಾನದ ಸ್ಥಳವು ಕಡಲ ತೀರದ ಬಳಿಯಿದ್ದು, ಪೋರ್ಚುಗೀಸರಿಂದ ಆ ದೇವಾಲಯವು ಹಾನಿಗಿಡಾಯಿತು ಎಂದು ನಂಬಲಾಗಿದೆ. ಸ್ಥಳೀಯ ಕಥೆಗಳ ಪ್ರಕಾರ, ಭಯಂಕರ ಹಾಗು ಶಕ್ತಿಶಾಲಿ ರೂಪದ ಕಾಮಾಕ್ಷಿ ದೇವಿಯನ್ನು ಆ ದೇವಾಲಯದಲ್ಲಿ ಪೂಜಿಸಲಾಗುತ್ತಿತ್ತಂತೆ. ಕ್ರಮೇಣವಾಗಿ ಆ ರುದ್ರಭಯಂಕರ ರೂಪದ ಬದಲಾಗಿ ಗಂಭೀರ ಹಾಗು ಶಾಂತತೆಯ ಪ್ರತಿರೂಪವಾದ ಕಾಲಿಕಂಬಲ್ ದೇವಿಯನ್ನು ಪೂಜಿಸಲು ಪ್ರಾರಂಭಿಸಲಾಯಿತಂತೆ.


Click it and Unblock the Notifications