Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಕಾಪಾಲೀಶ್ವರ್ ದೇವಾಲಯ

ಕಾಪಾಲೀಶ್ವರ್ ದೇವಾಲಯ, ಚೆನ್ನೈ

6

ಚೆನ್ನೈ ಬಳಿಯಿರುವ ಮೈಲಾಪೋರ್ ಉಪನಗರದಲ್ಲಿ ನೆಲೆಸಿದೆ ಕಾಪಾಲೀಶ್ವರ್ ದೇವಸ್ಥಾನ. ಈ ದೇವಸ್ಥಾನವು ಶಿವ ಹಾಗು ಆತನ ಪತ್ನಿಯಾದ ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ವಿಶೇಷವಾಗಿ ಪಾರ್ವತಿ ದೇವಿಯನ್ನು ಈ ದೇವಸ್ಥಾನದಲ್ಲಿ ಕರ್ಪಗಂಬಲ್ ಅಥವಾ 'ಆಸೆ ಈಡೇರಿಸುವ ಮರದ ದೇವತೆ' ಯ ರೂಪದಲ್ಲಿ ಪೂಜಿಸಲಾಗುತ್ತದೆ.

ದೇವಸ್ಥಾನಕ್ಕೆ ಈ ಹೆಸರು 'ಕಾಪಾಲಂ' (ಅಂದರೆ ತಲೆ) ಮತ್ತು 'ಈಶ್ವರರ್' (ಶಿವನ ಹೆಸರು) ಎಂಬ ಎರಡು ಪದಗಳಿಂದ ಬಂದಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಒಂದೊಮ್ಮೆ ಶಿವ ಹಾಗು ಬ್ರಹ್ಮ ದೇವರು ಕೈಲಾಸಗಿರಿಯಲ್ಲಿ ಭೇಟಿಯಾದರು. ಆ ಸಂದರ್ಭದಲ್ಲಿ ಬ್ರಹ್ಮದೇವರು ಶಿವನ ಪ್ರಾಧಾನ್ಯತೆಯನ್ನು ಕಡೆಗಾಣಿಸಿದರು. ಇದರಿಂದ ಕುಪಿತನಾದ ಶಿವನು ಬ್ರಹ್ಮನ ಒಂದು ತಲೆ(ಕಾಪಾಲ)ಯನ್ನೆ ಕಿತ್ತು ತೆಗೆದನು. ಇಷ್ಟಾದ ಮೇಲೆ ತನ ತಪ್ಪಿನ ಅರಿವಾದ ಬ್ರಹ್ಮನು ಮೈಲಾಪೋರಕ್ಕೆ ಬಂದು ಒಂದು ಲಿಂಗವನ್ನು ಪ್ರತಿಷ್ಠಾಪಿಸಿದನು.   

ಸುಮಾರು 7 ನೇಯ ಶತಮಾನದ ಸಂದರ್ಭದಲ್ಲಿ ಪಲ್ಲವರಿಂದ ಈ ದೇವಾಲಯವು ನೀರ್ಮಾಣವಾಗಿದೆ ಎಂದು ನಂಬಲಾಗಿದೆ. ಇದರಲ್ಲಿ ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಕಾಣಬಹುದಾಗಿದೆ. ಮೂಲ ದೇವಾಲಯವನ್ನು ಇಂದು ಕಾಣಬಹುದಾದ 'ಸ್ಯಾನ್ ಥೋಮ್' ಚರ್ಚಿನ ಸ್ಥಳದಲ್ಲಿ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ಇದು ಪೋರ್ಚುಗೀಸರಿಂದ ನಾಶ ಹೊಂದಿತು. ಇಂದು ಕಾಣುತ್ತಿರುವ ಈ ದೇವಸ್ಥಾನವು 16 ನೇಯ ಶತಮಾನದಲ್ಲಿ ವಿಜಯನಗರ ಅರಸರಿಂದ ನಿರ್ಮಿತವಾದ ದೇವಾಲಯವಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat