Search
  • Follow NativePlanet
Share
ಮುಖಪುಟ » ಸ್ಥಳಗಳು » ಬೊಮ್ಡಿಲ » ಆಕರ್ಷಣೆಗಳು » ಭಾಲುಕ್ಪಾಂಗ್

ಭಾಲುಕ್ಪಾಂಗ್, ಬೊಮ್ಡಿಲ

3

ಬೊಮ್ಡಿಲ ಪಟ್ಟಣದಿಂದ 100 ಕಿಮೀ ದೂರದಲ್ಲಿ ಭಾಲುಕ್ಪಾಂಗ್ ಪಟ್ಟಣವಿದೆ. ಇದು ಸಮುದ್ರಮಟ್ಟದಿಂದ 213 ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಪ್ರವಾಸಿಗರು ಸುಂದರ ಪ್ರಕೃತಿ ದೃಶ್ಯಗಳನ್ನು ಕಾಣಬಹುದು. ಇಲ್ಲಿಗೆ 52 ಕಿಮೀ ದೂರದಲ್ಲಿರುವ ತೇಜ್ಪುರದಿಂದ ಕೂಡ ತಲುಪಬಹುದು.

ಇತಿಹಾಸದ ಪ್ರಕಾರ ಭಾಲುಕ್ಪಾಂಗ್ ಪಟ್ಟಣವನ್ನು ಸ್ಥಳೀಯ ಆದಿವಾಸಿ ಪಂಗಡಗಳಾದ ’ಅಕಾ’ದ ಆಳ್ವಿಕೆಗಾರರು ಆಳಿದ್ದರು. ಕೆಲವೊಮ್ಮೆ ಇದು ಭೂತಾನ್ ಮತ್ತು ಅಸ್ಸಾಂ ರಾಜಕೀಯ ಆಳ್ವಿಕೆಗೆ ಕೂಡ ಒಳಪಟ್ಟಿತ್ತು. 1873 ರಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಇದನ್ನು ಗಡಿಯಾಚೆಗಿನ ಪ್ರದೇಶವೆಂದು ಘೋಷಿಸಲಾಯಿತು. ಇಲ್ಲಿನ ಸ್ಥಳೀಯವಾಸಿಗಳಾದ ಅಕಾ ಪಂಗಡದವರು ಜನವರಿಯಲ್ಲಿ ವಾರ್ಷಿಕ ಉತ್ಸವ ’ನ್ಯೇತಿ ಡೌ’ ಆಚರಿಸುತ್ತಾರೆ.

ಭಾಲುಕ್ಪಾಂಗ್ ಪ್ರಾಕೃತಿಕ ಸೌಂದರ್ಯದೊಂದಿಗೆ ಹಲವು ಮನರಂಜನಾ ಚಟುವಟಿಕೆಗಳನ್ನು ಕೂಡ ಪ್ರವಾಸಿಗರಿಗೆ ಒದಗಿಸುತ್ತದೆ. ಕಾಮೆಂಗ್ ನದಿಯಲ್ಲಿ ಮೀನು ಷಿಕಾರಿ ಮತ್ತು ರಿವರ್ ರಾಫ್ಟಿಂಗ್ ಮಾಡಬಹುದು. ಇದಲ್ಲದೆ ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಪಖುಯಿ ಗೇಮ್ ಸೆಂಚುರಿ ಮತ್ತು ಟಿಪಿ ಆರ್ಚಿಡೆರಿಯಂ. ಇಲ್ಲಿ ಪ್ರವಾಸಿಗರು 2600 ಬಗೆಯ ಆರ್ಚಿಡ್‌ಗಳನ್ನು ಮತ್ತು 80 ಬಗೆಯ ಜೀವಿಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed