ಬಿಕಾನೇರ್ ಗೆ ಹೋಗಲು ಮತ್ತು ಅಲ್ಲಿ ಸುತ್ತಾಡಲು ಅಕ್ಟೋಬರ್ನಿಂದ ಮಾರ್ಚ್ ತಿಂಗಳವರೆಗಿನ ಸಮಯವು ಅತ್ಯುತ್ತಮವಾದ ಕಾಲವಾಗಿರುತ್ತದೆ. ಬಿಕಾನೇರ್ ಗೆ ಕಿರು ಪ್ರವಾಸ ಹೊರಡಲು ಯೋಜಿಸುವವರಿಗೆ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯು ಹೇಳಿ ಮಾಡಿಸಿದ ಸಮಯವಾಗಿದೆ.
(ಮಾರ್ಚ್ ನಿಂದ ಜೂನ್) : ಬೇಸಿಗೆಯು ಇಲ್ಲಿ ಮಾರ್ಚ್ನಲ್ಲಿ ಆರಂಭವಾಗಿ ಜೂನ್ ಅಂತ್ಯಭಾಗದವರೆಗೆ ಇರುತ್ತದೆ. ಆಗ ಇಲ್ಲಿ ಗರಿಷ್ಠ 41.8° ಮತ್ತು ಕನಿಷ್ಠ 28.0° ಸೆಲ್ಶಿಯಸ್ ಉಷ್ಣಾಂಶವು ದಾಖಲಾಗಿದೆ.
(ಜುಲೈನಿಂದ ನವೆಂಬರ್ವರೆಗೆ): ಮಳೆಗಾಲವು ಜುಲೈನಲ್ಲಿ ಆರಂಭವಾಗಿ ನವೆಂಬರ್ನವರೆಗೆ ಇರುತ್ತದೆ. . ಮಳೆಗಾಲದಲ್ಲಿ ಈ ಪ್ರಾಂತ್ಯದಲ್ಲಿ 26-44 ಸೆಂ. ಮೀ ಪ್ರಮಾಣದ ಮಳೆಯನ್ನು ಕಾಣಬಹುದು. ಮಿತವಾದ ಮಳೆಯಿಂದಾಗಿ ಇಲ್ಲಿನ ಹವಾಮಾನವು ಸ್ವಲ್ಪ ಮಟ್ಟಿಗೆ ಆರ್ದ್ರತೆಯಿಂದ ಕೂಡಿರುತ್ತದೆ.
(ಡಿಸೆಂಬರ್ನಿಂದ ಫೆಬ್ರವರಿಯವರೆಗೆ): ಡಿಸೆಂಬರ್, ಜನವರಿ ಮತ್ತು ಫೆಬ್ರವರಿಗಳು ಬಿಕಾನೇರ್ ನಲ್ಲಿ ಚಳಿಗಾಲದ ತಿಂಗಳುಗಳಾಗಿವೆ. ಆಗ ಇಲ್ಲಿ ದಾಖಲಾಗಿರುವ ಗರಿಷ್ಠ ಉಷ್ಣಾಂಶವು 23.2° ಸೆಲ್ಶಿಯಸ್ ಆಗಿರುತ್ತದೆ. ಅಲ್ಲದೆ ಚಳಿಗಾಲದ ದೆಸೆಯಿಂದ ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 5.0° ಸೆಲ್ಶಿಯಸ್ವರೆಗು ಕುಸಿಯುವುದುಂಟು.