ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯವು ಲಾಲ್‍ಘಡ್ ಅರಮನೆಯ ಮೊದಲನೆ ಅಂತಸ್ತಿನಲ್ಲಿದ್ದು, ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಶ್ರೀ ಸಾದುಲ್ ವಸ್ತು ಸಂಗ್ರಹಾಲಯವೆಂದು ಸಹ ಕರೆಯಲ್ಪಡುವ ಈ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಹಳೆಯ ಭಾವಚಿತ್ರಗಳನ್ನು, ಬೇಟೆ ಪಾರಿತೋಷಕಗಳನ್ನು, ಜಾರ್ಜಿಯಾದ ವರ್ಣಚಿತ್ರಗಳನ್ನು ಮತ್ತು ಕಲಾವಸ್ತುಗಳನ್ನು ಪ್ರದರ್ಶನಕ್ಕೆ ಇಡಲ್ಪಟ್ಟಿವೆ. ಮೂಲತಃ ಇದೊಂದು ಕಲಾಶಾಲೆ. ಇದನ್ನು ಬೀಕನೇರಿನ ಯಶಸ್ವಿ ಅರಸರಾದ ಗಂಗಾ ಸಿಂಗ್ , ಸಾದುಲ್ ಸಿಂಗ್ ಮತ್ತು ಕರ್ನಿ ಸಿಂಗ್‍ರಿಗಾಗಿ ನಿರ್ಮಿಸಲಾಗಿತ್ತು.ಈ ವಸ್ತು ಸಂಗ್ರಹಾಲಯದಲ್ಲಿ ಬೀಕನೇರಿನ ಹಿಂದಿನ ಪ್ರಸಿದ್ಧ ಅರಸರ ವೀರೋಚಿತ ಪ್ರಸಂಗಗಳನ್ನು ಮತ್ತು ಜೀವನ ಚರಿತ್ರೆಗಳ ಕುರಿತಾದ ವಸ್ತುಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ರಾಜರ ವೀರೋಚಿತ ಪ್ರಸಂಗಗಳಿಗಾಗಿಯೆ ಒಂದು ಪ್ರತ್ಯೇಕ ವಿಭಾಗವನ್ನು ಅರ್ಪಿಸಲಾಗಿದೆ. ಈ ವಸ್ತು ಸಂಗ್ರಹಾಲಯವು ವೀಕ್ಷಕರಿಗಾಗಿ ಸೋಮವಾರದಿಂದ ಶನಿವಾರದವರೆಗೆ (ಬೆಳಗ್ಗೆ 10 ರಿಂದ 5 ರವರೆಗೆ) ತೆರೆದಿರುತ್ತದೆ.


Click it and Unblock the Notifications