Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಬೆಸಂಟ್ ನಗರ ಬೀಚ್

ಬೆಸಂಟ್ ನಗರ ಬೀಚ್, ಚೆನ್ನೈ

4

ಬೆಸಂಟ್ ನಗರ ಬೀಚ್, 'ಎಲಿಯಟ್ಸ್ ಬೀಚ್' ಅಥವಾ 'ಬೆಸ್ಸಿ' ಅಂತಲೂ ಪ್ರಖ್ಯಾತವಾಗಿದೆ. ಇದಕ್ಕೆ ಈ ಹೆಸರು ಪ್ರಸಿದ್ಧ ಥಿಯೊಸೊಫಿಸ್ಟ್(ತತ್ವಜ್ಞಾನಿ) ಹಾಗು ಭಾರತ ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿ ಮುಖ್ಯ ಪಾತ್ರವನ್ನೂ ವಹಿಸಿದ್ದ 'ಆನ್ನಿ ಬೆಸಂಟ್' ರಿಂದ ಬಂದಿದೆ.

ಚೆನ್ನೈನ ಬೆಸಂಟ್ ನಗರದಲ್ಲಿರುವ ಈ ಬೀಚ್, ಮತ್ತೊಂದು ಪ್ರಸಿದ್ಧ ಬೀಚ್ ಮರೀನಾ ಕಡಲ ತೀರ ಅಂತ್ಯಗೊಳ್ಳುವ ಸ್ಥಳದಿಂದಲೆ ಪ್ರಾರಂಭಗೊಳ್ಳುತ್ತದೆ. ಈ ಬೀಚ್ ಆಸುಪಾಸಿನಲ್ಲಿರುವ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಅಷ್ಟಲಕ್ಷ್ಮಿ ದೇವಾಲಯ ಮತ್ತು ವೇಲಾಂಕಣ್ಣಿ ಚರ್ಚ್. ತಪ್ಪಿಸಿಕೊಳ್ಳಲಾಗದ ಇಲ್ಲಿನ ಮಗದೊಂದು ಆಕರ್ಷಣೆ ಎಂದರೆ ಕಾರ್ಲ್ ಸ್ಕ್ಮಿಡ್ತ್ ಸ್ಮಾರಕ. ಈತ್ ಓರ್ವ ಡಚ್ ನಾವಿಕನಾಗಿದ್ದನು ಹಾಗು ಒಂದೊಮ್ಮೆ ಈಜು ಬಾರದವನೊಬ್ಬನು ನೀರಿನಲ್ಲಿ ಮುಳುಗುತ್ತಿರುವಾಗ ಅವನನ್ನು ಉಳಿಸಿ ತಾನೇ ಸ್ವತಃ ಮುಳುಗಿ ಪ್ರಾಣ ತ್ಯಜಿಸಿದನು.

ಪ್ರವಾಸಿಗರು ಮಾತ್ರವಲ್ಲದೆ ಸ್ಥಳೀಯರಲ್ಲೂ ಈ ಕಡಲ ತೀರ ಬಹು ಜನಪ್ರಿಯವಾಗಿದೆ. ಯುವಪಿಳಿಗೆಗಂತೂ ಇದೊಂದು ಸಮಯ ಕಳೆಯಲು ಇಷ್ಟವಾದ ತಾಣ. ವಾರದ ದಿನಗಳಲ್ಲಿ ಅನೇಕ ಕಾಲೇಜ್ ಹಾಗು ಶಾಲೆಯ ವಿದ್ಯಾರ್ಥಿಗಳು ಇಲ್ಲಿ ಉಪಸ್ಥಿತರಿರುವುದನ್ನು ಕಾಣಬಹುದು. ವಾರಾಂತ್ಯಗಳಲ್ಲಂತೂ ಸಾಕಷ್ಟು ಪ್ರಮಾಣದಲ್ಲಿ ಕುಟುಂಬವರ್ಗಗಳು ಇಲ್ಲಿ ಸಮಯ ಕಳೆಯುವುದನ್ನು ನೋಡಬಹುದು. ಈ ಬೀಚ್ ತೀರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗುಣಮಟ್ಟದ ಉಪಹಾರಗೃಹಗಳೂ ಕೂಡ ಇರುವುದರಿಂದ ಇದೊಂದು ಜನಪ್ರಿಯ ಪಿಕ್ನಿಕ್ ತಾಣವೂ ಆಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri