ಕೋಟೆ ಗೇಟ್ ಉತ್ಸಾಹಿ ಗ್ರಾಹಕರಿಗೆ ತಮಗಿಷ್ಟ ಬಂದ ವಸ್ತುಗಳನ್ನು ಕೊಳ್ಳಲು ಹೇಳಿ ಮಾಡಿಸಿದ ತಾಣವಾಗಿದೆ. ಈ ಸ್ಥಳವು ರಾಜಸ್ಥಾನದ ಸುಂದರ ಸೃಜನಶೀಲ ಕಲಾವಸ್ತುಗಳು ಮತ್ತು ಕರಕುಶಲ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಪ್ರವಾಸಿಗರು ಇಲ್ಲಿ ಒಂಟೆಯ ತೊಗಲಿನಲ್ಲಿ ಮಾಡಿದ ವಸ್ತುಗಳನ್ನು, ಮಿನಿಯೇಚರ್ ವರ್ಣಚಿತ್ರಗಳನ್ನು, ಖಾದಿ ವಸ್ತುಗಳನ್ನು ಮತ್ತು ಮರದ ಕೆತ್ತನೆಗಳುಳ್ಳ ವಸ್ತುಗಳನ್ನು ಕೊಳ್ಳಬಹುದು. ಇದರೊಂದಿಗೆ ಇಲ್ಲಿರುವ ರಸವತ್ತಾದ ಭುಜಿಯಾಗಳನ್ನು ಮತ್ತು ರಸಗುಲ್ಲಾಗಳನ್ನು ಸವಿಯಬಹುದು.