ಚಲ್ಸಾ ಪಶ್ಚಿಮ ಬಂಗಾಲದಲ್ಲಿರುವ ಸುಂದರ ನಗರ, ಇದು ಹಿಮಾಲಯದ ತಪ್ಪಲಿನಲ್ಲಿದೆ. ಇದು ಸಿಲಿಗುರಿಯ ಹಾಗೆ ಹೆಸರಾಂತ ಪ್ರವಾಸಿ ಸ್ಥಳ. ಇಲ್ಲಿ ಚಹಾದ ಗಾರ್ಡನ್ ಗಳು, ವಿಶಾಲವಾದ ಅರಣ್ಯಗಳು ಮತ್ತು ಹಲವಾರು ನದಿಯನ್ನು ಹೊಂದಿದೆ. ಸ್ಥಳೀಯ ವನ್ಯಜೀವಿಧಾಮವು ಇಲ್ಲಿದ್ದು ಅದರಲ್ಲಿ ಪ್ರಮುಖವಾಗಿ ಖಡ್ಗ ಮೃಗದ ಮತ್ತು ಆನೆಯ ವಾಸವಿರುತ್ತದೆ. ಸ್ಥಳೀಯ ನಿವಾಸಿಗಳಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಅರಣ್ಯವು ವಿವಿಧ ರೀತಿಯ ಜಿಂಕೆಗಳಿಗೆ ಅಶ್ರಯ ತಾಣವಾಗಿದ್ದು ಅದರಲ್ಲಿ ಪ್ರಮುಖವಾಗಿ ಸಂಬಾರ್, ಸ್ಥಳೀಯ ಮತ್ತು ತೊಟೆನಾರಿನ ಜಿಂಕೆಗಳಿರುತ್ತದೆ.
ಚಲ್ಸಾ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು
ಪ್ರವಾಸಿಗರು ಲಕ್ಕಿಯಾಗಿದ್ದರೆ, ಬುಕ್ಸಾ ಹುಲಿಧಾಮದಲ್ಲಿನ ಬೆಂಗಾಲ್ ಹುಲಿಯ ವೈಭವನ್ನು ನೋಡಬಹುದು, ಇದು ಅಂದಾಜು ಸುಮಾರು 750 ಚದರ ಕಿಲೋಮಿಟರ್ ವ್ಯಾಪಿಸಿದೆ. ಬುಕ್ಸಾ ಹುಲಿಧಾಮ ನೈಸರ್ಗಿಕ ಪ್ರಿಯರಿಗೆ ಮತ್ತು ಟ್ರೆಕ್ಕಿಂಗ್ ಮಾಡುವವರಿಗೆ ಅತ್ಯಂತ ಸೂಕ್ತ ಸ್ಥಳ. ಇದು ಚಲ್ಸಾ ಪ್ರವಾಸೋದ್ಯಮದ ಪ್ರಮುಖ ಸ್ಥಳ. ಬೆಂಗಾಲ್ ಹುಲಿ ಹೊರತಾಗಿ ಬುಕ್ಸಾ ಹುಲಿಧಾಮ ಮೊಸಳೆ ಮತ್ತು ವಿವಿಧ ಅಳಿಲು ಮತ್ತು ಹಕ್ಕಿಯ ಧಾಮವೂ ಕೂಡಾ.
ಚಲ್ಸಾ ತಲುಪುವುದು ಹೇಗೆ
ಚಲ್ಸಾಗೆ ಭೇಟಿ ನೀಡಲು ಪ್ರಯಾಸ ಪಡಬೇಕಾಗಿಲ್ಲ. ಸಿಲಿಗುರಿಯನ್ನು ಪ್ರಮುಖ ಕೇಂದ್ರವಾಗಿರಿಸಿ ಪ್ರಯಾಣಿಸ ಬಹುದು. ಅದು ಚಲ್ಸಾದಿಂದ ಸುಮಾರು 64 ಕಿಲೋಮೀಟರ್ ದೂರದಲ್ಲಿದೆ. ಚಲ್ಸಾ ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ವೀಕ್ಷಿಸಲು ಮೂರು ದಿನಕ್ಕಿಂತ ಮೇಲೆ ಬೇಕಾಗಿಲ್ಲ.


Click it and Unblock the Notifications