Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಸ್ಟೇಷನ್ ರಸ್ತೆ

ಸ್ಟೇಷನ್ ರಸ್ತೆ, ಬಿಕಾನೇರ್

1

ಸ್ಟೇಷನ್ ರಸ್ತೆಯು ಈ ನಗರದ ಪ್ರಸಿದ್ಧವಾದ ವ್ಯಾಪಾರ ವಲಯವಾಗಿದೆ. ಇಲ್ಲಿ ಯಾರು ಬೇಕಾದರು ರಾಜಸ್ಥಾನದ ಪ್ರತ್ಯೇಕತೆಯಿರುವ ವಸ್ತುಗಳನ್ನು, ಉತ್ತಮ ದರದಲ್ಲಿ ಕೊಳ್ಳಬಹುದಾಗಿದೆ. ಇದಕ್ಕಾಗಿ ಸ್ವಲ್ಪ ತಾಳ್ಮೆ ಮತ್ತು ಚೌಕಸಿಯ ಗುಣವನ್ನು ಹೊಂದಿರಬೇಕಾದುದು ಅನಿವಾರ್ಯ. ಇಲ್ಲಿನ ಅಂಗಡಿಗಳಲ್ಲಿ "ಜೂತಿಗಳು" ಎಂದು ಕರೆಯಲ್ಪಡುವ, ಕಸೂತಿ ಮಾಡಲಾದ ಪಾದರಕ್ಷೆಗಳನ್ನು , ಸ್ಥಳೀಯ ಬಟ್ಟೆಗಳನ್ನು , ಚರ್ಮೋತ್ಪನ್ನಗಳನ್ನು, ಸಾಂಪ್ರದಾಯಿಕ ಕಲಾವಸ್ತುಗಳನ್ನು ಮತ್ತು ಮರದ ವಸ್ತುಗಳ ವಿಪುಲ ಶ್ರೇಣಿಗಳನ್ನು ಕೊಳ್ಳಲು ಅವಕಾಶವಿದೆ. ಪ್ರವಾಸಿಗರು ಇಲ್ಲಿ ತಾವೇ ಆಯ್ಕೆ ಮಾಡಿಕೊಡುವ ವಿನ್ಯಾಸದ ಪಾದರಕ್ಷೆಗಳನ್ನು 24 ಗಂಟೆಯ ಅವಧಿಯಲ್ಲಿ ತಯಾರಿಸಿಕೊಡುವ ವ್ಯವಸ್ಥೆ ಸಹ ಉಂಟು. ಸಾಂಪ್ರದಾಯಿಕ ಮಿನಿಯೇಚರ್ ವರ್ಣಚಿತ್ರಗಳು ಮತ್ತು ಹೊಂಬಣ್ಣದ ಮೆರಗು ಹೊಂದಿರುವ ಮರದ ಮತ್ತು ಚರ್ಮದ ಕುಶಲ ವಸ್ತುಗಳು  ಈ ಮಾರುಕಟ್ಟೆಯ ವಿಶೇಷ ಆಕರ್ಷಣೆಗಳಾಗಿವೆ.

ಅಲ್ಲದೆ ಈ ಸ್ಥಳವು ಆಹಾರ ಪ್ರಿಯರಿಗು ಸಹ ಇಷ್ಟವಾಗುತ್ತದೆ. ಏಕೆಂದರೆ ಪ್ರಸಿದ್ಧ ಬ್ರ್ಯಾಂಡ್ ಆದ "ಹಳದಿರಾಮ್ಸ್"ರವರ ಮೂಲ ಅಂಗಡಿ ಇರುವುದು ಇಲ್ಲಿಯೆ. ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರು ವ್ಯಾಪಾರ ಮಾಡುವುದರ ಜೊತೆಗೆ ಬಾಯಿಯಲ್ಲಿ ನೀರೂರಿಸುವ ಭುಜಿಯಾಗಳ ಮತ್ತು ಸಿಹಿತಿನಿಸುಗಳ ಸವಿಯನ್ನು ರುಚಿ ನೋಡಬಹುದು.

One Way
Return
From (Departure City)
To (Destination City)
Depart On
18 Sep,Fri
Return On
19 Sep,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Sep,Fri
Check Out
19 Sep,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Sep,Fri
Return On
19 Sep,Sat